More

    ಈ ಬಾರಿ ವಿದ್ಯಾರ್ಥಿಗಳಿಗೆ ಇರಲ್ಲ ರಿಯಾಯ್ತಿ ಬಸ್​ಪಾಸ್​; ಹಣ ಕೊಡಲ್ಲ ಎಂದು ಸರ್ಕಾರದ ಆದೇಶ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಆರ್ಥಿಕ ಸಂಕಷ್ಟದಿಂದಾಗಿ ರಾಜ್ಯ ಸಾರಿಗೆ ಸಂಸ್ಥೆ ಬಸ್​ಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಹೀಗಾಗಿ ನಾಲ್ಕು ನಿಗಮಗಳು ಸಂಕಷ್ಟದಲ್ಲಿವೆ.

    ಆದಾಯವಿಲ್ಲದೇ ಸೊರಗಿರುವ ಸಾರಿಗೆ ನಿಗಮಗಳು ಸಿಬ್ಬಂದಿ ಸಂಬಳಕ್ಕಾಗಿ ಸರ್ಕಾರದ ಮೊರೆ ಹೋಗಿವೆ. ಜೂನ್​ನಿಂದ ನವೆಂಬರ್​ ವರೆಗಿನ ಸಂಬಳಕ್ಕಾಗಿ 1,015.85 ಕೋಟಿ ರೂ. ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿವೆ.

    ಅದರಂತೆ, ಸರ್ಕಾರ ಕೂಡ ಹಂತಹಂತವಾಗಿ ಹಣವನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಇದೀಗ, ಆಗಸ್ಟ್​ ಹಾಗೂ ಸಪ್ಟೆಂಬರ್​ ಮಾಹೆ ವೇತನಕ್ಕೆ 423 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಈ ವೇಳೆ ವಿಧಿಸಲಾಗಿರುವ ಷರತ್ತುಗಳನ್ನು ಗಮನಿಸಿದರೆ, ಈ ಬಾರಿ ವಿದ್ಯಾರ್ಥಿಗಳ ರಿಯಾಯ್ತಿ ಬಸ್​ ಪಾಸ್​ಗೆ ಕುತ್ತು ಬರಲಿದೆ.

    ಇದನ್ನೂ ಓದಿ; ಹೆರಿಗೆಗೆಂದು ದಾಖಲಾದ್ರು; ಆಸ್ಪತ್ರೆ ಬಿಲ್​ ಕಟ್ಟೋಕೆ ಗಂಡುಶಿಶುವನ್ನೇ ಮಾರಿದರು…! 

    ಸರ್ಕಾರದ ಮೊತ್ತವನ್ನು ಅಧಿಕಾರಿ ಹಾಗೂ ಸಿಬ್ಬಂದಿಯ ಮೂಲ ವೇತನ ಹಾಗೂ ತುಟ್ಟಿಭತ್ಯೆಯ ಶೇ.75 ಪಾವತಿಸಲು ಬಳಸಿಕೊಳ್ಳುವುದು. ಉಳಿದ ಮೊತ್ತಕ್ಕೆ ಸ್ವಂತ ಸಂಪನ್ಮೂಲ ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ವೇತನ ಹೊರತುಪಡಿಸಿ ಬೇರಾವುದಕ್ಕೂ ಇದನ್ನು ಬಳಸಿಕೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

    ಪ್ರಸಕ್ತ ಸಾಲಿಗೆ ಶಾಲಾ- ಕಾಲೇಜುಗಳು ಆರಂಭವಾದಲ್ಲಿ, ಉಚಿತ ಅಥವಾ ರಿಯಾಯಿತಿ ಬಸ್​ಪಾಸ್​ಗಳನ್ನು ವಿತರಿಸಿದಲ್ಲಿ ಅದರ ಮೊತ್ತವನ್ನು ವಿದ್ಯಾರ್ಥಿ ಅಥವಾ ಸಂಸ್ಥೆಯಿಂದಲೇ ಭರಿಸತಕ್ಕದ್ದು. ಸರ್ಕಾರದಿಂದ ಯಾವುದೇ ಸಹಾಯಧನ ಒದಗಿಸಲಾಗುವುದಿಲ್ಲ. ಇತರ ಬಸ್​ ಪಾಸ್​ ರಿಯಾಯಿತಿಯನ್ನು ನೀಡಲಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

    ಇದನ್ನೂ ಓದಿ; 20 ಲಕ್ಷ ಕರೊನಾ ಕೇಸ್​ಗಳು ಒಂದೇ ತಿಂಗಳಲ್ಲಿ…! 28 ಸಾವಿರ ಸಾವು; ಭಾರತದ್ದು ಜಗತ್ತಿನಲ್ಲೇ ದಾಖಲೆ….!

    ಸಿಬ್ಬಂದಿ ಸಂಬಳವನ್ನೇ ಪಾವತಿಸಲು ಪರದಾಡುತ್ತಿರುವ ಸಾರಿಗೆ ಸಂಸ್ಥೆ ತಾವೇ ವೆಚ್ಚ ಭರಿಸಿ ವಿದ್ಯಾರ್ಥಿಗಳಿಗೆ ಬಸ್​ ಪಾಸ್ ನೀಡಲಿವೆಯೇ ಎಂಬುದು ಯಕ್ಷ ಪ್ರಶ್ನೆಯೇನಲ್ಲ. ಹೀಗಾಗಿ ಈ ಬಾರಿ ಶಾಲಾ-ಕಾಲೇಜುಗಳು ಶುರುವಾದರೂ ರಿಯಾಯ್ತಿ ಬಸ್​ಪಾಸ್​ಗಳನ್ನು ವಿದ್ಯಾರ್ಥಿಗಳು ಮರೆಯಲೇಬೇಕು ಎಂಬುದಂತೂ ಖಚಿತ.

    ಈ ಬಾರಿ ವಿದ್ಯಾರ್ಥಿಗಳಿಗೆ ಇರಲ್ಲ ರಿಯಾಯ್ತಿ ಬಸ್​ಪಾಸ್​; ಹಣ ಕೊಡಲ್ಲ ಎಂದು ಸರ್ಕಾರದ ಆದೇಶ

    ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts