More

    ಸಚಿವ ಸಂಪುಟ ವಿಸ್ತರಣೆ: ವಲಸಿಗರಿಗೆ ಮಣೆ ಹಾಕದ ಕಾಂಗ್ರೆಸ್ ಹೈಕಮಾಂಡ್​

    ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ನೂತನ​ ಸಚಿವರು ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಇಂದು ಬೆಳಗ್ಗೆ 11.45ಕ್ಕೆ ರಾಜಭವನದಲ್ಲಿ 24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಅನೇಕ ಹಿರಿಯರಿಗೆ ಕೋಕ್​ ನೀಡಿ ಹೊಸಬರಿಗೆ ಮಣೆ ಹಾಕಲಾಗಿದೆ. ಅದರಲ್ಲೂ ವಲಸಿಗರಿಗಂತೂ ಯಾವುದೇ ಸಚಿವ ಸ್ಥಾನವನ್ನು ನೀಡಲಾಗಿಲ್ಲ.

    ವಿಧಾನಸಭಾ ಚುನಾವಣೆ ವೇಳೆ ಅನೇಕ ನಾಯಕರು ವಿವಿಧ ಪಕ್ಷವನ್ನು ತೊರೆದು ಕಾಂಗ್ರೆಸ್​ ಸೇರಿದರು. ಕಾಂಗ್ರೆಸ್ಸಿನಿಂದ ಗೆದ್ದರೂ​ ಹೈಕಮಾಂಡ್​ ಸಚಿವ ಸ್ಥಾನವನ್ನು ನೀಡಿಲ್ಲ. ಹಲವು ವಲಸಿಗರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಲಕ್ಷ್ಮಣ್ ಸವದಿ, ಶಿವಲಿಂಗೇಗೌಡ, ಯು. ಬಿ. ಬಣಕಾರ್, ವೈ. ಗೋಪಾಲಕೃಷ್ಣ, ಗುಬ್ಬಿ ಶ್ರೀನಿವಾಸ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು.

    ಇದನ್ನೂ ಓದಿ: ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ

    ಲಕ್ಷ್ಮಣ ಸವದಿ, ಶಿವಲಿಂಗೇಗೌಡ ಹೆಸರು ಪ್ರಮುಖವಾಗಿ ಚರ್ಚೆಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಸಚಿವರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಸೋತಿರುವ ಜಗದೀಶ್ ಶೆಟ್ಟರ್ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇವರಿಗೂ ಸಚಿವ ಸ್ಥಾನ ಮಿಸ್ ಆಗಿದೆ. ವಲಸಿಗರ ಪೈಕಿ ಮಧು ಬಂಗಾರಪ್ಪರಿಗೆ ಮಾತ್ರ ಸಚಿವ ಸಿಕ್ಕಿದೆ. ಅವರು ಒಂದೂವರೆ ವರ್ಷದ ಹಿಂದೆಯೇ ಕಾಂಗ್ರೆಸ್ ಸೇರಿದ್ದರು. (ದಿಗ್ವಿಜಯ ನ್ಯೂಸ್​)

    ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!

    ನಮ್ಮ ಮಾವಂದ ಮೇ 31ಕ್ಕ ಮುಗಿತ…

    ದುಬೈ ರಾಜಕುಮಾರಿಯ ಪಲಾಯನದ ಕಥೆ-ವ್ಯಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts