More

    4ನೇ ಟಿ20 ಪಂದ್ಯಕ್ಕೂ ಮುನ್ನವೇ ರಾಯ್ಪುರ್​ ಸ್ಟೇಡಿಯಂನಲ್ಲಿ ವಿದ್ಯುತ್​ ಶಾಕ್! ಇಂದಿನ ಪಂದ್ಯಕ್ಕೆ ಜನರೇಟರೇ ಗತಿ

    ರಾಯ್ಪುರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಛತ್ತೀಸ್‌ಗಢದ ರಾಯ್ಪುರ್​ನಲ್ಲಿರುವ ಶಾಹೀದ್​ ವೀರ್​ ನಾರಾಯಣ್​ ಸಿಂಗ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಭಾರತ 2-1 ಅಂತರದಿಂದ ಸರಣಿ ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇನ್ನೂ ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಆದರೆ, ಅದಕ್ಕೂ ಮುನ್ನವೇ ವಿದ್ಯುತ್​ ಶಾಕ್​ ಎದುರಾಗಿದೆ.

    ವಿದ್ಯುತ್​ ಶಾಕ್​ ಅಂದರೆ ವಿದ್ಯುತ್​ ತಂತಿಯ ಶಾಕ್​ ಅಲ್ಲ. ಬದಲಿಗೆ ವಿದ್ಯುತ್​ ಕೊರತೆಯ ಶಾಕ್​. ಹೌದು, ಪಂದ್ಯಕ್ಕೂ ಮುನ್ನವೇ ಇಡೀ ಸ್ಟೇಡಿಯಂನಲ್ಲಿ ವಿದ್ಯುತ್​ ಪೂರೈಕೆ ಕಡಿತಗೊಂಡಿದೆ. ಅದಕ್ಕೆ ಕಾರಣ ಕರೆಂಟ್​ ಬಿಲ್​ ಕಟ್ಟದಿರುವುದು. 2009ರಿಂದಲೂ ವಿದ್ಯುತ್​ ಬಿಲ್​ ಕಟ್ಟಿಲ್ಲ ಎಂದು ತಿಳಿದುಬಂದಿದೆ.

    ನಾರಾಯಣ್​ ಸಿಂಗ್​ ಸ್ಟೇಡಿಯಂ ಸುಮಾರು 3.16 ಕೋಟಿ ರೂ.ಗಳಷ್ಟು ವಿದ್ಯುತ್​ ಬಾಕಿ ಉಳಿಸಿಕೊಂಡಿದೆ. ಈ ಕಾರಣದಿಂದಾಗಿ 5 ವರ್ಷದಿಂದಲೂ ಸ್ಟೇಡಿಯಂಗೆ ವಿದ್ಯುತ್​ ಪೂರೈಕೆ ಕಡಿತಗೊಳಿಸಲಾಗಿದೆ. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಆದರೆ, ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗಳನ್ನು ಮಾತ್ರ ಒಳಗೊಂಡಿದೆ. ಆದರೆ, ಇಂದಿನ ಪಂದ್ಯದ ವೇಳೆ ಫ್ಲಡ್‌ಲೈಟ್‌ಗಳನ್ನು ಜನರೇಟರ್ ಬಳಸಿ ಓಡಿಸಬೇಕಾಗುತ್ತದೆ.

    ಸ್ಟೇಡಿಯಂನ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ ನೀಡಿರುವ ವಿದ್ಯುತ್​ ಸಾಮರ್ಥ್ಯ 200 ಕಿಲೋವ್ಯಾಟ್​. ಅದನ್ನು 1 ಸಾವಿರ ಕಿಲೋವ್ಯಾಟ್​ಗೆ ಏರಿಸಲು ಅರ್ಜಿ ನೀಡಲಾಗಿದ್ದು, ಅನುಮೋದನೆ ಸಹ ದೊರೆತಿದೆ. ಆದರೆ, ಇನ್ನೂ ಕೆಲಸ ಆರಂಭವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಈ ಹಿಂದೆ ಅಂದರೆ, 2018ರಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ಸ್ಟೇಡಿಯಂನಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂದು ತಿಳಿದಾಗ ಕೋಲಾಹಲವೇ ಉಂಟಾಗಿತ್ತು. ಇದಾದ ಬಳಿಕ ಸ್ಟೇಡಿಯಂನ ವಿದ್ಯುತ್​ ಅವ್ಯವಸ್ಥೆ ಬಯಲಾಯಿತು. 2009 ರಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ ಮತ್ತು 3.16 ಕೋಟಿಗೆ ವಿದ್ಯುತ್​ ಬಿಲ್​ ಏರಿದೆ ಎಂದು ಘೋಷಿಸಲಾಯಿತು.

    ಕ್ರೀಡಾಂಗಣದ ನಿರ್ಮಾಣದ ನಂತರ, ಅದರ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಹಸ್ತಾಂತರಿಸಲಾಯಿತು, ಉಳಿದ ವೆಚ್ಚವನ್ನು ಕ್ರೀಡಾ ಇಲಾಖೆ ಭರಿಸಬೇಕಾಗಿತ್ತು. ಎರಡು ಇಲಾಖೆಗಳು ವಿದ್ಯುತ್ ಬಿಲ್ ಪಾವತಿ ಮಾಡದೆ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಈಗಾಗಲೇ ವಿದ್ಯುತ್​ ಕಂಪನಿ ಎರಡೂ ಇಲಾಖೆಗಳಿಗೂ ನೋಟಿಸ್​ ಕಳುಹಿಸಿದ್ದರೂ ಈವರೆಗೂ ವಿದ್ಯುತ್​ ಬಿಲ್​ ಮಾತ್ರ ಪಾವತಿ ಮಾಡಿಲ್ಲ. 2018ರಿಂದ ವಿದ್ಯುತ್​ ಕಡಿತ ಮಾಡಿದಾಗಿನಿಂದ ಈವರೆಗೂ 3 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳು ನಡೆದಿವೆ.

    ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದ ಮಾಧ್ಯಮ ಸಂಯೋಜಕ ತರುಣೇಶ್ ಸಿಂಗ್ ಪರಿಹಾರ್ ಮಾತನಾಡಿ, ಪ್ರತಿ ಬಾರಿ ಸಮಸ್ಯೆ ಎದುರಾಗುವುದರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ತುಂಬಾ ಕಷ್ಟಕರವಾಗಿದೆ. ದೊಡ್ಡ ಪಂದ್ಯಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಜನರೇಟರ್ ಬಳಸಲಾಗುತ್ತಿದೆ. ಸ್ಟೇಡಿಯಂ ಲೈಟ್​ಗಳಿಗೆ ಸಂಬಂಧಿಸಿದಂತೆ ಈವರೆಗೂ ಎಷ್ಟು ಬಿಲ್ ಬಾಕಿ ಇದೆ ಎಂಬುದು ನನಗೆ ತಿಳಿದಿಲ್ಲ. ಆದರೆ, CSCS ಹೆಸರಿನಲ್ಲಿ ತಾತ್ಕಾಲಿಕ ಸಂಪರ್ಕವನ್ನು ತೆಗೆದುಕೊಳ್ಳಲಾಗಿದೆ ಎಂದು ಪರಿಹಾರ್ ಹೇಳಿದರು. (ಏಜೆನ್ಸೀಸ್​)

    ಹೆಡ್​ ಕೋಚ್​ ಆಗಿ ಒಪ್ಪಂದ ವಿಸ್ತರಣೆ: ನಾನಿನ್ನೂ ಸಹಿ ಮಾಡಿಲ್ಲ ಅಂದ್ರು ರಾಹುಲ್​ ದ್ರಾವಿಡ್​!

    ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟು ವಿಶ್ರಾಂತಿ: ಕೊನೆಗೂ ಮೌನ ಮುರಿದ ಮಿಚೆಲ್​ ಮಾರ್ಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts