More

    ಸೋನಾಭದ್ರ ಆಯಿತು, ಲಲಿತಪುರದಲ್ಲೂ ಚಿನ್ನದ ನಿಕ್ಷೇಪವಿದೆಯಂತೆ!: ನೆಲಮಟ್ಟದಿಂದ ಒಂದು ಮೀಟರ್ ಆಳದಲ್ಲಿ ಲಭ್ಯವಿದೆಯಂತೆ ಚಿನ್ನ, ಪ್ಲಾಟಿನಂ!

    ಲಖನೌ: ಉತ್ತರ ಪ್ರದೇಶದ ಸೋನಾಭದ್ರದಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿ ಮಾಡಿದರೆ, ಲಲಿತಪುರದಲ್ಲೂ ಚಿನ್ನದ ನಿಕ್ಷೇಪ ಇದೆ ಎಂಬ ಸುದ್ದಿ ಈಗ ಸದ್ದುಮಾಡುತ್ತಿದೆ. ಈ ಪ್ರದೇಶ ಕೂಡ ಉತ್ತರ ಪ್ರದೇಶದಲ್ಲೇ ಇದೆ.

    ಬುಂದೇಲ್​ ಖಂಡ ಭಾಗದ ಲಲಿತಪುರ ಜಿಲ್ಲೆಯ ಹೆಸರು ಕೇಳುತ್ತಿದ್ದಂತೆ ಅತಿ ಹಿಂದುಳಿದ ಜಿಲ್ಲೆಯ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತದೆ. ಅದೇ ರೀತಿ ಈ ಪ್ರದೇಶವನ್ನು ಪೃಥ್ವಿ ರತ್ನ ಎಂದೂ ಹೇಳುತ್ತಾರೆ. ಇಲ್ಲಿನ ಮಣ್ಣಿನಲ್ಲಿರುವ ಖನಿಜಗಳಿಗೆ ಕೊರತೆಯೇ ಇಲ್ಲ. ರಾಕ್ ಫಾಸ್ಪೇಟ್​, ಚಿನ್ನ, ವಜ್ರ ಮುಂತಾದವುಗಳ ನಿಕ್ಷೇಪವೂ ಇಲ್ಲಿದೆ ಎಂಬ ಅಂಶ ಅಧ್ಯಯನದ ಮೂಲಕ ಪತ್ತೆಯಾಗಿದೆ.

    ಕೆನಡಾದ ಮಿನರಲ್ ಸರ್ವೇ ಏಜೆನ್ಸಿ ಮತ್ತು ದೇಶದ ಇತರೆ ಕೆಲವು ಮಿನರಲ್ ಟೆಸ್ಟಿಂಗ್ ಏಜೆನ್ಸಿಗಳು ಇಲ್ಲಿನ ಮಣ್ಣಿನ ಪರೀಕ್ಷೆ ನಡೆಸಿ ಚಿನ್ನದ ನಿಕ್ಷೇಪ ಇರುವ ವರದಿಯನ್ನು ಪ್ರಕಟಿಸಿವೆ. ಇಲ್ಲಿ ಅಧ್ಯಯನದ ಹೆಸರಿನಲ್ಲಿ ಮಣ್ಣಿನ ಪರೀಕ್ಷೆ ನಿರಂತರ ನಡೆಯುತ್ತಿದ್ದು, ಸೋನಾಭದ್ರ ಚಿನ್ನದ ಗಣಿ ಪತ್ತೆ ವಿಚಾರ ಘೋಷಣೆ ಆದಂತೆ ಇಲ್ಲೂ ಆಯಿತೆಂದರೆ ಈ ಪರೀಕ್ಷೆಗಳೆಲ್ಲವೂ ಕೊನೆಯಾಗಲಿವೆ.
    ಪ್ರಕೃತಿ ಸಂಪನ್ಮೂಲ ಭರಿತವಾದ ಲಲಿತಪುರದಲ್ಲಿ ಕಳೆದ ಅನೇಕ ವರ್ಷಗಳಿಂದ ಸ್ಯಾಂಪಲಿಂಗ್ ನಡೆಯುತ್ತಲೇ ಇದೆ. ಮಡವರ ಡೆವಲಪ್​ಮಂಟ್ ಬ್ಲಾಕ್​ನ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿನ ಮಣ್ಣು ಪರೀಕ್ಷೆ ಮುಂದುವರಿದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆಗ್ರಾ, ದೆಹಲಿ, ಹೈದರಾಬಾದ್​ನ ಲ್ಯಾಬ್​ಗಳಲ್ಲಿ ಇಲ್ಲಿ ಚಿನ್ನ, ಪ್ಲಾಟಿನಂ ಮತ್ತು ಇತರೆ ಖನಿಜಗಳಿರುವುದು ಖಾತ್ರಿಯಾಗಿದೆ. ಇದಾದ ನಂತರದಲ್ಲಿ ಭಾರತ ಸರ್ಕಾರ ಖನಿಜ ಸಚಿವಾಲಯ ಕೆನಡಾದ ಖನಿಜ ಸರ್ವೇಕ್ಷಣಾ ಸಂಸ್ಥೆಯ ಜತೆಗೂಡಿ ಅಧ್ಯಯನ ನಡೆಸಿದ್ದು, ಮಡವರ ಪ್ರದೇಶದ ಇಕೋನಾದಲ್ಲಿರುವ ಗಿರಾರ್​ ನಲ್ಲಿ ಚಿನ್ನ ಮತ್ತು ಪ್ಲಾಟಿನಂ ನಿಕ್ಷೇಪ ಇರುವುದನ್ನು ಖಚಿತ ಪಡಿಸಿದೆ.

    ಕೆನಡಾದ ಏಜೆನ್ಸಿ ನೀಡಿರುವ ಮಾಹಿತಿ ಪ್ರಕಾರ, ಈ ನಿಕ್ಷೇಪ 25 ಕಿ.ಮೀ. ಉದ್ದ ಮತ್ತು ಎರಡೂವರೆ ಕಿ.ಮೀ. ಅಗಲದಲ್ಲಿ ಹರಡಿಕೊಂಡಿದೆ. ಖನಿಜ ನಿಕ್ಷೇಪ ಹೊರತೆಗೆಯಲು ಹೆಚ್ಚೇನೂ ಉತ್ಖನನ ಮಾಡಬೇಕಾಗಿಲ್ಲ. ನೆಲಮಟ್ಟದಿಂದ ಕೇವಲ ಒಂದು ಮೀಟರ್ ಆಳದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

    ಸೋನಾಭದ್ರ ಚಿನ್ನದ ನಿಕ್ಷೇಪದ ಕಾವಲಿಗೆ ಜಗತ್ತಿನಲ್ಲೇ ಅತಿ ಹೆಚ್ಚು ವಿಷ ಹೊಂದಿರುವ ಸರ್ಪಗಳಿವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts