More

    ಮಾಂಸಹಾರ ಸೇವಿಸಿ ಸುತ್ತೂರು ಮಠಕ್ಕೆ ಭೇಟಿ; ಸಿಎಂ ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಹೀಗಿದೆ

    ಬೆಂಗಳೂರು: ಮುಖ್ಯಮಂತ್ರಿ ಮಾಂಸಹಾರ ಸೇವಿಸಿ ಸುತ್ತೂರು ಮಠದ ಗದ್ದುಗೆಗೆ ಭೇಟಿ ನೀಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಇಲ್ಲಿ ಕೇಳಬೇಡಿ ಎಂದು ಗರಂ ಆಗಿದ್ದಾರೆ.

    ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಊಟ, ತಿಂಡಿ ತಿನ್ನೋದು, ಬಟ್ಟೆ ಹಾಕುವುದರ ಬಗ್ಗೆ ಮಾತಾಡಕ್ಕಾಗುತ್ತಾ. ಬಡವರ ಸಮಸ್ಯೆ ಹಾಗೂ ನಿರುದ್ಯೋಗ ಇದೆಲ್ಲ ಮಾತಾಡೋಣ. ಅದನ್ನು ಬಿಟ್ಟು ಮಾಂಸ ಸೇವಿಸಿ ಮಠಕ್ಕೆ ಭೇಟಿ ಹೀಗೆಲ್ಲಾ ಕೇಳಬೇಡಿ ಎಂದು ಹೇಳಿದ್ದಾರೆ.

    ಬಿಜೆಪಿ ಆರೋಪವೇನು

    ಅನುದಾನ ತಾರತಮ್ಯ ಖಂಡಿಸಿ ಬುಧವಾರ ದೆಹಲಿಯ ಜಂತರ್​ಮಂತರ್​ ರಾಜ್ಯ ಕಾಂಗ್ರೆಸ್​ ಪ್ರತಿಭಟನೆಯನ್ನು ಆಯೋಜಿಸಿತ್ತು. ಪ್ರತಿಭಟನೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮನೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಔತಣಕೂಟವನ್ನು ಆಯೋಜಿಸಲಾಗಿತ್ತು. ಔತಣಕೂಟದಲ್ಲಿ ಭಾಗಿಯಾಗಿದ್ದ ಸಿಎಂ ಬಳಿಕ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ ಸುತ್ತೂರು ಮಠದ ಜಾತ್ರೆಯಲ್ಲಿ ಭಾಗಿಯಾಗಿದ್ದರು.

    ಇದನ್ನೂ ಓದಿ: ಯುಪಿಎ ಬಿಟ್ಟುಹೋದ ಸವಾಲುಗಳನ್ನು ಎನ್​ಡಿಎ ಮೆಟ್ಟಿನಿಂತಿದೆ; ಶ್ವೇತಪತ್ರ ಮಂಡಿಸಿದ ಕೇಂದ್ರ ಸರ್ಕಾರ

    ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಮಾಂಸಹಾರ ಸೇವಿಸಿ ಸುತ್ತೂರು ಮಠದ ಗದ್ದುಗೆಗೆ ಭೇಟಿ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ಆರೋಪಿಸಿದೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ಕೋಲಾಹಲಕ್ಕೆ ನಾಂದಿ ಹಾಡಿದೆ.

    ಇದೇ ಮೊದಲಲ್ಲ

    ಈ ಹಿಂದೆ 2018ರಲ್ಲಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಂಸದ ಊಟ ಮಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಆಪಾದನೆಯಿಂದ ವಿವಾದಕ್ಕೆ ಸಿಲುಕಿದ್ದರು. ಈ ವಿವಾದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು ಮತ್ತು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಿಣಾಮ ಬೀರಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts