More

    ಫೆ. 1ರಂದು ಮಂಡಿಸಲಾಗುವ ಬಜೆಟ್​ನಲ್ಲಿ ಅದ್ಭುತ ಘೋಷಣೆಗಳನ್ನು ನಿರೀಕ್ಷಿಸಬಹುದೇ? ಹಣಕಾಸು ಸಚಿವರು ಹೇಳಿದ್ದೇನು…

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಮಧ್ಯಂತರ ಬಜೆಟ್ ಅನ್ನು ‘ವೋಟ್ ಆನ್ ಅಕೌಂಟ್’ ಎಂದೂ ಕರೆಯಲಾಗುತ್ತದೆ. ಏಕೆಂದರೆ, 2024ರ ಏಪ್ರಿಲ್​- ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆಯ ನಡೆಯಲಿರುವುದರಿಂದ ಅವರು 2024-24ನೇ ಹಣಕಾಸು ವರ್ಷಕ್ಕೆ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸುವುದಿಲ್ಲ. ಚುನಾವಣೆ ಅವಧಿಯವರೆಗೆ ಮಾತ್ರ ಸರ್ಕಾರದ ವೆಚ್ಚಗಳನ್ನು ನಿಭಾಯಿಸಲು ಮಧ್ಯಂತರ ಬಜೆಟ್​ ಮಂಡಿಸುತ್ತಾರೆ.

    ಚುನಾವಣೆ ಸಮೀಪಿಸುವುದರಿಂದ ಮತಗಳನ್ನು ಸೆಳೆಯಲು ಆಕರ್ಷಕ, ಜನಪ್ರಿಯ ಯೋಜನೆಗಳನ್ನು ಈ ಮಧ್ಯಂತರ ಬಜೆಟ್​ನಲ್ಲಿ ಘೋಷಿಸುವ ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ, ಈ ಕುರಿತಂತೆ ಸೀತಾರಾಮನ್​ ಅವರು ಹೇಳಿರುವುದು ಬೇರೆಯೇ ಆಗಿದೆ.

    ಫೆಬ್ರವರಿ 1, 2024 ರಂದು ಮಂಡಿಸಲಿರುವ ಬಜೆಟ್ ಯಾವುದೇ “ಅದ್ಭುತ ಘೋಷಣೆ” ಇರುವುದಿಲ್ಲ ಎಂದು ಸೀತಾರಾಮನ್ ಗುರುವಾರ ಹೇಳಿದ್ದಾರೆ, ಏಕೆಂದರೆ ಇದು ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ವೋಟ್ ಆನ್ ಅಕೌಂಟ್ ಆಗಿರುತ್ತದೆ ಎಂದೂ ಅವರು ಹೇಳಿದ್ದಾರೆ.

    ಫೆಬ್ರವರಿ 1, 2024 ರಂದು ಘೋಷಣೆಯಾಗುವ ಬಜೆಟ್ ಕೇವಲ ‘ವೋಟ್ ಆನ್ ಅಕೌಂಟ್’ ಆಗಿರುತ್ತದೆ ಎಂಬುದು ನಿಜ. ಏಕೆಂದರೆ ನಾವು ಚುನಾವಣೆಗೆ ತಯಾರಿ ನಡೆಸುತ್ತೇವೆ. ಹಾಗಾಗಿ ಹೊಸ ಸರ್ಕಾರ ರಚನೆಯಾಗುವವರೆಗಿನ ಸರ್ಕಾರಿ ವೆಚ್ಚವನ್ನು ಮಾತ್ರ ಈ ಬಜೆಟ್​ ಭರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಹಣಕಾಸು ಸಚಿವಾಲಯ ಆಯೋಜಿಸಿದ್ದ ಜಾಗತಿಕ ಆರ್ಥಿಕ ನೀತಿ ವೇದಿಕೆ 2023ರಲ್ಲಿ ಮಾತನಾಡಿದ ಸೀತಾರಾಮನ್, 2024ರ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ದೇಶವು ತಯಾರಿ ನಡೆಸಲಿದೆ ಎಂದು ಹೇಳಿದರು.

    ವೋಟ್ ಆನ್ ಅಕೌಂಟ್ ಮಂಡನೆ:

    ಬ್ರಿಟಿಷ್ ಸಂಪ್ರದಾಯವನ್ನು ಅನುಸರಿಸಿ, ಫೆಬ್ರವರಿ 1 ರ ಬಜೆಟ್ ಅನ್ನು ‘ವೋಟ್ ಆನ್ ಅಕೌಂಟ್’ ಎಂದು ಕರೆಯಲಾಗುತ್ತದೆ. ಸೀತಾರಾಮನ್, “ಫೆಬ್ರವರಿ 1, 2024 ರಂದು ಘೋಷಿಸಲಾಗುವ ಬಜೆಟ್ ಕೇವಲ ವೋಟ್ ಆನ್ ಅಕೌಂಟ್ ಆಗಿರುತ್ತದೆ ಎಂಬುದು ಸತ್ಯದ ವಿಷಯವಾಗಿದೆ ಏಕೆಂದರೆ ನಾವು ಚುನಾವಣೆ ಅವಧಿಯಲ್ಲಿದ್ದೇವೆ. ಆದ್ದರಿಂದ ಸರ್ಕಾರ ಮಂಡಿಸುವ ಬಜೆಟ್ ಕೇವಲ ವೆಚ್ಚವನ್ನು ಪೂರೈಸುತ್ತದೆ. ಹೊಸ ಸರ್ಕಾರವು ಕಾರ್ಯನಿರ್ವಹಿಸುವವರೆಗೆ ಸರ್ಕಾರದ ಪರವಾಗಿ ಯಾವುದೇ ಅದ್ಭುತವಾದ ಘೋಷಣೆಗಳು ಬರುವುದಿಲ್ಲ. ಆದ್ದರಿಂದ ಹೊಸ ಸರ್ಕಾರವು ಬಂದು ಜುಲೈ 2024ರಲ್ಲಿ ಮುಂದಿನ ಪೂರ್ಣ ಬಜೆಟ್ ಅನ್ನು ಪ್ರಸ್ತುತಪಡಿಸುವವರೆಗೆ ನೀವು ಕಾಯಬೇಕಾಗುತ್ತದೆ, “ಎಂದು ಅವರು ಹೇಳಿದರು.

    ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ ವರದಿ: ಲೋಕಸಭೆಯಲ್ಲಿ ಸೃಷ್ಟಿಯಾಗಬಹುದು ಕೋಲಾಹಲ

    ಪಿಒಕೆಯಿಂದ ಕನಿಷ್ಠ ಒಂದು ಆ್ಯಪಲ್​ ತನ್ನಿ: ಅಮಿತ್ ಶಾಗೆ ಕಾಂಗ್ರೆಸ್​ ನಾಯಕ ಅಧೀರ್ ಸವಾಲು

    ವಾಟ್ಸಪ್ ಸ್ಟೇಟಸ್​ ನೋಡಿ ದೂರು ದಾಖಲಿಸಿದ ಗಂಡ; ಹೆಂಡತಿ, ಅಳಿಯನಿಗೆ ಈಗ ಬಂಧನದ ಭೀತಿ

    ದೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts