More

    ಸಚಿವೆಗೆ ‘ಕೋವಿಡ್​ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್​ ಮುಖಂಡನ ಪ್ರಶ್ನೆ!

    ತಿರುವನಂತಪುರ: ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ‘ಕೋವಿಡ್ ರಾಣಿ’ಎಂದು ಕರೆಯುವ ಮೂಲಕ ಭಾರಿ ಟೀಕೆಗೆ ಒಳಗಾಗಿರುವ ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಯಾವುದೇ ಕಾರಣಕ್ಕೂ ಸಚಿವೆಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.

    ಕೆಲವೊಂದು ವಿದೇಶಿ ಮಾಧ್ಯಮಗಳು ಸಚಿವೆ ಶೈಲಜಾ ಅವರನ್ನು ರಾಕ್ ಸ್ಟಾರ್ ಎಂದು ಬಣ್ಣಿಸುತ್ತಿವೆ. ರಾಕ್​ ಸ್ಟಾರ್​ಗಿಂತಲೂ ರಾಣಿ ಎನ್ನುವುದು ಮೇಲಲ್ಲವೆ? ಹಾಗಿದ್ದ ಮೇಲೆ ನಾನು ರಾಣಿ ಎಂದು ಕರೆದಿದ್ದೇನೆ, ಅದರಲ್ಲಿ ತಪ್ಪೇನಿದೆ? ಕ್ಷಮೆ ಏಕೆ ಕೋರಬೇಕು ಎಂದು ತಮ್ಮ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ವಧು-ವರರಿಗೆ ಸಿಹಿ ಸುದ್ದಿ: ‘ಸಪ್ತಪದಿ’ಗೆ ಮುಹೂರ್ತ​ ಫಿಕ್ಸ್​

    ಕಳೆದ ಶುಕ್ರವಾರದಂದು (ಜೂನ್ 19) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಮಚಂದ್ರನ್, ಕೊಲ್ಲಿ ರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಕೋವಿಡ್ ಮುಕ್ತ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯ ಮಾಡಬೇಕು ಎಂದು ಆಗ್ರಹಿಸುತ್ತಿದ್ದರು.

    ಆ ಸಂದರ್ಭದಲ್ಲಿ ಆರೋಗ್ಯ ಸಚಿವೆ ಶೈಲಜಾ ಅವರ ವಿರುದ್ಧ ಕಿಡಿ ಕಾರಿದ್ದ ಅವರು, ರಾಜ್ಯದ ಜನತೆಯ ಆರೋಗ್ಯದ ಬಗ್ಗೆ ಆರೋಗ್ಯ ಸಚಿವೆ ಶೈಲಜಾ ಅವರಿಗೆ ಕಾಳಜಿಯಿಲ್ಲ. ಅವರು ಕೋವಿಡ್ ರಾಣಿ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೋಝಿಕ್ಕೋಡ್ ನಲ್ಲಿ ನಿಫಾ ವೈರಸ್ ವೇಳೆಯೂ ಹೀಗೆಯೇ ಕೆಲಸ ಮಾಡಿ, ನಿಫಾ ರಾಜಕುಮಾರಿ ಆಗಲು ಹೊರಟಿದ್ದರು ಎಂದಿದ್ದರು.

    ಕೋವಿಡ್​ ರಾಣಿ ಎಂದಿರುವ ಮಾತು ಬಹಳ ಟೀಕೆಗೆ ಒಳಗಾಗಿತ್ತು. ರಾಷ್ಟ್ರೀಯ ಪಕ್ಷದ ಮುಖಂಡರಾಗಿ ಒಂದು ಹೆಣ್ಣಿನ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿದ್ದು ತಪ್ಪು ಎಂದು ಹೇಳಿದ್ದರು. ಆದ್ದರಿಂದ ಕ್ಷಮೆ ಕೋರುವಂತೆ ಅನೇಕ ಮಂದಿ ಪಟ್ಟು ಹಿಡಿದಿದ್ದರು. ಅದಕ್ಕೆ ಉತ್ತರಿಸಿರುವ ರಾಮಚಂದ್ರನ್, ಹೆಣ್ಣನ್ನು ಗೌರವಿಸುವವನು ನಾನು. ನಾನು ಯಾವಾಗಲೂ ಮಹಿಳೆಯರ ಕಲ್ಯಾಣ ಮತ್ತು ಗೌರವಕ್ಕಾಗಿ ಮುಂದೆ ನಿಲ್ಲುವಂತಹ ವ್ಯಕ್ತಿ. ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಆಕಾಶದಿಂದ ಉದುರಿದ ಮುಖವಾಡದಂಥ ನಿಗೂಢ ವಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts