More

    ನಾನ್‌ಸ್ಟಾಪ್ ಹಾಡುಗಳಿಗೆ ಕುಣಿದ ಅಭಿಮಾನಿಗಳು

    ಕನಕಗಿರಿ: ಕನಕಗಿರಿ ಉತ್ಸವದ ಉದ್ಘಾಟನಾ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ನಡೆದ ನಾನ್‌ಸ್ಟಾಪ್ ಹಿಟ್ ಸಾಂಗ್ಸ್‌ಗೆ ನೆರೆದಿದ್ದ ಯುವಕರು ಕುಣಿದು ಕುಪ್ಪಳಿಸಿದರು.

    ಇದನ್ನು ಓದಿ:ಸಂಗೀತ -ಸಾಹಿತ್ಯ ನಡುವೆ ವಿಶೇಷ ಬೆಸುಗೆ

    ಅರ್ಜುನ್ ಇಟಗಿ, ಹರ್ಷಿಕಾ ಪೂಣಚ್ಚ ಬಳಿಕ ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮದ ಭರವಸೆ ಇಟ್ಟಿದ್ದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು. ಆದರೆ, ಆಲ್ ಒಕೆ ಕಾರ್ಯಕ್ರಮದ ಬಳಿಕ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ತಂಡದ ಕಾರ್ಯಕ್ರಮಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ಸಂಗೀತದ ರಸದೌತಣವೇ ದೊರೆಯಿತು.


    ಎಸ್‌ಪಿ ಸಾಂಗ್ಲಿಯಾನ ಚಿತ್ರದ ಗೀತಾಂಜಲಿ, ಒರಟ ಚಿತ್ರದ ಕಣ್ಣಲ್ಲಿ ಕಣ್ಣನಿಟ್ಟು ಹಾಡು, ಹನುಮಂತನ ಚುಟು ಚುಟು ಅಂತೈತಿ ಹಾಡಿನೊಂದಿಗೆ ನೃತ್ಯ ಎಲ್ಲರ ಮನ ಸೆಳೆಯಿತು. ಕೊನೆಗೆ ರಾಜೇಶ್ ಕೃಷ್ಣನ್ ನಾನ್ ಸ್ಟಾಪ್ ಹಿಟ್ ಸಾಂಗ್ಸ್ ನೆರೆದಿದ್ದ ಯುವಕರು ಹುಚ್ಚೆದ್ದು ಕುಣಿದರು. ನಂತರ ಸವಿತಕ್ಕನ ಜನಪದ ಕಾರ್ಯಕ್ರಮ ನಡೆದಾಗ ಇಂತಹ ಕಾರ್ಯಕ್ರಮಗಳು ಮೊದಲೇ ನಡೆಸಬೇಕಿತ್ತು ಎನ್ನುವ ಮಾತುಗಳು ವೀಕ್ಷಕರಿಂದ ಕೇಳಿಬಂತು.


    ಬಿಗ್‌ಬಾಸ್ ಖ್ಯಾತಿ ತನಿಷಾ ಕುಪ್ಪಂಡ ನೃತ್ಯ ರೂಪಕ ನಡೆದ ಬಳಿಕ ವೇದಿಕೆ ಕುರಿತು ಮಾತನಾಡುವಾಗ ನೆರೆದಿದ್ದ ಯುವಕರು ಹಲವು ಬಾರಿ ವರ್ತೂರ್, ವರ್ತೂರ್ ಎಂದು ಘೋಷಣೆ ಕೂಗಿದರು.

    ಇದಕ್ಕೆ ಪ್ರತಿಕ್ರಿಯಿಸಿದ ತನಿಷಾ ನನಗೆ ಇರೋ ಅತೀ ಆಪ್ತ ಗೆಳೆಯರನ್ನು ಯಾರು ಕೇಳುತ್ತಿಲ್ಲ. ಆದರೆ, ಆಯಪ್ಪ ಇರೋ ಬ್ಯುಸಿಗೆ ನನಗೆ ಫೋನ್‌ನಲ್ಲಿ ಸಿಗುತ್ತಿಲ್ಲ. ಇನ್ನು ನಿಮಗೆ ಎಲ್ಲಿಂದ ತಂದು ಕೊಡಲಿ ಎಂದರು. ಕರಿಮಣಿ ಮಾಲೀಕ ಯಾರು ಎನ್ನುವ ನಿರೂಪಕರ ಪ್ರಶ್ನೆಗೆ ‘ಇನ್ನು ಸಿಕ್ಕಿಲ್ಲ. ಸಿಕ್ಕಿದರೆ ನಾನೇ ಬಹಿರಂಗಪಡಿಸುವೆ’ ಎಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts