More

    ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಹರಿಣ ಪಡೆ: ಧರ್ಮಶಾಲಾದಲ್ಲಿ ಇಂದು ನೆದರ್ಲೆಂಡ್ ಸವಾಲು

    ಧರ್ಮಶಾಲಾ: ಸಂಘಟಿತ ನಿರ್ವಹಣೆಯೊಂದಿಗೆ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ನೆದರ್ಲೆಂಡ್ ತಂಡದ ಸವಾಲು ಎದುರಿಸಲಿದೆ. ಟೆಂಬಾ ಬವುಮಾ ಪಡೆ ಗೆಲುವಿನ ಓಟವನ್ನು ಸತತ 3ನೇ ಪಂದ್ಯಕ್ಕೆ ವಿಸ್ತರಿಸುವ ಹಂಬಲದಲ್ಲಿ ಕಣಕ್ಕಿಳಿಯಲಿದೆ.
    ಆಡಿದ ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಗೆಲುವು ಕಂಡಿರುವ ದ.ಆಫ್ರಿಕಾ ಭರ್ಜರಿ ರನ್‌ರೇಟ್ (+2.360)ಸಂಪಾದಿಸಿದೆ. ಅತ್ತ ನೆದರ್ಲೆಂಡ್ ಸತತ ಸೋಲಿನ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಪಾಕ್‌ಗೆ ಪೈಪೋಟಿ ನೀಡಿದ ಡಚ್ಚರೂ, ಆಫ್ರಿಕಾಗೆ ಇದೀಗ ಸವಾಲೊಡ್ಡುವ ತವಕದಲ್ಲಿದ್ದಾರೆ. ಆದರೆ ಹಿಂದಿನ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಆಫ್ರಿಕಾ ಆತ್ಮ ಬಲ ಹೆಚ್ಚಿಸಿಕೊಂಡಿದೆ. ‘ಚೋಕರ್ಸ್’ ಎಂಬ ಹಣೆಪಟ್ಟಿ ಕಳಚಲು ಆಫ್ರಿಕಾ ಮೊದಲ ಪಂದ್ಯದಿಂದಲೇ ತಯಾರಿಯೊಂದಿಗೆ ಕಣಕ್ಕಿಳಿದಿದೆ. ದಕ್ಷಿಣ ಆಫ್ರಿಕಾ ಪರ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಸತತ ಎರಡು ಶತಕ ಸಿಡಿಸಿ ಉತ್ತಮ ಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರಸ್ಸಿ ವಾನ್ ಡರ್ ಡಸ್ಸೆನ್ ಮತ್ತು ಏಡೆನ್ ಮಾರ್ಕ್ರಮ್ ಮತ್ತಷ್ಟು ಬಲ ತುಂಬಿದ್ದಾರೆ. ಹೆನ್ರಿಕ್ ಕ್ಲಾಸೆನ್ ಜತೆಗೆ ಅನುಭವಿ ಡೇವಿಡ್ ಮಿಲ್ಲರ್ ಸ್ಲಾಗ್ ಓವರ್‌ಗಳಲ್ಲಿ ಉಪಯುಕ್ತ ಆಟದೊಂದಿಗೆ ತಂಡಕ್ಕೆ ನೆರವಾಗಿದ್ದಾರೆ. ಕಗಿಸೋ ರಬಾಡ, ಮಾರ್ಕೋ ಜಾನ್ಸೆನ್ ಬೌಲಿಂಗ್ ನೆದರ್ಲೆಂಡ್‌ಗೆ ಸವಾಲೆನಿಸಿದೆ. ಕೇಶವ್ ಮಹಾರಾಜ್ ಸ್ಪಿನ್ ಬಲವಿದೆ.
    ಕಳೆದ ವರ್ಷ ಟಿ20 ವಿಶ್ವಕಪ್‌ನ ಸೂಪರ್-12 ಹಂತದಲ್ಲಿ ಆಫ್ರಿಕನ್ನರು ಮಣಿಸಿದ್ದ ಡಚ್ಚರ ಅದೇ ಪ್ರದರ್ಶನವನ್ನು ಪುನರಾವರ್ತಿಸುವ ತವಕದಲ್ಲಿದ್ದಾರೆ. ನೆದರ್ಲೆಂಡ್ ಬ್ಯಾಟಿಂಗ್ ವಿಭಾಗ ದಯನೀಯ ವೈಲ್ಯ ಕಂಡಿದೆ. ಯುವ ಆಲ್ರೌಂಡರ್ ಬಸ್ ಡಿ ಲೀಡೆ ಮೇಲೆ ಅವಲಂಬಿತವಾಗಿದೆ.

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts