More

    ಸಂಗೀತ -ಸಾಹಿತ್ಯ ನಡುವೆ ವಿಶೇಷ ಬೆಸುಗೆ

    ದಾಂಡೇಲಿ: ಸಾಹಿತ್ಯ, ಸಂಗೀತದ ನಡುವೆ ವಿಶೇಷವಾದ ಬೆಸುಗೆಯಿದೆ. ಸ್ವರ ಜೋಡಣೆಯ ಸಂಗೀತದಿಂದ ಸಾಹಿತ್ಯದ ಕೃಷಿ ಇನ್ನೂ ಫಲವತ್ತಾಗಿ ಬೆಳೆಯುತ್ತದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಡಾ. ಚಿಂತಾಮಣಿ ಕೊಡ್ಲೆಕೆರೆ ಅಭಿಪ್ರಾಯಪಟ್ಟರು.

    ನಗರದ ಕಾರ್ಮಿಕ ಭವನದ ದಿ. ಹರೀಶ ನಾಯ್ಕ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಸಿ ಅವರು ಮಾತನಾಡಿದರು. ದಾಂಡೇಲಿ ತಾಲೂಕಿನ ಎರಡನೇಯ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕೆ ಖ್ಯಾತ ತಬಲಾ ವಾದಕ ಕೆ. ಎಲ್ ಜಮಾದಾರರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು ಅತ್ಯಂತ ಸೂಕ್ತ ನಿರ್ಧಾರ ಎಂದರು.

    ಸಮ್ಮೇಳನ ಅಧ್ಯಕ್ಷ, ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ತಬಲಾ ವಾದಕ ಕೆ.ಎಲ್ ಜಮಾದಾರ ಮಾತನಾಡಿ, ಬಾಲ್ಯದಿಂದ ಕಷ್ಟದ ದಿನಗಳನ್ನು ಎದುರಿಸಿ ಕಲಿತ ತಬಲಾ ವಾದನ ಕಲೆ ಜೀವನದಲ್ಲಿ ಸಾವಿರಾರು ಪ್ರಶಸ್ತಿಗಳ ಜತೆ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲಿಯುವಂತೆ ಮಾಡಿದೆ ಎಂದರು.
    ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಡಾ. ಆರ್.ಜಿ ಹೆಗಡೆ ಧ್ವಜವನ್ನು ಹಸ್ತಾಂತರಿಸಿದರು. ಕೆ.ಎಲ್ ಜಮಾದಾರ ಹಾಗೂ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರನ್ನು ಸನ್ಮಾನಿಸಲಾಯಿತು.

    ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ಆಶಯ ನುಡಿ ನುಡಿದರು. ಕಸಾಪ ಜಿಲ್ಲಾಧ್ಯಕ್ಷ ಮುರ್ತುಜಾ ಆನೆಹೊಸೂರ, ನಗರಸಭೆಯ ಪೌರಾಯುಕ್ತ ರಾಜಾರಾಂ ಪವಾರ, ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ, ಕರ್ನಾಟಕ ಸಂಘದ ಅಧ್ಯಕ್ಷ ಯು.ಎಸ್. ಪಾಟೀಲ, ಕಾಗದ ಕಾರ್ಖಾನೆಯ ಸಂಪರ್ಕ ಅಧಿಕಾರಿ ಕೆ.ಜಿ. ಗಿರಿರಾಜ, ಹಿರಿಯ ಸಾಹಿತಿ ದುಂಡಪ್ಪ ಗೊಳೂರ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಸ್ವಾಗತಿಸಿದರು. ರತ್ನದೀಪ ದ್ವಾರಗಳನ್ನು ಪರಿಚಯಿಸಿದರು, ಆಶಾ ಭಂಡಾರಿ ನಿರೂಪಿಸಿದರು. ಗೌರವ ಅಧ್ಯಕ್ಷ ಪ್ರವೀಣ ನಾಯ್ಕ ವಂದಿಸಿದರು.

    ಧ್ವಜಾರೋಹಣ

    ಪರಿಷತ್ತು, ನಾಡ ಧ್ವಜಾರೋಹಣವನ್ನು ತಹಸೀಲ್ದಾರ್ ಎಂ.ಎನ್ ಮಠದ ನೆರವೇರಿಸಿದರು. ಕಿತ್ತೂರ ಚನ್ನಮ್ಮ ವೃತ್ತದಿಂದ ಭವ್ಯ ಮೆರವಣಿಗೆಯಲ್ಲಿ ಸಮ್ಮೇಳನ ಅಧ್ಯಕ್ಷ ಕೆ.ಎಲ್. ಜಮಾದಾರರನ್ನು ಸಮ್ಮೇಳನದ ಸಭಾಂಗಣಕ್ಕೆ ಕರೆ ತರಲಾಯಿತು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಜಾಂಜ್ ಸಂಗೀತ ತಂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಿತ್ತೂರ ಚನ್ನಮ್ಮ, ಬಸವೇಶ್ವರ, ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts