More

    ನಾಳೆ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ: ಕೆಲವೆಡೆ ಈಗಾಗಲೇ ‘ನೋ ಸ್ಟಾಕ್’ ಫಲಕ ಅಳವಡಿಕೆ

    ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಕಮಿಷನ್ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ, ಮಂಗಳವಾರ (ಮೇ 31) ತೈಲ ಖರೀದಿ ಸ್ಥಗಿತಗೊಳಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಜತೆಗೆ ಎಂದಿನಂತೆ ಬಂಕ್‌ಗಳು ಕಾರ್ಯನಿರ್ವಹಿಸಲಿದ್ದು, ವಾಹನ ಸವಾರರಿಗೆ ಇಂಧನ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದೆ.

    2017ರಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಿಗೆ ದ್ವಿಗುಣವಾಗಿರುವ ಹಿನ್ನೆಲೆಯಲ್ಲಿ ಕಮಿಷನ್ ಹೆಚ್ಚಳ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರಂತರವಾಗಿ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಇಂಧನ ಬಳಕೆಯಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಸಾವಿರಾರು ಬಂಕ್ ಮಾಲೀಕರು ಆರ್ಥಿಕ ಸಂಕಷ್ಟ ಅನುಭವಿಸಿದ್ದರು. ಕರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲ ವಹಿವಾಟುಗಳು ಹಿಂದಿನ ಸ್ಥಿತಿಗೆ ಮರಳಿದ್ದರೂ ಬೇಡಿಕೆಗೆ ತಕ್ಕಂತೆ ಇಂಧನ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಆರ್ಥಿಕ ಸಮಸ್ಯೆಗೆ ಸಿಲುಕಿದ್ದೇವೆ. ಇಂಧನ ದರವನ್ನು ಏಕಾಏಕಿ ಇಳಿಕೆ ಮಾಡಿದ್ದರಿಂದ ಗ್ರಾಹಕರಿಗೆ ಒಳಿತಾಗಿದ್ದರೂ ನಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಒಂದು ದಿನ ಮಾತ್ರ ಇಂಧನ ಖರೀದಿಸದೆ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಬಸವೇಗೌಡ ಹೇಳಿದ್ದಾರೆ.

    ಸರ್ಕಾರಿ ಸ್ವಾಮ್ಯದ ಇಂಧನ ಪೂರೈಕೆ ಸಂಸ್ಥೆಗಳು ತೈಲ ಸರಬರಾಜಿಗೆ ಮಿತಿ ಹೇರಿದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಎರಡು ತಿಂಗಳ ಹಿಂದೆ ಇಂಧನ ಅಭಾವ ಉಂಟಾಗಿದ್ದರೂ ಇದುವರೆಗೆ ಬಗೆಹರಿದಿಲ್ಲ. ಬೇಡಿಕೆಗೆ ತಕ್ಕಂತೆ ಬಂಕ್‌ಗಳಿಗೆ ಇಂಧನ ಪೂರೈಸುವಂತೆ ತೈಲ ಕಂಪನಿಗಳ ಜತೆ ಆಹಾರ ಇಲಾಖೆ ಅಧಿಕಾರಿಗಳು ಈಗಾಗಲೆ ಸಭೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಇಂಧನ ಪೂರೈಕೆಗೆ ಮಾಲೀಕರು ಮುಗಂಡವಾಗಿ ಹಣ ಪಾವತಿಸಿದ್ದರೂ ನಿಗದಿತ ಸಮಯದಲ್ಲಿ ತೈಲ ಕಂಪನಿಗಳು, ಬಂಕ್‌ಗಳಿಗೆ ಸಮರ್ಪಕವಾಗಿ ಇಂಧನ ಪೂರೈಸುತ್ತಿಲ್ಲ ಎಂದರು.

    ರಾಜ್ಯದಲ್ಲಿವೆ 5,531 ಪೆಟ್ರೋಲ್ ಬಂಕ್: ಭಾರತದ ಅತಿ ದೊಡ್ಡ ತೈಲೋತ್ಪನ್ನ ಹಾಗೂ ಸಂಸ್ಕರಣಾ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ.(ಐಒಸಿಎಲ್), 2,036, ಭಾರತ್ ಪಟ್ರೋಲಿಯಂ ಕಾರ್ಪೋರೇಷನ್ ಲಿ. (ಬಿಪಿಸಿಎಲ್) 1,208, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಎಚ್‌ಪಿಸಿಎಲ್) 1,800 ಹಾಗೂ ಖಾಸಗಿ 487 ಸೇರಿ ಒಟ್ಟು 5,531 ಪೆಟ್ರೋಲ್ ಬಂಕ್‌ಗಳು ರಾಜ್ಯದಲ್ಲಿವೆ. ಐಒಸಿಎಲ್ ಬಂಕ್‌ಗಳಲ್ಲಿ ಈಗಾಗಲೇ ಇಂಧನ ಸಂಗ್ರಹವಾಗಿದ್ದರೂ ತೈಲ ಪೂರೈಕೆಗೆ ಮಿತಿ ಹೇರಿದ ಹಿನ್ನೆಲೆ ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ನ ಕೆಲ ಬಂಕ್‌ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಧನ ಲಭ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಮಾಲೀಕರು ‘ನೋ ಸ್ಟಾಕ್’ ಫಲಕಗಳನ್ನು ಅಳವಡಿಸಿರುವುದು ಕಂಡುಬಂದಿದೆ.

    ಪೆಟ್ರೋಲ್​ ಬಂಕ್​ಗಳ ಮುಂದೆ ಜನವೋ ಜನ: ನಾಳೆಯೇ ಮುಷ್ಕರ ಎಂದು ಬಂದವರಿಂದಾಗಿ ನೂಕುನುಗ್ಗಲು!

    ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts