More

    ಈ ಗ್ರಾಮದಲ್ಲಿ ಯಾರೊಬ್ಬರು ನಾನ್​ ವೆಜ್​ ಸೇವಿಸುವುದಿಲ್ಲ! ಒಂದು ವೇಳೆ ಸೇವಿಸಿದ್ರೆ ಇದು ನಡೆದೇ ನಡೆಯುತ್ತಂತೆ

    ಭುವನೇಶ್ವರ್: ತಾಂತ್ರಿಕವಾಗಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರು ಇಂದಿಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆ ಒಡಿಶಾದ ಈ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿದೆ.

    ಬೆಂಟಾಸಾಲಿಯಾ ಗ್ರಾಮದಲ್ಲಿ ಯಾರೊಬ್ಬರು ಕೂಡ ಮಾಂಸಾಹಾರ (ನಾನ್​ ವೆಜ್)​ ತಿನ್ನುವುದಿಲ್ಲ. ನಾನ್​ ವೆಜ್​ ಸೇವಿಸಿದರೆ, ದುರಾದೃಷ್ಟ ವಕ್ಕರಿಸಿಕೊಳ್ಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ನಾನ್​ ವೆಜ್​ ಸೇವಿಸಿದ್ದಲ್ಲಿ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ ಅಥವಾ ಒಂದು ನಿರ್ದಿಷ್ಟ ಅವಧಿಯವರೆಗೆ ಕೆಟ್ಟ ಸಮಯವನ್ನು ಎದುರಿಸಬೇಕಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

    ಈ ನಂಬಿಕೆ ಎಷ್ಟು ಪ್ರಬಲವಾಗಿದೆ ಅಂದರೆ ಬೆಂಟಾಸಾಲಿಯಾದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಸಸ್ಯಾಹಾರಿ ಆಹಾರವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟದಲ್ಲಿಯೂ ಮೊಟ್ಟೆಯ ಬದಲು ಬಾಳೆಹಣ್ಣು ಕೊಡಲಾಗುತ್ತದೆ.

    ಗ್ರಾಮದ ನಿವಾಸಿ ತಾರಾಬತಿ ದಾಶ್ ಅವರು ತಮ್ಮ ಪೂರ್ವಜರ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಬಹು ದಿನದಿಂದಲೂ ಮಾಂಸಾಹಾರವನ್ನು ತ್ಯಜಿಸಿರುವುದಾಗಿ ಹೇಳಿದ್ದು, ಉದ್ಯೋಗ ಅಥವಾ ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ಹೊರಗೆ ಕಾಲಿಡುವ ಮಕ್ಕಳು ಈ ಸಂಪ್ರದಾಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕುಟುಂಬದಲ್ಲಿ ಮದುವೆ ಅಥವಾ ಯಾವುದೇ ರೀತಿಯ ಕಾರ್ಯಕ್ರಮವಿದ್ದರೂ ಮಾಂಸಾಹಾರ ಸೇವಿಸುವುದಿಲ್ಲ. ಈ ಗ್ರಾಮದಲ್ಲಿ ವಾಸಿಸುವ ಪ್ರಾಣಿಗಳು, ಬೆಕ್ಕುಗಳು ಅಥವಾ ನಾಯಿಗಳು ಸಹ ಸಸ್ಯಾಹಾರಿಗಳು ಎಂದು ಹೇಳಿದರು.

    ನಾವು ಗೋಪಾಲ್ ವೈಷ್ಣವ್ ವಂಶಕ್ಕೆ ಸೇರಿದವರು. ನಾವು ಅಂತಹ ಆಹಾರವನ್ನು ಸೇವಿಸಿದರೆ, ನಮ್ಮ ಕಣ್ಣು ಮತ್ತು ಕಿವಿಗಳು ನಾಶವಾಗುತ್ತವೆ ಮತ್ತು ಯಾರಾದರೂ ನಮ್ಮ ಗ್ರಾಮಕ್ಕೆ ಯಾವುದೇ ರೀತಿಯ ಮಾಂಸಾಹಾರಿ ವಸ್ತುಗಳನ್ನು ತಂದರೆ, ಹಾವು ಕಚ್ಚುತ್ತದೆ. ನೀವು ಅದನ್ನು ಪರೀಕ್ಷಿಸಬಹುದು. ನಮ್ಮ ಅಡುಗೆಮನೆಯಲ್ಲಿ ಯಾವುದೇ ರೀತಿಯ ವಿಚಲನ ಕಂಡುಬಂದರೆ, ಖಂಡಿತವಾಗಿಯೂ ಹಾವು ಕಾಣಿಸಿಕೊಳ್ಳುತ್ತದೆ ಎಂದು ಈ ಗ್ರಾಮದ ನಿವಾಸಿ ಶಶಿ ಪ್ರವ ದಶ್ ಈ ಸಂಗತಿಯನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ನಾವು ರಾಧಾ ಕೃಷ್ಣನ ಭಕ್ತರು. ನಾವು ವರ್ಷವಿಡೀ ಹವನಗಳು, ಪೂಜೆಗಳು ಮತ್ತು ಕೀರ್ತನೆಗಳನ್ನು ನಡೆಸುತ್ತೇವೆ. ನಾವು ನಮ್ಮ ಹೆಣ್ಣು ಮಕ್ಕಳನ್ನು ಬೇರೆ ಕುಲಗಳಲ್ಲಿ ಮದುವೆಗೆ ಕೊಡುವುದಿಲ್ಲ ಮತ್ತು ನಮ್ಮ ಹಳ್ಳಿಯಲ್ಲಿ ಬೇರೆ ಬೇರೆ ಸಮುದಾಯದ ಹುಡುಗಿ ಮದುವೆಯಾದರೆ, ಅವಳು ನಮ್ಮ ಸಂಪ್ರದಾಯಗಳನ್ನು ಅನುಸರಿಸುತ್ತಾಳೆ. ಈ ಸಂಪ್ರದಾಯವನ್ನು ಈ ಗ್ರಾಮದ ಪ್ರಾರಂಭದಿಂದಲೂ ನಾವೆಲ್ಲರೂ ಅನುಸರಿಸುತ್ತಿದ್ದೇವೆ ಎಂದು ಗ್ರಾಮದ ಅರ್ಚಕ ಭ್ರಮರ್ ದಾಶ್ ಹೇಳಿದ್ದಾರೆ. (ಏಜೆನ್ಸೀಸ್​)

    ಮಂಗಳೂರು ಆಟೋ ಸ್ಫೋಟ ಪ್ರಕರಣ: ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ ಪ್ರವೀಣ್ ಸೂದ್

    ಕೋಮಲ್​ ಯಾಕೆ ಇಷ್ಟು ದಿನ ಚಿತ್ರರಂಗದಿಂದ ದೂರ ಇದ್ದರು? ಜಗ್ಗೇಶ್​ ಹೇಳುತ್ತಾರೆ ಕೇಳಿ …

    ಆಶಿಕಾ ಕುಡಿದು ತೂರಾಡಿದ್ದು ನಿಜಾನಾ? ಸತ್ಯಾಂಶ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts