More

    ಟೆರರ್​ ಫಂಡಿಂಗ್: ಕಾಶ್ಮೀರ, ದೆಹಲಿಯಲ್ಲಿ ಎನ್​​ಜಿಒ, ಟ್ರಸ್ಟ್​ಗಳ ಮೇಲೆ ಎನ್​ಐಎ ದಾಳಿ

    ಶ್ರೀನಗರ: ಟೆರರ್​ ಫಂಡಿಂಗ್​ ಕೇಸ್​ಗೆ ಸಂಬಂಧಿಸಿ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಗುರುವಾರವೂ ದಾಳಿ ಮುಂದುವರಿಸಿದ್ದು, ಕಾಶ್ಮೀರ ಕಣಿವೆ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯ ಒಂಭತ್ತು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ. ಆರು ಎನ್​ಜಿಒ ಮತ್ತು ಟ್ರಸ್ಟ್​ಗಳಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಈ ದಾಳಿ ನಡೆದಿದ್ದು, ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

    ಫಲಾಹ್​ -ಏ-ಆಮ್​ ಟ್ರಸ್ಟ್, ಚಾರಿಟಿ ಅಲಯನ್ಸ್ ದೆಹಲಿ, ಹ್ಯೂಮನ್ ವೆಲ್​ಫೇರ್​ ಫೌಂಡೇಷನ್​, ಜೆಕೆ ಯತೀಮ್​ ಫೌಂಡೇಷನ್​, ಸಾಲ್​ವೇಷನ್ ಮೂವ್​ಮೆಂಟ್​ ಮತ್ತು ಜೆಕೆ ವಾಯ್ಸ್ ಆಫ್ ವಿಕ್ಟಿಮ್ಸ್ ಎಂಬ ಎನ್​ಜಿಒ/ಟ್ರಸ್ಟ್​ಗಳ ಕಚೇರಿ ಮೇಲೆ ದಾಳಿ ನಡೆದಿರುವಂಥದ್ದು. ಟ್ರಸ್ಟ್​ ಮತ್ತು ಎನ್​ಜಿಒ ಕೆಲಸಗಳಿಗೆ ಬಂದ ದೇಣಿಗೆ, ಅನುದಾನದ ಹಣವನ್ನು ಪ್ರತ್ಯೇಕತಾವಾದಿ ಮತ್ತು ದೇಶ ವಿರೋಧಿ ಕೆಲಸಗಳಿಗೆ ವ್ಯಯಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಈ ದಾಳಿಯನ್ನು ನಡೆಸಲಾಗಿದೆ ಎಂದು ಎನ್​ಐಎ ಹೇಳಿದೆ.

    ಇದನ್ನೂ ಓದಿ: ಇಸ್ಲಾಮಾಬಾದ್​ನ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳು 3,000- ಅವರ ದೇಗುಲ ನಿರ್ಮಾಣಕ್ಕೆ ನೂರು ಅಡ್ಡಿ!

    ಈ ಸಂಬಂಧ ಅಕ್ಟೋಬರ್ 8ರಂದು ಪ್ರಕರಣ ದಾಖಲಾಗಿದ್ದು, ಟೆರರ್ ಫಂಡಿಂಗ್ ವಿಚಾರವಾಗಿ ಎನ್​ಐಎ ವಿಸ್ತೃತ ತನಿಖೆ ಶುರುಮಾಡಿದೆ. ಇದರ ಭಾಗವಾಗಿ ದಾಳಿ ನಡೆದಿದ್ದು, ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

    ರೇಪ್ ಮತ್ತು ಇತರೆ ಕ್ರೈಂ ಹೆಚ್ಚಾಗಲಿವೆ – ಪಿಡಿಪಿ ನಾಯಕ ಸುರಿಂದರ್ ಚೌಧರಿ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts