More

    ನಿರ್ಭಯಾ ಅಪರಾಧಿಗಳ ಗಲ್ಲುಶಿಕ್ಷೆ ಮತ್ತೆ ಮುಂದೂಡಿಕೆ: ಹೊಸ ಆದೇಶ ಬರೋವರೆಗೂ ಇಲ್ಲ ಮರಣದಂಡನೆ

    ನವದೆಹಲಿ: ಫೆ. 1ಕ್ಕೆ ನಿಗದಿಯಾಗಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲುಶಿಕ್ಷೆಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮತ್ತೊಮ್ಮೆ ಮುಂದೂಡಿದೆ. ನಾಳೆ ನಡೆಯಬೇಕಿದ್ದ ಮರಣದಂಡನೆಗೆ ತಡೆಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿದ್ದು, ಮತ್ತೊಂದು ಆದೇಶ ಹೊರಬೀಳುವವರೆಗೂ ಗಲ್ಲುಶಿಕ್ಷೆ ನಡೆಸದಂತೆ ತಿಳಿಸಿದೆ.

    ದೆಹಲಿಯ ಪಟಿಯಾಲ ಕೊರ್ಟ್​ನ ಅಡಿಷನಲ್​ ಸೆಸನ್ಸ್ ಜಡ್ಜ್​ ಧರ್ಮೆಂದ್ರ ರಾಣ ಅವರು ಇಂದು ತೀರ್ಪು ಪ್ರಕಟಿಸಿದರು.

    ವಕೀಲ ಎ.ಪಿ.ಸಿಂಗ್ ಅಪರಾಧಿಗಳಾದ ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮ ಮತ್ತು ಅಕ್ಷಯ್​ ಕುಮಾರ್​ ಪರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಫೆ.1ರ ಗಲ್ಲುಶಿಕ್ಷೆಗೆ ತಡೆಕೋರಿದ್ದರು.

    ಅಪರಾಧಿ ವಿನಯ್​ ಶರ್ಮ ಸಲ್ಲಿರುವ ಕ್ಷಮಾಧಾನ ಅರ್ಜಿಯು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮುಂದಿರುವುದರಿಂದ ಅದರ ನಿರ್ಣಯ ಹೊರಬರದೆ ಗಲ್ಲುಶಿಕ್ಷೆ ಸಾಧ್ಯವಿಲ್ಲ ಎಂದು ವಕೀಲ ಸಿಂಗ್​ ನ್ಯಾಯಾಲಯದ ಮುಂದೆ ವಾದಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಶಿಕ್ಷೆಯನ್ನು ಮುಂದೂಡಿದೆ ಎಂದು ತಿಳಿದುಬಂದಿದೆ.

    ಓರ್ವ ಅಪರಾಧಿಯ ಅರ್ಜಿ ಇತ್ಯರ್ಥ ಮಾತ್ರ ಬಾಕಿ ಇದೆ. ಹೀಗಾಗಿ ಉಳಿದ ಮೂವರು ಅಪರಾಧಿಗಳನ್ನು ಗಲ್ಲಿಗೇರಿಸಬಹುದೆಂದು ತಿಹಾರ್ ಜೈಲು ಅಧಿಕಾರಿಗಳು ಗಲ್ಲುಶಿಕ್ಷೆ ತಡಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಅಪರಾಧಿ ಪರ ವಕೀಲ ಇದಕ್ಕೆ ಸಮ್ಮತಿಸದೇ, ಒಂದೇ ಒಂದು ಅರ್ಜಿ ಇತ್ಯರ್ಥವಾಗದೇ ಇದ್ದರೂ ಇತರೆ ಅಪರಾಧಿಗಳನ್ನು ಗಲ್ಲಿಗೇರಿಸುವಂತಿಲ್ಲ ಎಂದು ಕಾರಾಗೃಹ ನಿಯಮವಿದೆ ಎಂದು ವಾದಿಸಿದರು.

    ಈ ಹಿಂದೆ ಜನವರಿ 22ಕ್ಕೆ ಅಪರಾಧಿಗಳ ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿತ್ತು. ಆದರೆ, ಅಪರಾಧಿಗಳ ಕಾನೂನು ಪ್ರಕ್ರಿಯೆ ಮುಗಿಯದ ಕಾರಣದಿಂದಾಗಿ ಫೆ. 1ಕ್ಕೆ ಮುಂದೂಡಲಾಗಿತ್ತು. ನಂತರವು ಅಪರಾಧಿಗಳು ಒಬ್ಬರ ಹಿಂದೆ ಒಬ್ಬರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸುತ್ತಾ, ನಾನಾ ಕಸರತ್ತು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವಿಳಂಬವಾಗಿದ್ದು, ನ್ಯಾಯಾಲಯ ನಾಳೆ ನಡೆಯಬೇಕಿದ್ದ ಗಲ್ಲುಶಿಕ್ಷೆಗೆ ತಡೆನೀಡಿದೆ.

    ಈಗಾಗಲೇ ಕಾನೂನಿನಲ್ಲಿ ಇರುವ ಕೊನೆಯ ಅವಕಾಶವಾದ ಕ್ಯುರೇಟಿವ್​ ಅರ್ಜಿಯನ್ನು ವಿನಯ್​ ಮತ್ತು ಅಕ್ಷಯ್​ ಸಲ್ಲಿಸಿದ್ದು, ನ್ಯಾಯಲಯವು ತಿರಸ್ಕರಿಸಿದೆ. ಪವನ್​ ಗುಪ್ತ ಕ್ಯುರೇಟಿವ್​ ಅರ್ಜಿ ಸಲ್ಲಿಸುವುದು ಮಾತ್ರ ಬಾಕಿ ಇದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts