More

    ಕರೊನಾ ವಿಷಯದಲ್ಲಿ ಇನ್ನು ಒಂದೂವರೆ ತಿಂಗಳು ತುಂಬಾ ಮುಖ್ಯ

    ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಕರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ಇರುವಂತೆ ಕಾಣಿಸುತ್ತಿದೆ. ಈ ವಿಷಯವನ್ನು ಕೇಂದ್ರ ಸರ್ಕಾರ ಕೂಡ ಖಚಿತಪಡಿಸಿದ್ದು, ಇದುವರೆಗೂ ಕರೊನಾ ಸೋಂಕು ಸಮುದಾಯಿಕ ಹರಡುವಿಕೆ ಹಂತ ತಲುಪಿಲ್ಲ ಎಂದು ಹರ್ಷ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ 3.0 ಸಂದರ್ಭದಲ್ಲಿ ದೇಶಾದ್ಯಂತ ಹಲವು ವಿನಾಯ್ತಿಗಳನ್ನು ಘೋಷಿಸಲಾಗಿದೆ.

    ಆದರೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್​) ವೈದ್ಯರ ಮಾತನ್ನು ನಂಬುವುದಾದರೆ, ಕರೊನಾ ಸೋಂಕು ಸದ್ಯ ನಿಯಂತ್ರಣದಲ್ಲಿ ಇರುವಂತೆ ಕಾಣುತ್ತಿದೆ. ಆದರೂ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ಮುಂದಿನ ನಾಲ್ಕು ಅಥವಾ ಆರು ವಾರ (ಒಂದೂವರೆ ತಿಂಗಳು) ಭಾರತದ ಪಾಲಿಗೆ ತುಂಬಾ ಮಹತ್ವವಾಗಿದೆ.

    ಇದನ್ನೂ ಓದಿ: ಮದುವೆಗೋ, ಮಸಣಕೋ? ಎಲ್ಲಿ, ಎಷ್ಟು ಜನ ಸೇರಬಹುದು? ಕೇಂದ್ರದ ಪರಿಷ್ಕೃತ ಆದೇಶ ಪ್ರಕಟ

    ಈ ಎಚ್ಚರಿಕೆಯನ್ನು ನೀಡಿರುವ ಏಮ್ಸ್​ನ ವೈದ್ಯ ಡಾ. ರಣದೀಪ್​ ಗುಲೇರಿಯಾ, ಕರೊನಾ ಸೋಂಕಿನ ಏರಿಳಿತದ ಗತಿ ಚಿಂತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ರಾಷ್ಟ್ರದಲ್ಲಿ ಕರೊನಾ ಸೋಂಕಿನ ಹರಡುವಿಕೆ ಕುರಿತು ನಿಗಾವಹಿಸಿರುವ ಕೇಂದ್ರ ಸರ್ಕಾರದ ಕೋರ್​ ಟೀಂನ ಭಾಗವಾಗಿರುವ ಡಾ. ಗುಲೇರಿಯಾ ಸ್ವತಃ ಶ್ವಾಸಕೋಶ ತಜ್ಞರಾಗಿದ್ದಾರೆ. ಲಾಕ್​ಡೌನ್​ನಿಂದಾಗಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂಬುದು ನಿಜ. ಆದರೆ, ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗೆಂದು ಲಾಕ್​ಡೌನ್​ ಅನ್ನು ಮುಂದುವರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ಭಾರತದ ಪಾಲಿಗೆ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲ್ಯಾಬ್​ನಲ್ಲಿ ಕರೊನಾವನ್ನು ಮಣಿಸಿದ ಆ್ಯಂಟಿಬಾಡಿ, ಹಾಲೆಂಡ್​ನಲ್ಲಿ ಪ್ರಯೋಗ

    ರಾಷ್ಟ್ರದಲ್ಲಿ ಸೋಂಕಿತ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಹಾಗೆಂದು ಅದು ನಿಯಂತ್ರಣವನ್ನು ಮೀರಿ ಹೆಚ್ಚಾಗುತ್ತಿಲ್ಲ ಎಂಬುದು ಒಂದೇ ಸಮಾಧಾನದ ಸಂಗತಿ ಎಂದು ತಿಳಿಸಿದ್ದಾರೆ.

    ಸಿದ್ಧತೆಗೆ ಅನುಕೂಲವಾಯಿತು: ಲಾಕ್​ಡೌನ್​ನಿಂದ ಸೋಂಕು ಹರಡುವಿಕೆ ನಿಯಂತ್ರಿಸಲು ಸಾಧ್ಯವಾಯಿತು. ಜತೆಗೆ, ಸೋಂಕಿತರಿಗೆ ಚಿಕಿತ್ಸೆ ಕೊಡಲು ಅಗತ್ಯವಾದ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿತು ಎಂದು ಡಾ. ಗುಲೇರಿಯಾ ಹೇಳಿದ್ದಾರೆ.
    ಮೇ 5ರ ಸಂಜೆಯ ವರದಿ ಪ್ರಕಾರ ಭಾರತದಲ್ಲಿನ ಕೋವಿಡ್​ ಸೋಂಕಿತರ ಸಂಖ್ಯೆ 46,711ಕ್ಕೆ ಹೆಚ್ಚಳವಾಗಿದೆ. ಚಿಕಿತ್ಸೆ ಪಡೆಯುತ್ತಿರುವ 31,967 ಮಂದಿ ಇದರಲ್ಲಿ ಸೇರಿದ್ದಾರೆ. 1,583 ಮಂದಿ ಮೃತಪಟ್ಟಿದ್ದಾರೆ.

    ಕರೊನಾ ಕಲಿಸಿದ ಪಾಠಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts