More

    ಸಾಮಾಜಿಕ ಕಾರ್ಯಕ್ಕೆ ಮೊದಲ ಪ್ರಾಶಸ್ತ್ಯ

    ಬೋರಗಾಂವ: ಅರಿಹಂತ ಉದ್ಯೋಗ ಸಮೂಹವು ಸಾಮಾಜಿಕ ಕಾರ್ಯಕ್ಕೆ ಆದ್ಯತೆ ನೀಡುವ ಜತೆಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ತಿಳಿಸಿದರು.

    ಸಮೀಪದ ಭೋಜ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉತ್ತಮ ಪಾಟೀಲ ಯುವಶಕ್ತಿ ಘಟಕ ಉದ್ಘಾಟನೆ, ಅಭಿಮಾನಿಗಳ ಬಳಗದಿಂದ ಅರಿಶಿಣ-ಕುಂಕುಮ ಹಾಗೂ ಹೋಂ ಮಿನಿಸ್ಟರ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಅರಿಹಂತ ಉದ್ಯೋಗ ಸಮೂಹದಿಂದ ತಾಲೂಕಿನ ಸಾಮಾಜಿಕ, ಕಲೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಪ್ರೇರಣೆ ನೀಡ ಲಾಗುತ್ತಿದೆ. ಮಹಿಳೆಯರು, ಯುವಕರಿಗೆ ಉದ್ಯೋಗ ಕಲ್ಪಿಸಿ ಬಡವರಿಗೆ ಸಮೂಹದಿಂದ ಸಹಾಯ ಮಾಡಲಾ ಗುತ್ತಿದೆ. ತಾಲೂಕಿನ ಜನತೆಗೆ ಸ್ವಂತ ಖರ್ಚಿನಲ್ಲಿ ಸಹಾಯ ಮಾಡುತ್ತಿರುವ ಯುವ ಮುಖಂಡನನ್ನು ವಿಧಾನಸಭೆಗೆ ಕಳುಹಿಸಲು ಎಲ್ಲರ ಸಹಕಾರ ಮುಖ್ಯ ಎಂದರು.

    ಮುಖಂಡ ಸುನೀಲ ಪಾಟೀಲ ಮಾತನಾಡಿ, ಕರೊನಾ ಪ್ರವಾಹದಂತಹ ಸಂಕಷ್ಟದ ಸ್ಥಿತಿಯಲ್ಲಿ ಅರಿಹಂತ ಉದ್ಯೋಗ ಸಮೂಹ ಎಲ್ಲರಿಗೂ ನೆರವು ನೀಡಿದೆ. ಉತ್ತಮ ಪಾಟೀಲ ಅವರ ರಾಜಕೀಯ ಭವಿಷ್ಯಕ್ಕೆ ಎಲ್ಲರೂ ಸಾಥ್ ನೀಡಬೇಕು ಎಂದರು.

    ಹೋಂ ಮಿನಿಸ್ಟರ್ ಸ್ಪರ್ಧೆಯಲ್ಲಿ ಪದ್ಮಜಾ ಕೇಸ್ತೆ ಪ್ರಥಮ, ಕಸ್ತೂರಿ ಉಪ್ಪಾರ ದ್ವಿತೀಯ, ಶ್ರದ್ಧಾ ಮಾನೆ ತೃತೀಯ, ರೇಷ್ಮಾ ಕೊಂಡೆಕರ ನಾಲ್ಕನೇ ಸ್ಥಾನ, ದಿವ್ಯಾ ಪಾಟೀಲ 5ನೇ ಸ್ಥಾನ, ಚಂದ್ರಿಕಾ ಘುಮರೆ 6ನೇ ಸ್ಥಾನ ಹಾಗೂ ಸ್ವಪ್ಲಾಲಿ ಕುಂಬಾರ ಅವರಿಗೆ 7ನೇ ಸ್ಥಾನ ಪಡೆದರು.

    ಮಾಜಿ ಶಾಸಕ ಸುಭಾಷ ಜೋಶಿ ಮಾತನಾಡಿದರು. ನಿಪ್ಪಾಣಿ ನಗರಸಭೆ ಮಾಜಿ ಅಧ್ಯಕ್ಷೆ ಶುಭಾಂಗಿ ಜೋಶಿ, ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಸುನೀಲ ಪಾಟೀಲ, ಗ್ರಾಪಂ ಅಧ್ಯಕ್ಷ ಘುಡುಸೋ ಮಕಾಂದರ, ಸದಸ್ಯೆ ಆಶಾರಾಣಿ ಪಾಟೀಲ, ಸಚಿನ ಕೆಸ್ತೆ, ಅಪ್ಪಾಸಾಬ ಕಡೋಲೆ, ಸುಹಾಸ ಚೌಗುಲೆ, ಅಭಿನಂದನ ಪಾಟೀಲ, ಸುಷ್ಮಾ ಕೆಸ್ತೆ, ಅಮೋಲ ಮುರಾಬಟ್ಟೆ, ಸುಪ್ರಿಯಾ ಕಡೋಲೆ, ದೀಪಾಲಿ ಚೌಗುಲೆ, ಶೀತಲ್ ಮುರಾಬಟ್ಟೆ, ಗಜಾನನ ಕಾವಡಕರ, ಸುಪ್ರಿಯಾ ಪಾಟೀಲ, ವೀರೇಂದ್ರ ಪಾಟೀಲ, ನಿತೀನ ಪಾಟೀಲ, ಸಂಜಯ ಪಾಟೀಲ, ಚಂದು ಪಾಟೀಲ, ಸಂಜಯ ಚೌಗುಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts