More

    ಹಳೆಯ ಗಾಡಿ ಮಾಲೀಕರಿಗೆ ಹೊಸ ಟ್ಯಾಕ್ಸ್​! ಶೀಘ್ರವೇ ಜಾರಿಯಾಗಲಿದೆ ಗ್ರೀನ್​ ಟ್ಯಾಕ್ಸ್​ ನಿಯಮ

    ನವದೆಹಲಿ: ಎಂಟು ವರ್ಷಕ್ಕಿಂತ ಹಳೆಯ ಗಾಡಿಗಳಿಗೆ ಫಿಟ್​ನೆಸ್​ ಪ್ರಮಾಣಪತ್ರವನ್ನು ನವೀಕರಿಸುವ ಸಮಯದಲ್ಲಿ ಗ್ರೀನ್​ ಟ್ಯಾಕ್ಸ್​ ವಿಧಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅನುಮೋದನೆ ನೀಡಿದ್ದಾರೆ. ರಸ್ತೆ ತೆರಿಗೆಯ ಶೇ. 10ರಿಂದ ಶೇ. 25ನ್ನು ಗ್ರೀನ್​ ಟ್ಯಾಕ್ಸ್​ ಆಗಿ ವಿಧಿಸುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂದು ಬಾಲ್ ಬಾಯ್, ಇಂದು ಪಾಕ್ ತಂಡದ ನಾಯಕ!

    ಎಂಟು ವರ್ಷಗಳಿಗಿಂತ ಹಳೆಯದಾದ ಸಾರಿಗೆ ವಾಹನಗಳಿಗೆ ಫಿಟ್​ನೆಸ್​ ಪ್ರಮಾಣ ಪತ್ರ ನವೀಕರಿಸುವ ಸಮಯದಲ್ಲಿ ಗಸಿರು ತೆರಿಗೆ ವಿಧಿಸಲಾಗುವುದು. ವೈಯಕ್ತಿಕ ವಾಹನಗಳಿಗೆ ನೋಂದಣಿ ಪ್ರಮಾಣಿಕರಣ (ಆರ್​ಸಿ) ನವೀಕರಣದ ವೇಳೆಯಲ್ಲಿ ಹಸಿರುವ ತೆರಿಗೆ ವಿಧಿಸಲಾಗುವುದು. 15 ವರ್ಷಗಳ ನಂತರ ಸಾರ್ವಜನಿಕ ಸಾರಿಗೆ ವಾಹನಗಳ ಹಸಿರು ತೆರಿಗೆಯನ್ನು ಕಡಿಮೆ ಮಾಡಲಾಗುವುದು. ಹೆಚ್ಚು ಕಲುಷಿತ ನಗರಗಳಲ್ಲಿ ನೋಂದಾಯಿತ ವಾಹನಗಳಿಗೆ ಹೆಚ್ಚಿನ ತೆರಿಗೆಯನ್ನು (ರಸ್ತೆ ತೆರಿಗೆಯ ಶೇಕಡಾ 50) ವಿಧಿಸಲು ಸರ್ಕಾರ ಪ್ರಸ್ತಾಪಿಸಿದೆ.

    ತೆರಿಗೆ ಮೂಲಕ ಸಂಗ್ರಹಿಸಿದ ಆದಾಯವನ್ನು ಮಾಲಿನ್ಯ ನಿಭಾಯಿಸಲು ಬಳಸಲಾಗುತ್ತದೆ ಎಂದು ಸಾರಿಗೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

    ಸರ್ಕಾರಿ ಇಲಾಖೆ ಮತ್ತು ಪಿಎಸ್​ಯು ಒಡೆತನದ 15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳ ನೋಂದಣಿಯನ್ನು ರದ್ದು ಗೊಳಿಸುವ ನೀತಿಗೂ ಗಡ್ಕರಿ ಅವರು ಅನುಮೋದನೆ ನೀಡಿದ್ದಾರೆ. ಈ ನಿಯಮ 2022 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

    ಇದನ್ನೂ ಓದಿ: ನಾಳೆ ಮಲ್ಟಿಪ್ಲೆಕ್ಸ್​ಗಳಲ್ಲೂ ಸಿನಿಮಾ ಟಿಕೆಟ್​ ದರ 10 ರೂಪಾಯಿ! ವಿಶೇಷ ದಿನಕ್ಕೆ ವಿಶೇಷ ಕೊಡುಗೆ

    ಹಸಿರು ತೆರಿಗೆಯು ವಾಹನದ ಮೇಲೆ ನಿರ್ಧಾರವಾಗುತ್ತದೆ. ಪೆಟ್ರೋಲ್​/ ಡೀಸೆಲ್​ ವಾಹನ, ಎಲೆಕ್ಟ್ರಿಕ್​ ವಾಹನ, ಕೃಷಿ ವಾಹನ ಹೀಗೆ ವಾಹನದ ಮೇಲೆ ಹಸಿರು ತೆರಿಗೆ ನಿರ್ಧರಿಸುವುದಾಗಿ ತಿಳಿಸಲಾಗಿದೆ. ಕೃಷಿಯಲ್ಲಿ ಬಳಸುವ ವಾಹನಗಳಾದ ಟ್ರಾಕ್ಟರ್, ಹಾರ್ವೆಸ್ಟರ್, ಟಿಲ್ಲರ್ ಇತ್ಯಾದಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದು. ‘ಹಸಿರು ತೆರಿಗೆ’ಯಿಂದ ಸಂಗ್ರಹಿಸಿದ ಆದಾಯವನ್ನು ಪ್ರತ್ಯೇಕ ಖಾತೆಯಲ್ಲಿ ಇಡಲಾಗುವುದು ಮತ್ತು ಮಾಲಿನ್ಯವನ್ನು ನಿಭಾಯಿಸಲು ಬಳಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

    ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts