More

    ಲಾಕ್‌ಡೌನ್‌: ವಿಷು ಹಬ್ಬಕ್ಕೆ ಶಬರಿಮಲೆಗೆ ನೋ ಎಂಟ್ರಿ

    ತಿರುವನಂತಪುರ: ಲಾಕ್‌ಡೌನ್‌ನಿಂದಾಗಿ ಈಗಾಗಲೇ ಬಾಗಿಲು ಮುಚ್ಚಿರುವ ಶಬರಿಮಲೆಯ ಅಯ್ಯಪ್ಪನ ದರ್ಶನ ಭಾಗ್ಯ ವಿಷು ಹಬ್ಬದಲ್ಲಿಯೂ ಭಕ್ತರಿಗೆ ಸಿಗುವುದಿಲ್ಲ. ಸಾಮಾನ್ಯವಾಗಿ ಏಪ್ರಿಲ್‌ ಮೊದಲ ವಾರದಲ್ಲಿ ಈ ಹಬ್ಬ ನಡೆಯುತ್ತದೆ. ಆದರೆ ಕರೊನಾ ಸೋಂಕಿನ ಭೀತಿ ಇನ್ನೂ ಮುಂದುವರೆದಿರುವ ಕಾರಣ, ಭಕ್ತಾದಿಗಳಿಗೆ ಪ್ರವೇಶ ನೀಡದಂತೆ ದೇವಸ್ಥಾನದ ಆಡಳಿತ ಮಂಡಳಿ ಮಂಗಳವಾರ ನಿರ್ಧಾರ ತೆಗೆದುಕೊಂಡಿದೆ.

    ಈಗಾಗಲೇ ಹಲವಾರು ದಿನಗಳಿಂದ ದೇವಸ್ಥಾನ ಮುಚ್ಚಿರುವ ಕಾರಣ, ಆಡಳಿತ ಮಂಡಳಿಗೆ ಭಾರಿ ಪ್ರಮಾಣದ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಒಂದು ತಿಂಗಳ ಸಂಬಳಕ್ಕೆ ಸಮಾನವಾದ ಹಣವನ್ನು ನೀಡುವಂತೆ ದಿನಗೂಲಿ ನೌಕರರಿಗೆ ಸೂಚಿಸಲಾಗಿದೆ.

    ಈ ಲಾಕ್‌ಡೌನ್‌ ಅವಧಿ ಎಲ್ಲಿಯವರೆಗೆ ಮುಂದುವರಿಯವುದೋ ಎಂಬ ಬಗ್ಗೆ ನಿರ್ದಿಷ್ಟತೆ ಇಲ್ಲದ ಹಿನ್ನೆಲೆಯಲ್ಲಿ, ಹಣಕಾಸಿನ ಬಿಕ್ಕಷ್ಟು ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಆದ್ದರಿಂದ ನೌಕರರಿಗೆ ಈ ಸೂಚನೆ ನೀಡಲಾಗಿದೆ ಎಂದು ಅದರ ಅಧ್ಯಕ್ಷ ಎನ್‌.ವಾಸು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್‌)

    ತಬ್ಲಿಘಿ ಜಮಾತ್​ ಸಂಘಟನೆಯ ಧಾರ್ಮಿಕ ಸಭೆಯನ್ನು ತಾಲಿಬಾನ್​ ಉಗ್ರಕೃತ್ಯಕ್ಕೆ ಹೋಲಿಸಿದ ಮುಕ್ತಾರ್​ ಅಬ್ಬಾಸ್​ ನಖ್ವಿ; ಕ್ಷಮಿಸಲು ಸಾಧ್ಯವೇ ಇಲ್ಲವೆಂದ ಸಚಿವ

    ಸೆಲ್ಫ್​ ಐಸೋಲೇಟ್​ ಒಕೆ..ಆದ್ರೆ ಜತೆಗೆ 20 ಮಹಿಳೆಯರು ಯಾಕೆ?; ಕರೊನಾ ಭಯಕ್ಕೆ ದೇಶವನ್ನೇ ತೊರೆದ ಥೈಲ್ಯಾಂಡ್​ ರಾಜ ಹೋಟೆಲ್​​ನಲ್ಲಿ ಸ್ತ್ರೀಯರೊಂದಿಗೆ ಏನು ಮಾಡ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts