More

    ಯಾರೂ ಸೇಫ್ ಅಲ್ಲ ಈ ಕರೊನಾದಿಂದ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

    ನ್ಯೂಯಾರ್ಕ್​: ಮಹಾಮಾರಿ ಕರೊನಾ ವೈರಸ್​ ಸೋಂಕಿನಿಂದ ಯಾರೊಬ್ಬರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

    ಹೊಸ ಅಂಕಿ-ಅಂಶ ಪ್ರಕಾರ ಕರೋನಾ ಸೋಂಕಿತರ ಪ್ರಕರಣ ದಿನದಿಂದ ದಿನಕ್ಕೇ ಹೆಚ್ಚಾಗುತ್ತಲೇ ಇದೆ. ಇದರ ಬೆನ್ನಲ್ಲೇ ವೈಟ್​ಹೌಸ್​ನ ಕರೊನಾ ವೈರಸ್​ ಟಾಸ್ಕ್​ಫೋರ್ಸ್​ ಅಮೆರಿಕನ್ನರಿಗೆ ಎಚ್ಚರಿಕೆಯನ್ನು ನೀಡಿದ್ದು, ಪ್ರತಿಯೊಂದು ವಯೋಗುಂಪಿಗೂ ಕರೊನಾ ವೈರಸ್​ ಸಾಂಕ್ರಾಮಿಕ ಮಟ್ಟ ಅತ್ಯಧಿಕವಾಗಿರುತ್ತದೆ. ಹೀಗಾಗಿ ಯಾರೊಬ್ಬರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ.

    ಪ್ರತಿಯೊಬ್ಬರಲ್ಲಿನ ರೋಗದ ಲಕ್ಷಣಗಳನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತಿದೆ. ಅದರನ್ವಯ 20 ವರ್ಷ ಒಳಗಿನವರಲ್ಲೂ ಗಂಭೀರವಾದ ಕಾಯಿಲೆ ಬರುವ ಸಾಧ್ಯತೆ ಇದೆ ಎಂದಿದೆ. ಆದರೆ, ಬಹುತೇಕರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಟಾಸ್ಕ್​ಫೋರ್ಸ್​ನ ಸಂಯೋಜಕಿ ದೆಬೊರಾಹ್​ ಬರ್ಕ್ಸ್​ ಶುಕ್ರವಾರ ತಿಳಿಸಿದ್ದಾರೆ.

    ಇನ್ನು ಹೊಸ ಟ್ರೆಂಡ್​ ಪ್ರಕಾರ ಮಹಿಳೆಯರಿಗಿಂತ ಪುರುಷರಲ್ಲಿ ಮರಣ ಪ್ರಮಾಣ ದ್ವಿಗುಣವಾಗಿದೆ ಎಂದು ಎಚ್ಚರಿಸಿದ್ದಾರೆ.

    ಕರೊನಾ ವೈರಸ್​ನಿಂದ ಮೃತರ ಹಾಗೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಗಡೆ ಸುತ್ತಾಡುವುದಕ್ಕೆ ಕಡಿವಾಣ ಹಾಕಿ ಮನೆಯಲ್ಲೇ ಉಳಿದುಕೊಳ್ಳುವ ನಿರ್ಧಾರವನ್ನು ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್​ನಲ್ಲಿ ಘೋಷಿಸಿದ ದಿನದಲ್ಲೇ ಈ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.

    ಸದ್ಯ ಅಮೆರಿಕದಲ್ಲಿ 200ಕ್ಕಿಂತಲೂ ಹೆಚ್ಚು ಮಂದಿ ಮೃತರಾಗಿದ್ದಾರೆ. ನ್ಯೂಯಾರ್ಕ್​ನಲ್ಲಿಯೇ ಅತಿಹೆಚ್ಚು ಪ್ರಕರಣಗಳು ವರದಿಯಾಗಿವೆ. ಸೌಮ್ಯ ಮತ್ತು ಸಾಧಾರಣ ಕಾಯಿಲೆಗಳನ್ನು ಸಾಂಕ್ರಾಮಿಕ ರೋಗಗಳೆಂದು ಭಾವಿಸಬೇಡಿ. ಮನೆಯಲ್ಲಿ ಉಳಿಯುವುದು ಮುಖ್ಯವಲ್ಲ, ಬದಲಾಗಿ ವೈರಸ್​ ವಿರುದ್ಧ ಹೋರಾಡುವ ಪ್ರತಿರೋಧಕ ವ್ಯವಸ್ಥೆಯನ್ನು ವೃದ್ಧಿಸಿಕೊಳ್ಳಿ ಎಂದಿದ್ದಾರೆ.

    ಸಾಧ್ಯವಾದಷ್ಟು ಮನೆಯಲ್ಲೇ ಉಳಿದುಕೊಳ್ಳಿ ಎಂದು ಕ್ಯಾಲಿಫೋರ್ನಿಯಾದ ಜನರಿಗೆ ಆದೇಶಿಸಲಾಗಿದೆ. ಶಾಲಾ ಕಾಲೇಜುಗಳು ಸೇರಿದಂತೆ ಅನೇಕ ಕಚೇರಿಗಳನ್ನು ಟ್ರಂಪ್​ ಸರ್ಕಾರ ಬಂದ್​ ಮಾಡಿದ್ದು, ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆ. (ಏಜೆನ್ಸೀಸ್​)

    ಕರೊನಾ​ಗೆ ಬಲಿಯಾದ ಚೀನಾ ವೈದ್ಯನ ಸಾವಿಗೆ ಕ್ಷಮೆಯಾಚಿಸಿದ ಸರ್ಕಾರ: ತನಿಖಾ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

    ಪುಟಾಣಿಗಳು ಬರೆದ್ರು ಕರೊನಾ ಕಾವ್ಯ- ಇಂದು ವಿಶ್ವ ಕಾವ್ಯ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts