More

    ಸೋನಾಭದ್ರದಲ್ಲಿ 3 ಸಾವಿರ ಟನ್​ ಚಿನ್ನದ ನಿಕ್ಷೇಪ ಪತ್ತೆಯಾಗಿಲ್ಲ: ಜಿಎಸ್​ಐ ಪ್ರಕಾರ ಎಷ್ಟಿರಬಹುದು?

    ಲಖನೌ: ಸುಮಾರು 3 ಸಾವಿರ ಟನ್​ ಚಿನ್ನದ ನಿಕ್ಷೇಪ ಉತ್ತರ ಪ್ರದೇಶದ ಸೊನಾಭದ್ರಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂಬ ಜಿಲ್ಲಾ ಗಣಿಗಾರಿಕೆ ಅಧಿಕಾರಿಗಳ ವಾದವನ್ನು ಭಾರತದ ಗಣಿ ಮತ್ತು ಭೂಗರ್ಭಶಾಸ್ತ್ರ ಸರ್ವೇಕ್ಷಣಾಲಯ (ಜಿಎಸ್​ಐ)ಶನಿವಾರ ಅಲ್ಲಗೆಳೆದಿದೆ.

    ಇಂತಹ ಡೇಟಾವನ್ನು ಜಿಎಸ್​ಐನ ಯಾರೊಬ್ಬರು ಕೂಡ ನೀಡಿಲ್ಲ. ಸೋನಾಭದ್ರದಲ್ಲಿ ಅಷ್ಟೊಂದು ಪ್ರಮಾಣದ ಚಿನ್ನದ ನಿಕ್ಷೇಪವಿದೆ ಎಂಬುದನ್ನು ಜಿಎಸ್​ಐ ಅಂದಾಜಿಸಿಲ್ಲ ಎಂದು ಜಿಎಸ್​ಐ ಮಹಾನಿರ್ದೇಶಕ ಎಂ.ಶ್ರೀಧರ್​ ಅವರು ಮಾಧ್ಯಮಗಳಿಗೆ ಇಂದು ಸಂಜೆ ತಿಳಿಸಿದ್ದಾರೆ.

    ಇದನ್ನೂ ಓದಿ: ಸೋನಾಭದ್ರ ಚಿನ್ನದ ನಿಕ್ಷೇಪದ ಕಾವಲಿಗೆ ಜಗತ್ತಿನಲ್ಲೇ ಅತಿ ಹೆಚ್ಚು ವಿಷ ಹೊಂದಿರುವ ಸರ್ಪಗಳಿವೆ!

    ಯಾವುದೇ ರೀತಿಯ ಅದಿರು ಸಂಪನ್ಮೂಲ ಕಂಡುಬಂದಲ್ಲಿ ಸಮೀಕ್ಷೆಯ ಬಳಿಕ ನಮ್ಮ ಸಂಶೋಧನೆಗಳ ಫಲಿತಾಂಶವನ್ನು ಆಯಾ ರಾಜ್ಯ ಘಟಕದೊಂದಿಗೆ ನಾವು ಹಂಚಿಕೊಳ್ಳುತ್ತೇವೆ. ನಾವು 1998-99 ಮತ್ತು 1999-2000ದಲ್ಲಿ ಸೋನಾಭದ್ರ ವಲಯದಲ್ಲಿ ಸಾಕಷ್ಟು ಕೆಲಸವನ್ನು ಮಾಡಿದ್ದೇವೆ. ಆ ಸಂಬಂಧ ವರದಿಯನ್ನು ಅಗತ್ಯ ಕ್ರಮ ತೆಗೆದುಕೊಳ್ಳಲು ಉತ್ತರ ಪ್ರದೇಶದ ಭೂಗರ್ಭಶಾಸ್ತ್ರ ನಿರ್ದೇಶನಾಲಯಕ್ಕೆ ನೀಡಿದ್ದೇವೆ ಎಂದು ಶ್ರೀಧರ್​ ಮಾಹಿತಿ ನೀಡಿದರು.

    ಚಿನ್ನದ ನಿಕ್ಷೇಪಗಾಗಿ ಜಿಎಸ್​ಐ ನಡೆಸಿದ ಪರಿಶೋಧನೆಯ ಕೆಲಸ ತೃಪ್ತಿ ತಂದಿಲ್ಲ. ಸೋನಾಭದ್ರ ಜಿಲ್ಲೆಯಲ್ಲಿ ಸಾಕಷ್ಟು ಚಿನ್ನದ ನಿಕ್ಷೇಪವಿದೆ ಎಂಬುದಕ್ಕೆ ನಮ್ಮ ಫಲಿತಾಂಶ ಉತ್ತೇಜನ ನೀಡಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸೋನಾಭದ್ರ ಆಯಿತು, ಲಲಿತಪುರದಲ್ಲೂ ಚಿನ್ನದ ನಿಕ್ಷೇಪವಿದೆಯಂತೆ!: ನೆಲಮಟ್ಟದಿಂದ ಒಂದು ಮೀಟರ್ ಆಳದಲ್ಲಿ ಲಭ್ಯವಿದೆಯಂತೆ ಚಿನ್ನ, ಪ್ಲಾಟಿನಂ!

    ಆದರೆ, ಶುಕ್ರವಾರ ಸೋನಾಭದ್ರ ಜಿಲ್ಲೆಯ ಗಣಿ ಅಧಿಕಾರಿಗಳು ಸೋನ್​ ಪಹಾಡಿ ಮತ್ತು ಹರ್ಡಿಯಲ್ಲಿ ಚಿನ್ನದ ನಿಕ್ಷೇಪಗಳು ಇರುವುದಾಗಿ ತಿಳಿಸಿದ್ದರು. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸೋನ್ ಪಹಾಡಿಯಲ್ಲಿ 2,943.5 ಟನ್​ ಚಿನ್ನದ ನಿಕ್ಷೇಪವಿದ್ದರೆ, ಹರ್ಡಿ ಗಣಿಯಲ್ಲಿ 646.15 ಟನ್ ಚಿನ್ನದ ನಿಕ್ಷೇಪವಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: ಸೋನಾಭದ್ರ ಚಿನ್ನದ ನಿಕ್ಷೇಪದ ಮೌಲ್ಯ ನಮ್ಮ ದೇಶದ ಮೀಸಲು ಚಿನ್ನದ ಪ್ರಮಾಣಕ್ಕಿಂತ 5-6 ಪಟ್ಟು!

    ಆದರೆ, ಇದನ್ನು ತಿರಸ್ಕರಿಸಿರುವ ಶ್ರೀಧರ್​ ಅವರು ಪರಿಶೋಧನೆಯ ಬಳಿಕ ಜಿಎಸ್ಐ 52,806.25 ಟನ್ ಅದಿರಿನ ಸಂಭವನೀಯ ವರ್ಗದ ಸಂಪನ್ಮೂಲವನ್ನು ಅಂದಾಜಿಸಿದೆ. ಅದರಲ್ಲಿ ಪ್ರತಿ ಒಂದು ಟನ್ ಅದಿರಿಗೆ 3.03 ಗ್ರಾಂ ಚಿನ್ನದ ನಿಕ್ಷೇಪವಿರಬಹುದು ಎಂದು ಹೇಳಿದ್ದಾರೆ. ಒಟ್ಟಾರೆ 52,806.25 ಟನ್ ಅದಿರಿನಿಂದ ಸುಮಾರು 160 ಕೆ.ಜಿ ಚಿನ್ನದ ನಿಕ್ಷೇಪ ಮಾತ್ರ ದೊರೆಯಲಿದೆ ಹೊರತು 3,350 ಟನ್​ಗಳಲ್ಲ ಎಂದು ಶ್ರೀಧರ್​ ಅವರು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts