More

    ಪಿಒಕೆಯಿಂದ ಕನಿಷ್ಠ ಒಂದು ಆ್ಯಪಲ್​ ತನ್ನಿ: ಅಮಿತ್ ಶಾಗೆ ಕಾಂಗ್ರೆಸ್​ ನಾಯಕ ಅಧೀರ್ ಸವಾಲು

    ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಕನಿಷ್ಠ ಒಂದು ಆ್ಯಪಲ್ (ಸೇಬು) ತನ್ನಿ…

    ಹೀಗೆಂದು ಗೃಹ ಸಚಿವ ಅಮಿತ್​ ಶಾ ಅವರಿಗೆ ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ ಸವಾಲು ಹಾಕಿದ್ದಾರೆ.

    ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ಬುಧವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿರುವುದಕ್ಕೆ ಪ್ರತಿಯಾಗಿ ಚೌಧರಿ ಈ ಸವಾಲು ಹಾಕಿದ್ದಾರೆ.

    2024ರ ಲೋಕಸಭೆ ಚುನಾವಣೆಯ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ತರಲು ಹಾಗೂ ಸಂಪೂರ್ಣ ಭಾರತದ ಎಲ್ಲ ಮತಗಳನ್ನು ಪಡೆದುಕೊಳ್ಳಲು ಶಾ ಅವರಿಗೆ ಧೈರ್ಯವಿದೆಯೇ ಎಂದು ಅವರು ಕೇಳಿದ್ದಾರೆ.

    “ಈ ವಿಷಯದ ಬಗ್ಗೆ ದಿನವಿಡೀ ಚರ್ಚೆ ನಡೆಯಬೇಕು. ಅಮಿತ್ ಶಾ ಹೇಳುತ್ತಿರುವಂತೆ ನೆಹರೂ ತಪ್ಪು ಮಾಡಿದ್ದಾರೆ ಎಂದುಕೊಳ್ಳೋಣ. ನಾವು ಪಿಒಕೆ ವಾಪಸು ತರುತ್ತೇವೆ ಎಂದು 2019ರಲ್ಲಿ ಅವರು ಹೇಳಿದ್ದರು. ಹಾಗಾದರೆ ಪಿಒಕೆ ವಾಪಸ್​ ತೆಗೆದುಕೊಳ್ಳುವಲ್ಲಿ ಅವರನ್ನು ಯಾರು ತಡೆದರು? ಕನಿಷ್ಠ ಒಂದು ಆಪಲ್ ಅನ್ನು ಪಿಒಕೆಯಿಂದ ತನ್ನಿ. ಅವರು ದೊಡ್ಡದಾಗಿ ಮಾತನಾಡುತ್ತಾರೆ; ಆದರೆ ಏನನ್ನೂ ಮಾಡುವುದಿಲ್ಲ. ಪಿಒಕೆಯಲ್ಲಿ ಸಿಪಿಇಸಿ ನಿರ್ಮಿಸಲಾಗುತ್ತಿದೆ, ಈ ಜನರು ಈಗ ಏಕೆ ಮೌನವಾಗಿದ್ದಾರೆ? ಹಂಪ್ಟಿ ಡಂಪ್ಟಿ (ಮೋದಿ-ಶಾ) ಇಬ್ಬರೂ ಪಿಒಕೆ ಅನ್ನು ಮರಳಿ ತರಲಿ. 2024ರ ಚುನಾವಣೆಗೆ ಮೊದಲು ಪಿಒಕೆ ತನ್ನಿ. ದೇಶದ ಎಲ್ಲಾ ಮತಗಳನ್ನು ನೀವು ಪಡೆಯಿರಿ” ಎಂದು ಚೌಧರಿ ಅವರು ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸಮಸ್ಯೆಗೆ ಮಾಜಿ ಪ್ರಧಾನಿ ನೆಹರೂ ಅವರೇ ಹೊಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಆರೋಪಿಸಿದ್ದರು. “ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಮಸ್ಯೆ ಪಂಡಿತ್ ನೆಹರೂ ಅವರಿಂದ ಉಂಟಾಯಿತು. ಇಲ್ಲದಿದ್ದರೆ ಆ ಭಾಗ ಕಾಶ್ಮೀರಕ್ಕೆ ಸೇರುತ್ತಿತ್ತು. ನೆಹರೂಜಿ ಅವರ ಎರಡು ಪ್ರಮಾದಗಳು ಪಿಒಕೆ ಸೃಷ್ಟಿಗೆ ಕಾರಣವಾಯಿತು” ಎಂದು ಶಾ ಹೇಳಿದ್ದರು.

    ನೆಹರೂ ಅವರು ಕದನ ವಿರಾಮವನ್ನು ಘೋಷಿಸಿದರು ಹಾಗೂ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು. ಈ ಎರಡು “ಪ್ರಮಾದಗಳಿಂದ” ಜಮ್ಮು ಮತ್ತು ಕಾಶ್ಮೀರವು ಬಳಲುತ್ತಿದೆ ಎಂದು ಟೀಕಿಸಿದ್ದರು.

    ವಾಟ್ಸಪ್ ಸ್ಟೇಟಸ್​ ನೋಡಿ ದೂರು ದಾಖಲಿಸಿದ ಗಂಡ; ಹೆಂಡತಿ, ಅಳಿಯನಿಗೆ ಈಗ ಬಂಧನದ ಭೀತಿ

    ನಾನು ಪಕ್ಷದ ಸಣ್ಣ ಕಾರ್ಯಕರ್ತ… ಕುಟುಂಬದ ಭಾಗವೆಂದುಕೊಂಡಿದ್ದಾರೆ ಜನ.. ಹೀಗೆ ವಿನಮ್ರವಾಗಿ ಹೇಳಿದ್ದು ಯಾರು?

    ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪಿಗೆ 50 ವರ್ಷ: ಸುಪ್ರೀಂ ವೆಬ್​ಸೈಟ್​ನಲ್ಲಿ ಕನ್ನಡ ಸೇರಿ 10 ಭಾಷೆಗಳಲ್ಲಿ ತೀರ್ಪು ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts