More

    18ರಿಂದ 45 ವರ್ಷದವರಿಗಿಲ್ಲ ಫ್ರೀ ಕರೊನಾ ಲಸಿಕೆ; ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಿದ ಸರ್ಕಾರ

    ಮುಂಬೈ: ದೇಶಾದ್ಯಂತ ಕರೊನಾ ಹಾವಳಿ ಹೆಚ್ಚಾಗಲಾರಂಭಿಸಿದೆ. ಇನ್ನೊಂದತ್ತ ಕರೊನಾ ಲಸಿಕೆ ಅಭಿಯಾನವೂ ಭರದಿಂದ ಸಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟರಿಗೂ ಲಸಿಕೆ ವಿತರಿಸುವುದಾಗಿ ಕೇಂದ್ರ ಸರ್ಕಾರ ಆದೇಶಿಸಿದೆ. ಆ ನಿಟ್ಟಿನಲ್ಲಿ ಬಹುತೇಕ ರಾಜ್ಯಗಳು 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿವೆ. ಆದರೆ ಈ ರಾಷ್ಟ್ರದಲ್ಲಿ ಉಚಿತ ಲಸಿಕೆ ನೀಡಲು ಸಾಧ್ಯವಿಲ್ಲ ಎನ್ನಲಾಗಿದೆ.

    ಮಹಾರಾಷ್ಟ್ರ ಸರ್ಕಾರ 18 ವರ್ಷದಿಂದ 45 ವರ್ಷದವರಿಗೆ ಖಾಸಗಿ ಕರೊನಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುವಂತೆ ಸೂಚಿಸಿದೆ. 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ. ರಾಜ್ಯದಲ್ಲಿ 90 ಲಕ್ಷ ಮಂದಿ 18ರಿಂದ 45 ವರ್ಷದವರಿದ್ದಾರೆ. ಅವರಿಗೆ 1.8 ಕೋಟಿ ಡೋಸೇಜ್​ ಲಸಿಕೆ ಬೇಕಾಗಲಿದೆ ಎಂದು ಮಾಹಿತಿ ನೀಡಲಾಗಿದೆ.

    ಮಹಾರಾಷ್ಟ್ರದಲ್ಲಿ ಮಂಗಳವಾರ 66 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ. 895 ಮಂದಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ. 1.5ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್)

    ಆಟೋದಲ್ಲಿ ಅಮ್ಮನ ಹೆಣ ಇಟ್ಟುಕೊಂಡು ಗೋಳಾಡಿದ ಮಗ! ತಾಯಿಯ ಸಾವಿಗೆ ಆಸ್ಪತ್ರೆಯೇ ಕಾರಣವೆಂಬ ಆರೋಪ

    ಇನ್ಮುಂದೆ ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ- ರಾಷ್ಟ್ರೀಯ ಭದ್ರತೆಗೆ ಮಾರಕ ಎಂದ ಸಚಿವ ಸಂಪುಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts