More

    ಏಮ್ಸ್ ಅರ್ಧ ದಿನ ಮುಚ್ಚುವಿಕೆಗೆ ‘ಇಂಡಿಯಾ’ ವಿರೋಧ: ನಿರ್ಧಾರ ವಾಪಸ್​..!

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​) ಮತ್ತು ರಾಷ್ಟ್ರ ರಾಜಧಾನಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗಳು ಸೋಮವಾರ ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದ್ದು, ‘ಇಂಡಿಯಾ’ ಬಣದ ಮುಖಂಡರು, ಕಾರ್ಯಕರ್ತರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾದ ನಂತರ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.

    ಇದನ್ನೂ ಓದಿ: ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದವನ ಬಂಧನ

    ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ಭವ್ಯವಾದ ಸಮಾರಂಭವನ್ನು ಕಣ್ತುಂಬಿಕೊಳ್ಳಲು ತನ್ನ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ನಿರ್ಣಾಯಕ ಕ್ಲಿನಿಕಲ್ ಸೇವೆಗಳು ಕಾರ್ಯನಿರ್ವಹಿಸುತ್ತವೆ ಎಂದು ಅಧಿಕೃತ ಪ್ರಕಟಣೆಯು ಸಾರ್ವಜನಿಕರಿಗೆ ಭರವಸೆ ನೀಡಿದ್ದರೂ, ದಿನನಿತ್ಯದ ವೈದ್ಯಕೀಯ ಚಟುವಟಿಕೆಗಳನ್ನು ವಿರಾಮಗೊಳಿಸುವ ನಿರ್ಧಾರ ಸರಿಯಲ್ಲ ಎಂದು ಕಾಂಗ್ರೆಸ್​ ಮತ್ತು ಮಿತ್ರಪಕ್ಷಗಳಿಂದ ವಿರೋಧ ಎದುರಿಸಿದ ಪರಿಣಾಮ ಏಮ್ಸ್​ ಆಡಳಿತ ತನ್ನ ನಿರ್ಧಾರವನ್ನು ಪನರ್​ಪರಿಶೀಲಿಸಿತು. ಸೋಮವಾರ ಮಧ್ಯಾಹ್ನ 2:30ರ ವರೆಗೆ ಸ್ಥಗಿತಗೊಳಿಸುವ ವೈದ್ಯಕೀಯ ಚಟುವಟಿಕೆಗಳನ್ನು ಮುಂದುವರಿಸಲು ತೀರ್ಮಾನ ತೆಗೆದುಕೊಂಡಿತು.

    ‘ಇಂಡಿಯಾ’ ನಾಯಕರು ವಿರೋಧ: “ನಮಸ್ಕಾರ, ಮಾನವರೇ. ದಯವಿಟ್ಟು 22 ರಂದು ವೈದ್ಯಕೀಯ ತುರ್ತು ಪರಿಸ್ಥಿತಿಗೆ ಹೋಗಬೇಡಿ, ದೆಹಲಿಯ ಏಮ್ಸ್​ ಮರ್ಯಾದಾ ಪುರುಷೋತ್ತಮ್ ರಾಮ್ ಅವರನ್ನು ಸ್ವಾಗತಿಸಲು ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ಲಾರ್ಡ್ ರಾಮ್ ಒಪ್ಪುತ್ತಾರೆಯೇ? ಅವರನ್ನು ಸ್ವಾಗತಿಸಲು ಆರೋಗ್ಯ ಸೇವೆಗಳಿಗೆ ಅಡ್ಡಿಯಾಗಿದೆ. ಹೇ ರಾಮ್, ಹೇ ರಾಮ್!” ಎಂದು ‘ಇಂಡಿಯಾ’ ಕೂಟದ ಮುಖಂಡ ಚತುರ್ವೇದಿ X(ಎಕ್ಸ್​) ನಲ್ಲಿ ಬರೆದುಕೊಂಡಿದ್ದರು.

    ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಾಕೇತ್ ಗೋಖಲೆ ಏಮ್ಸ್​ ನಿರ್ಧಾರವನ್ನು ಟೀಕಿಸಿದ್ದರು. ಏಮ್ಸ್ ಗೇಟ್‌ಗಳ ಹೊರಗೆ ವೈದ್ಯಕೀಯ ಸೇವೆಗಳಿಗೆ ಕಾಯುತ್ತಿರುವವರ ದುಃಸ್ಥಿತಿಯನ್ನು ಎತ್ತಿ ತೋರಿಸಿದ್ದಾದ್ದರು.
    ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್ ಸಹ ಇದೇ ರೀತಿಯ ಭಾವನೆ ಹೊರಹಾಕಿದ್ದರು. ರಾಜಕೀಯಕ್ಕಾಗಿ ರೋಗಿಯ ಜೀವಕ್ಕೆ ಅಪಾಯ ಬಂದೊದಗಿದೆ ಎಂದು ಹೇಳಿದ್ದರು.

    ಭಾರತದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಏಮ್ಸ್ ಗೇಟ್‌ಗಳಲ್ಲಿ ಅಕ್ಷರಶಃ ಜನರು ಚಳಿಯಲ್ಲಿ ಮಲಗಿದ್ದಾರೆ. ಅಪಾಯಿಂಟ್‌ಮೆಂಟ್‌ಗಾಗಿ ಕಾಯುತ್ತಿದ್ದಾರೆ. ಬಡವರು ಮತ್ತು ಸಾಯುತ್ತಿರುವವರು ಕಾಯಬಹುದು. ಏಕೆಂದರೆ ಕ್ಯಾಮೆರಾಗಳಿಗಾಗಿ ಮೋದಿಯವರ ಹತಾಶೆಗೆ ಆದ್ಯತೆ ನೀಡಲಾಗುತ್ತದೆ ಎಂದು ಮತ್ತೊಬ್ಬ ಮುಖಂಡ ಗೋಖಲೆ ಬರೆದುಕೊಂಡಿದ್ದರು.
    ರಾಜಕೀಯ ಘಟನೆಯ ಅಡೆತಡೆಯಿಲ್ಲದ ಪ್ರಸಾರವನ್ನು ಬಯಸಲಾಗುತ್ತಿದೆ. ಇದೇ ಕಾರಣಕ್ಕಾಗಿ ರೋಗಿಗಳ ಜೀವಕ್ಕೆ ಅಪಾಯವನ್ನುಂಟುಮಾಡಲಾಗುತ್ತಿದೆ. ಇದು ನಂಬಿಕೆಗೆ ಮೀರಿದ್ದಾಗಿದ್ದು, ಮನುಷ್ಯನ ಮೆಗಾಲೋಮೇನಿಯಾಗೆ ಮಿತಿ ಇದೆ ಎಂದು ಮುಖಂಡ ಎಂ.ಎಸ್. ಮೊಹಮ್ಮದ್ ಹೇಳಿದ್ದರು.

    ರಾಮಮಂದಿರ ಕಾರ್ಯಕ್ರಮ ನೇರ ಪ್ರಸಾರ ನಿಷೇಧಿಸಿಲ್ಲ: ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಸ್ಟಾಲಿನ್ ಸರ್ಕಾರದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts