More

    ‘ನಿಮ್ಮೂರು’ ಚಿತ್ರದ ಆಡಿಯೋ ಬಿಡುಗಡೆ: ಹೊಸಬರ ಚಿತ್ರಕ್ಕೆ ಚಿನ್ನೇಗೌಡ್ರು ಸಾಥ್

    ಬೆಂಗಳೂರು: ಕರೊನಾ ಬಂದು ಇಡೀ  ಜಗತ್ತೇ ತತ್ತರಿಸಿದೆ. ವರ್ಷವಾಗುತ್ತ ಬಂದರೂ ಜನ ಥಿಯೇಟರಿಗೆ ಬರ್ತಿಲ್ಲ. ಆದರೆ  ಹೊಸ ಚಿತ್ರಗಳ ನಿರ್ಮಾಣ, ಆಡಿಯೋ ಬಿಡಗಡೆ ಕಾರ್ಯಕ್ರಮ ನಡೆಯುತ್ತಲೇ ಇವೆ. ಈಗ ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ನಿಮ್ಮೂರು ಚಲನಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು ಹಾಗೂ ಯುವನಟಿ ರೂಪಿಕಾ, ಭಾಮ ಹರೀಶ್ ಅವರು  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

    ಇದನ್ನೂ ಓದಿ: ಪ್ರಾಣಿಗಳ ಉಳಿವಿಗೆ ಝುೂ, ಸಫಾರಿ ತ್ಯಜಿಸಿ

    ಹೊಸಬರೇ ಸೇರಿಕೊಂಡು ಈ ಚಿತ್ರ ಮಾಡಿದ್ದೀರಿ, ಇದೇ ಖುಷಿ ಸಿನಿಮಾ ಬಿಡುಗಡೆಯಾದ ಮೇಲೂ ಇರಲಿ ಎಂದು ಚಿನ್ನೇಗೌಡ್ರು ಹೇಳಿದರೆ, ಚಿತ್ರ ಬಿಡುಗಡೆ ಮಾಡುವಾಗ ಒಳ್ಳೇ ವಿತರಕರನ್ನು ಇಟ್ಟುಕೊಳ್ಳಿ, ಅವರು ಯಾವ ರೀತಿ ಹೋಗಬೇಕು ಎಂದು ಮಾರ್ಗದರ್ಶನ ನೀಡುತ್ತಾರೆ. ಸಿನಿಮಾನ ಹೇಗೋ ಮಾಡಬಹುದು, ರಿಲೀಸ್ ಮಾಡುವುದು ತುಂಬಾ ಕಷ್ಟವಾಗಿಬಿಡುತ್ತೆ ಎಂದು ಹೇಳಿದರು ಚಿನ್ನೇಗೌಡ್ರು.

    ‘ನಿಮ್ಮೂರು’ ಚಿತ್ರದ ಆಡಿಯೋ ಬಿಡುಗಡೆ: ಹೊಸಬರ ಚಿತ್ರಕ್ಕೆ ಚಿನ್ನೇಗೌಡ್ರು ಸಾಥ್ ‘ನಿಮ್ಮೂರು’ ಚಿತ್ರದ ಆಡಿಯೋ ಬಿಡುಗಡೆ: ಹೊಸಬರ ಚಿತ್ರಕ್ಕೆ ಚಿನ್ನೇಗೌಡ್ರು ಸಾಥ್
    ಕಳೆದ ಐದಾರು ವರ್ಷಗಳಿಂದ ಚಿತ್ರರಂಗದಲ್ಲಿ  ಕೆಲಸ ಮಾಡುತ್ತಿರುವ ವಿಜಯ್ ಎಸ್. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ರಾಜಶೇಖರ ಚಂದ್ರಶೇಖರ್ ಡಾವಣಗೇರಿ(ರಾಣೆಬೆನ್ನೂರು) ಈ ಚಿತ್ರದ ನಿರ್ಮಾಪಕರು. ನಿರ್ಮಾಪಕರ ಬ್ಯಾನರ್ ಹೆಸರು ಹಠವಾದಿ ಸಿನಿ ಕ್ರಿಯೇಶನ್ಸ್, ನಿರ್ಮಾಪಕರು ರವಿಚಂದ್ರನ್ ಅಭಿಮಾನಿ, ಜೀವನದಲ್ಲಿ ಸಾಧಿಸುವ ಹಠ ಇರಬೇಕು, ಆಗಲೇ ನಾವೇನಾದರೂ ಸಾಧನೆ ಮಾಡಲು ಸಾಧ್ಯ ಎನ್ನುವುದು ನಿರ್ಮಾಪಕರ ಸ್ಪಷ್ಟನೆ. ನಾವೆಲ್ಲ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ಒಂದು ಹಳ್ಳಿ ಎಂದಮೇಲೆ ಅಲ್ಲಿ  ಸಾಮಾನ್ಯವಾಗಿರುವ ಒಂದು ಪ್ರೀತಿ, ರಾಜಕೀಯ, ರೈತರ ಸಮಸ್ಯೆಗಳು ಇದನ್ನೆಲ್ಲ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಇದರ ಜೊತೆಗೆ ಒಂದೊಳ್ಳೆ ಸಂದೇಶ ಚಿತ್ರದಲ್ಲಿದೆ ಎಂದು ಹೇಳಿದರು.

    ಇದನ್ನೂ ಓದಿ: PHOTO GALLERY| ಅಣ್ಣಾವ್ರ ಅಪರೂಪದ ಫೋಟೋಗಳಿರುವ ಕ್ಯಾಲೆಂಡರ್ ಬಿಡುಗಡೆ

    ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ವಿಜಯ್ ನಿಮ್ಮೂರು ಎಂದಾಕ್ಷಣ ಚಿತ್ರ ನೋಡುತ್ತಿರುವ ಎಲ್ಲರಿಗೂ ಅವರವರ ಹುಟ್ಟೂರು ನೆನಪಾಗುತ್ತದೆ. ನಿರ್ಮಾಪಕರು ನನ್ನ ಸ್ನೇಹಿತರು. ಈ ಕಥೆ ರೆಡಿ ಮಾಡಿಕೊಂಡು ಯಾರಬಳಿ ಮಾಡಿಸುವುದೆಂದು ಯೋಚಿಸುತ್ತಿದ್ದಾಗ ಇವರು ಸಿಕ್ಕರು. ಒಳ್ಳೇ ಸ್ಟೋರಿ ಚಿತ್ರದಲ್ಲಿದೆ. 3 ಫೈಟ್, 5 ಹಾಡುಗಳು ಚಿತ್ರದಲ್ಲಿವೆ, ಕೊಳ್ಳೇಗಾಲ, ಹಾಸನ, ಬೆಂಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗ ಸೇರಿ 76 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ.

    ಲಕ್ಕಿರಾಮ್ ಚಿತ್ರದ ನಾಯಕನಾಗಿದ್ದು, ವೀಣಾ ಗಂಗಾಧರ್ ನಾಯಕಿಪಾತ್ರ ನಿರ್ವಹಿಸಿದ್ದಾರೆ. ಸಮಾರಂಭದಲ್ಲಿ ಅತಿಥಿಯಾಗಿದ್ದ ಆನಂದ ಪಾಟೀಲ ಹುಲಿಕಟ್ಟಿ ಆಗಮಿಸಿದ್ದರು. ಸಂಗೀತ ನಿರ್ದೇಶಕರಾಗಿ ಮಧುಸೂದನ್ ಡಿ. ಅಭಿನಂದನ್ ಕಷ್ಯಪ್ ಕೆಲಸ ಮಾಡಿದ್ದಾರೆ. ವಿ. ಪಳನಿವೇಲು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಚಿತ್ರದ ಉಳಿದ ಪಾತ್ರಗಳಲ್ಲಿ ತ್ರಿವಿಕ್ರಮ್, ಮೀಸೆ ಅಂಜಿನಪ್ಪ, ಶ್ರೀಕಾಂತ್ ಹೊನ್ನವಳ್ಳಿ, ಸಿದ್ದು ಮಂಡ್ಯ, ಮಂಜುನಾಥ್, ರಾಜಶೇಖರ್ ಹಾಗೂ ಇತರರು ನಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts