More

    ರಾಣ ಅಬ್ಬರಿಸಲಿಲ್ಲ; ದಿಲ್​ ಪಸಂದ್​ ರುಚಿಸಲಿಲ್ಲ … ನವೆಂಬರ್​ ಚಿತ್ರಗಳ ಹಣೆಬರಹ ಇದು

    ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ಚಂದನವನದಲ್ಲಿ 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಗೆದ್ದಿದ್ದು ಯಾವು, ಜನರಿಗೆ ಇಷ್ಟವಾಗಿದ್ದು ಯಾವುದು ಎಂದರೆ, ಉತ್ತರ ಸಿಗುವುದು ಕಷ್ಟ.

    ಇದನ್ನೂ ಓದಿ: ‘ಟಗರು ಪಲ್ಯ’ ಚಿತ್ರಕ್ಕೆ ‘ನೆನಪಿರಲಿ’ ಪ್ರೇಮ್​ ಮಗಳು ಅಮೃತಾ ನಾಯಕಿ

    ನವೆಂಬರ್​ನಲ್ಲಿ ದೊಡ್ಡ ಸ್ಟಾರ್​ಗಳ ಯಾವುದೇ ಚಿತ್ರವಿರಲಿಲ್ಲ. ಹಾಗೆಯೇ, ಬೇರೆ ಭಾಷೆಗಳಿಂದಲೂ ಯಾವುದೇ ಪೈಪೋಟಿ ಇರಲಿಲ್ಲ. ಹಾಗಾಗಿ. ನವೆಂಬರ್​ನಲ್ಲಿ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ.
    ಝೈದ್​ ಖಾನ್​ ಅಭಿನಯದ ‘ಬನಾರಸ್​’, ‘ಕಂಬ್ಳಿಹುಳ’, ‘ಸೆಪ್ಟೆಂಬರ್​ 13’, ‘ಯಲ್ಲೋ ಗ್ಯಾಂಗ್ಸ್​’, ‘ರಾಣಾ’, ‘ದಿಲ್​ ಪಸಂದ್​’, ‘ಹುಬ್ಬಳ್ಳಿ ಧಾಭಾ’. ‘ಓ’, ‘ಖಾಸಗೀ ಪುಟಗಳು’, ‘ರೆಮೋ’, ‘ನಹೀ ಜ್ನಾನೇನ ಸದೃಶಂ’, ‘ಕುಳ್ಳನ ಹೆಂಡತಿ’, ‘ಅಬ್ಬರ’, ‘ಸದ್ದು ವಿಚಾರಣೆ ನಡೆಯುತ್ತಿದೆ’, ‘ತ್ರಿಬಲ್​ ರೈಡಿಂಗ್​’, ‘ಮಠ’, ‘ದಿ ಫಿಲಂಮೇಕರ್​’, ‘ಆವರ್ತ’ ಮುಂತಾದ ಚಿತ್ರಗಳು ಬಿಡುಡೆಯಾಗಿವೆ.

    ಈ ಪೈಕಿ, ‘ರೆಮೋ’ ಮತ್ತು ‘ತ್ರಿಬಲ್​ ರೈಡಿಂಗ್​’ ಚಿತ್ರಗಳ ಬಗ್ಗೆ ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಈ ಚಿತ್ರಗಳು ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದವು. ಹಾಗಾಗಿ, ಈ ಚಿತ್ರಗಳು ಬಾಕ್ಸ್​ ಆಫೀಸ್​​ನಲ್ಲಿ ಗೆಲ್ಲುತ್ತವೋ, ಇಲ್ಲವೋ ಎಂಬ ವಿಷಯ ಇನ್ನೆರೆಡು ದಿನಗಳಲ್ಲಿ ಸ್ಪಷ್ಟವಾಗಲಿವೆ.

    ಮಿಕ್ಕಂತೆ, ಮೇಲೆ ಹೇಳಿದ ಯಾವುದೇ ಚಿತ್ರ ಸಹ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ‘ಬನಾರಸ್​’ ಮತ್ತು ‘ಕಂಬ್ಳಿಹುಳ’ ಚಿತ್ರಗಳ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾದರೂ, ಅದರಿಂದ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಸಹಾಯವಾಗಿಲ್ಲ. ‘ರಾಣ’, ‘ಅಬ್ಬರ’, ‘ದಿಲ್​ ಪಸಂದ್​’ ಚಿತ್ರಗಳ ಬಗ್ಗೆ ಒಂದಿಷ್ಟು ನಿರೀಕ್ಷೆ ಇತ್ತಾದರೂ, ಈ ಚಿತ್ರಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ.

    ಇದನ್ನೂ ಓದಿ: ನೋವಿನಿಂದ ಹೊರಬಂದ ವೈಷ್ಣವಿ ಗೌಡ; ಕೈ ಮೇಲೆ ರೈಸಿಂಗ್​ ವುಮನ್​ ಚಿಹ್ನೆಯ ಟ್ಯಾಟೂ …

    ಒಂದು ಕಡೆ ನವೆಂಬರ್​ನಲ್ಲಿ ಬಿಡುಗಡೆಯಾದ ಹೊಸ ಚಿತ್ರಗಳು ಸೋತರೂ, ಸೆಪ್ಟೆಂಬರ್​ ಮತ್ತು ಅಕ್ಟೋಬರ್​ನಲ್ಲಿ ಬಿಡುಗಡೆಯಾದ ‘ಕಾಂತಾರ’ ಮತ್ತು ‘ಗಂಧದ ಗುಡಿ’ ಚಿತ್ರಗಳಿಗೆ ನವೆಂಬರ್​ನಲ್ಲೂ ಬೇಡಿಕೆ ಇತ್ತು ಮತ್ತು ಬಹಳಷ್ಟು ಪ್ರೇಕ್ಷಕರು ಈ ಚಿತ್ರಗಳನ್ನು ಕಣ್ತುಂಬಿಕೊಂಡರು.

    ಯುವ ರೈತನ ಜತೆ ಸಪ್ತಪದಿ ತುಳಿದ ಅದಿತಿ ಪ್ರಭುದೇವ: ನವಜೋಡಿಗೆ ಶುಭಕೋರಿದ ಗಣ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts