More

    ಮಂಗಳೂರು ಆಟೋ ಸ್ಫೋಟ ಪ್ರಕರಣ: ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ ಪ್ರವೀಣ್ ಸೂದ್

    ಬೆಂಗಳೂರು: ಮಂಗಳೂರು ನಗರದ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ರೀತಿಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ ಮತ್ತು ಐಜಿಪಿ ಪ್ರವೀಣ್​ ಸೂದ್​ ಸ್ಪಷ್ಟನೆ ನೀಡಿದ್ದು, ಇದೊಂದು ಭಯೋತ್ಪಾದಕ ಕೃತ್ಯ ಎಂದು ತಿಳಿಸಿದ್ದಾರೆ.

    ಡಿಜಿಪಿ ಅಧಿಕೃತ ಟ್ವಿಟರ್​ ಖಾತೆಯಿಂದ ಟ್ವೀಟ್​ ಮಾಡಿದ್ದು​, ಇದೀಗ ತಾನೇ ಇದು ಖಚಿತವಾಗಿದೆ. ಇದು ಆಕಸ್ಮಿಕವಲ್ಲ ವಿಧ್ವಂಸಕ ಕೃತ್ಯ ನಡೆಸಲು ಉದ್ಧೇಶಪೂರ್ವಕವಾಗಿ ನಡೆಸಿರುವ ಸ್ಫೋಟವಾಗಿದೆ. ಈ ಘಟನೆ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಘಟನೆ ಹಿನ್ನೆಲೆ ಏನು?
    ನಾಗುರಿಯಿಂದ ಪಂಪ್‌ವೆಲ್ ಕಡೆಗೆ ಆಟೋರಿಕ್ಷಾ ಸಂಚರಿಸುತ್ತಿತ್ತು. ನಾಗುರಿಯಲ್ಲಿ ಆಟೋ ರಿಕ್ಷಾ ಏರಿದ್ದ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಈ ಸಂದರ್ಭ ದಟ್ಟ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ಗಾಯವಾಗಿದೆ. ಆಟೋ ಚಾಲಕನಿಗೂ ತರಚು ಗಾಯವಾಗಿದೆ. ಅಟೋ ಒಳಭಾಗ ಸುಟ್ಟು ಹೋಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಬ್ದ ಹಾಗೂ ದಟ್ಟ ಹೊಗೆ ಒಮ್ಮಿಂದೊಮ್ಮೆಲೆ ಹೊಮ್ಮಿದ ಪರಿಣಾಮ ಸ್ಥಳೀಯರು ಒಂದು ಕ್ಷಣ ಗಾಬರಿಗೊಂಡಿದ್ದು, ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

    ಬಿಜೆಪಿ ಮಾಜಿ ಸಚಿವರ ಕಾರನ್ನು ಅಡ್ಡಗಟ್ಟಿದ ಟೀ ವ್ಯಾಪಾರಿ: ಬಾಕಿ ಹಣ ಕೊಟ್ಟು ತೆರಳುವಂತೆ ಪಟ್ಟು, ವಿಡಿಯೋ ವೈರಲ್​

    ಮದುವೆಗೆ ಆಹ್ವಾನಿಸಿದ ಕೇರಳ ಜೋಡಿಯ ವೆಡ್ಡಿಂಗ್​ ಕಾರ್ಡ್ ಶೇರ್​ ಮಾಡಿ ಶುಭ ಕೋರಿದ ಇಂಡಿಯನ್​ ಆರ್ಮಿ!

    PHOTO GALLERY | ವಿಜಯಾನಂದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದ ಸಂಭ್ರಮದ ಕ್ಷಣಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts