More

    ಐಸಿಸ್​ ಲಿಂಕ್​ ಹೊಂದಿದ್ದ ಬೆಂಗಳೂರು ನಿವಾಸಿಯ ಬಂಧನ; ನಿಷೇಧಿತ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿದ್ದ ತಾಖಿರ್

    ಬೆಂಗಳೂರು: ಐಸಿಸ್ ಸೇರಿ ಕೆಲವು ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರು ನಿವಾಸಿ ಮುಹಮ್ಮದ್​ ತಾಖಿರ್ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ಬಂಧಿದ್ದಾರೆ.

    ರಾಜಧಾನಿಯಲ್ಲಿ ನೆಲೆಸಿರುವ ಮುಹಮ್ಮದ್​ ತಾಖಿರ್​ನನ್ನು ಎನ್​ಐಎ ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಇದೇ ವರ್ಷದ ಏಪ್ರಿಲ್​ನಲ್ಲಿ ಈತನ ಇನ್ನಿಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್​ ನಾಸಿರ್ ಅವರನ್ನು ಬಂಧಿಸಿದ್ದ ಎನ್​ಐಎ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಈ ಕೇಸ್ ಹಿನ್ನೆಲೆಯಲ್ಲಿ ಮುಹಮ್ಮದ್ ತಾಖಿರ್​ ಸಂಬಂಧ ಬೆಳಕಿಗೆ ಬಂದಿತ್ತು.

    ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿದ್ದ ಗೋವಿಗೆ ಹಗ್ಗ ಕಟ್ಟಿ ಎಳೆದು ತುಂಬಿಕೊಂಡ ಹೋದ ಕಳ್ಳರು; ಘಟನೆ ಖಂಡಿಸಿ ನಾಳೆ ಪ್ರತಿಭಟನೆ

    ನಿಷೇಧಿತ ಸಂಘಟನೆಗಳಾದ ಐಎಸ್​ಐಎಸ್​, ಐಎಸ್​ಐಎಲ್ ಹಾಗೂ ಡಾಯಿಷ್​ ಮುಂತಾದವುಗಳ ಜತೆ ತಾಖಿರ್ ನಿರಂತರ ಸಂಬಂಧ ಹೊಂದಿದ್ದ. ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿದ್ದ ಈತ ಮುಸ್ಲಿಂ ಯುವಕರನ್ನು ಸೆಳೆದು ಖುರಾನ್ ಸರ್ಕಲ್ ಎಂಬ ಗ್ರೂಪ್​ಗೆ ಸೇರಿಸಿಕೊಂಡು ಅವರನ್ನು ಐಸಿಸ್​ಗೆ ಸೇರಲು ಸಿರಿಯಾಗೆ ಕಳಿಸುತ್ತಿದ್ದ.

    ಇದನ್ನೂ ಓದಿ: ಕುಡಿದು ಕಾರು ಚಲಾಯಿಸಿದ್ದ, ತಡೆದಿದ್ದಕ್ಕೆ ‘ನಾನ್ಯಾರು ಗೊತ್ತಾ?’ ಎಂದು ಪೊಲೀಸ್​ಗೇ ಕಾರು ಗುದ್ದಿಸಿ ಕೊನೆಗೂ ಸಿಕ್ಕಿಬಿದ್ದ..

    2013ರಲ್ಲಿ ಕಾನೂನುಬಾಹಿರವಾಗಿ ಸಿರಿಯಾಗೆ ಭೇಟಿ ನೀಡಿದ್ದ ಈತ ನಿಷೇಧಿತ ಸಂಘಟನೆಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ, ಭಾರತೀಯ ಮುಸ್ಲಿಮರ ಸಹಕಾರ ಒದಗಿಸುವ ಭರವಸೆಯನ್ನೂ ನೀಡಿದ್ದ ಎಂದು ಎನ್​ಐಎ ತಿಳಿಸಿದೆ.

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿಡಿಲ ಹೊಡೆತಕ್ಕೆ ತಲೆ ಸೀಳಿ ಹೋದರೂ ಬದುಕುಳಿದ ರೈತ; ಮತ್ತೊಂದೆಡೆ ಸಿಡಿಲಿನಿಂದಾಗಿ ಇಬ್ಬರು ಹಾಗೂ 13 ಕುರಿಗಳ ಸಾವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts