More

    ಐಪಿಎಲ್ ಪಂದ್ಯಗಳಿಗೆ ಮಾಧ್ಯಮದವರಿಗೂ ಪ್ರವೇಶವಿಲ್ಲ

    ದುಬೈ: ಕರೊನಾ ವೈರಸ್ ಹಾವಳಿಯಿಂದಾಗಿ ಐಪಿಎಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಈಗಾಗಲೆ ಪ್ರೇಕ್ಷಕರನ್ನು ಸಂಪೂರ್ಣವಾಗಿ ದೂರವಿಡಲಾಗಿದೆ. ಇದೀಗ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮಾಧ್ಯಮ ಮಂದಿಗೂ ಐಪಿಎಲ್ ಪಂದ್ಯಗಳಿಂದ ಕ್ರೀಡಾಂಗಣದೊಳಗೆ ಪ್ರವೇಶ ಅವಕಾಶ ನೀಡಲಾಗುವುದಿಲ್ಲ. ಕ್ರೀಡಾಂಗಣದೊಳಗೆ ಬಂದು ಪಂದ್ಯಗಳನ್ನು ವರದಿ ಮಾಡಲು ಕ್ರೀಡಾ ಪತ್ರಕರ್ತರಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಬಿಸಿಸಿಐ ಶುಕ್ರವಾರ ತಿಳಿಸಿದೆ.

    ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರತಿ ತಂಡ ಪಂದ್ಯಕ್ಕೆ ಪೂರ್ವಭಾವಿಯಾಗಿ ಪಂದ್ಯದ ಮುನ್ನಾದಿನ ಕಡ್ಡಾಯ ಸುದ್ದಿಗೋಷ್ಠಿ ನಡೆಸುವ ನಿಯಮವನ್ನೂ ಬಿಸಿಸಿಐ ಈ ಬಾರಿ ಸಡಿಲಿಸಿದೆ. ಆದರೆ ಪ್ರತಿ ಪಂದ್ಯದ ಬಳಿಕ ಕಡ್ಡಾಯವಾಗಿ ಸುದ್ದಿಗೋಷ್ಠಿ ನಡೆಸಬೇಕಾಗಿದ್ದು, ಆನ್‌ಲೈನ್ ಮೂಲಕ ಕ್ರೀಡಾ ಪತ್ರಕರ್ತರು ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

    ಈ ಬಾರಿ ಪಂದ್ಯ ಅಥವಾ ತಂಡಗಳ ಅಭ್ಯಾಸದ ಬಗ್ಗೆ ವರದಿ ಮಾಡಲು ಯಾವುದೇ ಕ್ರೀಡಾ ಪತ್ರಕರ್ತರಿಗೆ ಕ್ರೀಡಾಂಗಣದೊಳಗೆ ಅವಕಾಶ ನೀಡಲಾಗುತ್ತಿಲ್ಲ. ಆರೋಗ್ಯ ಮತ್ತು ಸುಕರ‌್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ವಿವರಿಸಿದೆ. ಆದರೆ ಬಿಸಿಸಿಐ ಜತೆಗೆ ಹೆಸರು ನೋಂದಾಯಿಸಿಕೊಂಡಿರುವ ಕ್ರೀಡಾ ಪತ್ರಕರ್ತರಿಗೆ ಪ್ರತಿ ಪಂದ್ಯಕ್ಕೆ ಮುನ್ನ ಮತ್ತು ನಂತರ ಪಂದ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಇ-ಮೇಲ್ ಮೂಲಕ ಕಳುಹಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

    ಇದನ್ನೂ ಓದಿ: ಐಪಿಎಲ್​ ಮೊದಲ ಪಂದ್ಯದಲ್ಲೇ ಸಹೋದರರ ಮುಖಾಮುಖಿ, ಇಕ್ಕಟ್ಟಿನಲ್ಲಿ ಮಾಲತಿ ಚಹರ್!

    ಪ್ರತಿ ಪಂದ್ಯದ 35 ಚಿತ್ರಗಳನ್ನು ಬಿಸಿಸಿಐ, ಕ್ರೀಡಾ ಪತ್ರಕರ್ತರಿಗೆ ಕಳುಹಿಸಿಕೊಡಲಿದೆ. ಇದನ್ನು ಸಂಪಾದಕೀಯ ಉದ್ದೇಶಗಳಿಗೆ ಮಾತ್ರ ಬಳಸಬಹುದಾಗಿದೆ ಎಂದು ಬಿಸಿಸಿಐ ತಿಳಿಸಿದೆ.

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts