More

    ಜೋಡಿ ಕೊಲೆ ಅಪರಾಧಿಗಳ ಮರಣ ದಂಡನೆ ಶಿಕ್ಷೆ ಮಾರ್ಪಾಡು

    ಬೆಂಗಳೂರು:ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಶಿಕ್ಷೆಯನ್ನು ರದ್ದು ಪಡಿಸುವಂತೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಮನವಿ ತಿರಸ್ಕರಿಸಿದೆ.

    ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆ ಪ್ರಶ್ನಿಸಿ ಅಪರಾಧಿಗಳಾದ ಬಾಬು, ಮತ್ತವರ ಸಹೋದರ ನಾಗಪ್ಪ, ಸಂಬಂಧಿ ಮುತ್ತಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮರಣ ದಂಡನೆ ಶಿಕ್ಷೆ ದೃಢೀಕರಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯೂ ಸಲ್ಲಿಕೆಯಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

    ಘಟನೆ ಸಂಬಂಧ ತಕ್ಷಣ ಪ್ರಚೋದನೆಗೊಳಗಾಗಿ ಕೊಲೆ ಮಾಡಲಾಗಿದೆ ಎಂಬುದಾಗಿ ಅರ್ಜಿದಾರರ ವಾದವನ್ನು ತಿರಿಸ್ಕರಿಸಿದ ನ್ಯಾಯಪೀಠ, ಘಟನೆ ನಡೆಯುವ ಒಂದೆರಡು ದಿನದಲ್ಲಿ ಮೃತರ ನಡುವಿನ ಸಂಬಂಧ ಬೆಳೆದಿದ್ದರೆ ಅದು ಪ್ರಚೋದನೆಗೊಳಾಗಿರಬೇಕು ಎಂದು ಹೇಳಬಹುದಾಗಿದೆ. ಆದರೆ, ಮೃತರ ನಡುವಿನ ಅಕ್ರಮ ಸಂಬಂಧ ಕೊಲೆಗಾರರಿಗೆ ತಿಳಿದಿತ್ತು. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಅವಕಾಶವಿತ್ತು. ಆದರೆ, ಆರೋಪಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಪೀಠ ತಿಳಿಸಿದೆ.

    ಅಲ್ಲದೆ, ಪ್ರಕರಣದ ಎಲ್ಲ ಆರೋಪಿಗಳು ಘಟನೆ ನಡೆದ ಸಂದರ್ಭದಲ್ಲಿ ಸಾವಿಗೀಡಾದ ಬಸವರಾಜು ಮತ್ತು ಅವರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಸಂಗೀತಾರನ್ನೆ ಮನೆಯಿಂದ ಹೊರಕ್ಕೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಬಾಬು ಎಂಬುವರು ಮನೆಯಿಂದ ಕುಡುಗೋಲು ತಂದಿದ್ದಾರೆ. ಈ ಬೆಳವಣಿಗೆಗಳು ಪೂರ್ವಯೋಜಿತ ಎಂಬುದನ್ನು ತಿಳಿಸುತ್ತವೇ ವಿನಾ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಪೀಠ ತಿಳಿಸಿದೆ.

    ಬಸವರಾಜು ಮತ್ತು ಸಂಗೀತಾರ ಅಕ್ರಮ ಸಂಬಂಧದಿಂದ ಸಂಗೀತ ಪತಿಯಾಗಿರುವ ಬಾಬು ಸಾಕಷ್ಟು ನೊಂದಿದ್ದಾರೆ. ಆದಕ್ಕಾಗಿ ಯಾವ ಕ್ರಮಕ್ಕೆ ಮುಂದಾಗಿದ್ದರೂ ಎಂಬುದು ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ. ಜತೆಗೆ, ಒಬ್ಬನೇ ಆರೋಪಿ ಈ ಕೃತ್ಯ ನಡೆಸಿದ್ದಿದ್ದರೆ ಪ್ರಕರಣ ಭಿನ್ನವಾಗಿರುತ್ತಿತ್ತು. ಆದರೆ, ಅದವೊಂದಿಗೆ 2-4 ಜನ ಸೇರಿರುವುದು ಪ್ರಕರಣ ವಿಭಿನ್ನವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

    ಅಲ್ಲದೆ, ಪ್ರಸ್ತುತದ ಪ್ರಕರಣ ಅಪರೂಪದ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟು ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಿದೆ

    ಪ್ರಕರಣದ ಹಿನ್ನೆಲೆ ಏನು ?
    ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಮದಾಪಯರ ನಿವಾಸಿ ಬಾಬು ಎಂಬುವರು ಪತ್ನಿ ಸಂಗೀತಾ ಅವರು ಬಸವರಾಜ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದ ಶಂಕಿಸಲಾಗಿತ್ತು.

    ಇದೇ ಕಾರಣದಿಂದ 2013ರ ಅ.10ರಂದು ಬಾಬು(ಮೃತ ಸಂಗೀತಾರ ಪತಿ) ಮತ್ತವರ ಸಹೋದರ ನಾಗಪ್ಪ ಹಾಗೂ ಸಂಬಂಧಿಕರ ಸಂಗೀತಾ ಮತ್ತು ಬಸವರಾಜು ಅವರನ್ನು ಕೊಲೆ ಮಾಡಿದ್ದರು.

    2022ರ ಜೂ. 15ರಂದು ಮೂವರು ಆರೋಪಿಗಳಿಗೆ ಬೆಳಗಾವಿ ಸೆಷನ್ಸ್ ನ್ಯಾಯಾಲಯ ಅಪರಾಧಿಗಳಾಗಿದ್ದ ಬಾಬು, ಮತ್ತವರ ಸಹೋದರ ನಾಗಪ್ಪ, ಸಂಬಂಧಿ ಮುತ್ತಪ್ಪ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಮರಣ ದಂಡನೆ ಕುರಿತಂತೆ ದೃಢೀಕರಣಕ್ಕಾಗಿ ಹೈಕೋರ್ಟ್‌ಗೆ ಪ್ರಕರಣವನ್ನು ರವಾನಿಸಲಾಗಿತ್ತು. ಜತೆಗೆ, ತಮ್ಮ ವಿರುದ್ಧದ ಆದೇಶವನ್ನು ಪ್ರಶ್ನಿಸಿ ಮೂವರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಪೀಠ ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಜೀವಾವಧಿಗೆ ಬದಲಾಯಿಸಿ ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts