More

    ರೈಲ್ವೆ ವಲಯವನ್ನು ಖಾಸಗೀಕರಣ ಮಾಡುವುದು ಯಾರಿಗೂ ಸಾಧ್ಯ ಇಲ್ಲ: ಪಿಯೂಷ್ ಗೋಯಲ್

    ನವದೆಹಲಿ: ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರೈಲ್ವೆ ವಲಯವನ್ನು ಖಾಸಗೀಕರಣಕ್ಕೆ ಒಳಪಡಿಸುವುದಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

    ರಾಜ್ಯಸಭೆಗೆ ಈ ವಿಷಯ ತಿಳಿಸಿದ ಅವರು, ಪ್ರಯಾಣಿಕರ ಹಿತ ದೃಷ್ಟಿಯಿಂದ ರೈಲ್ವೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಸಲುವಾಗಿ ಬಂಡವಾಳ ಆಕರ್ಷಣೆಗೆ ಒತ್ತು ನೀಡಲಾಗಿದೆ. ರೈಲ್ವೆಯನ್ನು ನಾವೆಂದಿಗೂ ಖಾಸಗೀಯವರಿಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ. ಉಹಾಪೋಹಗಳಿಗೆ, ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಅವರು ಹೇಳಿದ್ದಾರೆ.

    ಇತ್ತೀಚೆಗೆ ಭಾರತೀಯ ರೈಲ್ವೆ ನಿಲ್ದಾಣಗಳು ಹಿಂದೆಂದಿಗಿಂತಲೂ ಕಂಗೊಳಿಸುತ್ತಿವೆ. ಇದಕ್ಕೆ ಕಾರಣ ನಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಗಳು. ಮುಂಬರುವ ದಿನಗಳಲ್ಲಿ ರೈಲು ಪ್ರಯಾಣ ವಿಮಾನ ಪ್ರಯಾಣಕ್ಕಿಂತಲೂ ಸುಖಕರವಾಗಿರಲಿದೆ ಎಂದು ಭರವಸೆ ನೀಡಿದರು.

    ಕಳೆದ ಎರಡು ವರ್ಷಗಳ ಅವಧಿಯಲ್ಲಿ ರೈಲು ಪ್ರಯಾಣದ ವೇಳೆ ಯಾವುದೇ ಒಬ್ಬ ಪ್ರಯಾಣಿಕ ಮೃತಪಟ್ಟಿಲ್ಲ ಎಂದು ಇದೇ ವೇಳೆ ಗೋಯಲ್ ರಾಜ್ಯಸಭೆಗೆ ತಿಳಿಸಿದರು.

    ಸ್ನೇಹಿತನ ಹೊಸ ರಾಯಲ್​ ಎನ್ಫೀಲ್ಡ್​ ಬೈಕ್​ ಏರಿದ ಯುವಕ ದುರಂತ ಸಾವು..!

    ಪೋರ್ನ್​ ಸೈಟಿನಲ್ಲಿ ತಮ್ಮದೇ ವಿಡಿಯೋ ನೋಡಿ ದಂಪತಿ ಶಾಕ್​​: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸೋ ಸತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts