More

    ವಿಶ್ವದಲ್ಲೇ ಕೋವಿಡ್​ ಮುಕ್ತ ಎಂದು ಘೋಷಿಸಿದ ಮೊದಲ ರಾಷ್ಟ್ರ ಯಾವುದು ಗೊತ್ತಾ?

    ನವದೆಹಲಿ: ಚೀನಾದ ವುಹಾನ್​ನಿಂದ ಆರಂಭವಾದ ಕೋವಿಡ್​-19 ಪಿಡುಗು ವಿಶ್ವವ್ಯಾಪಿಯಾಗಿ ಹಬ್ಬಿದೆ. ಈ ನಡುವೆ ಒಂದು ರಾಷ್ಟ್ರ ಮಾತ್ರ ತಾನು ಕೋವಿಡ್​-19 ಮುಕ್ತವಾಗಿರುವುದಾಗಿಯೂ, ಸೋಂಕು ನಿಯಂತ್ರಣಕ್ಕೆ ತಾನು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸಿರುವುದಾಗಿ ಒಂದು ರಾಷ್ಟ್ರ ಘೋಷಿಸಿದೆ. ಅದುವೇ ನ್ಯೂಜಿಲೆಂಡ್​ ರಾಷ್ಟ್ರವಾಗಿದೆ.

    ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಿರುವ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​, ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಕೋವಿಡ್​ ನಿರ್ಬಂಧಗಳೆಲ್ಲವನ್ನೂ ರದ್ದುಗೊಳಿಸಿರುವುದಾಗಿ ಹೇಳಿದ್ದಾರೆ. ಹೊಸ ನಿಯಮಗಳ ಪ್ರಕಾರ ನ್ಯೂಜಿಲೆಂಡ್​ನಲ್ಲಿ ಇನ್ಮುಂದೆ ದೈಹಿಕ ಅಂತರ ಕಾಯ್ದುಕೊಳ್ಳುವ, ಸಾರ್ವಜನಿಕ ಸಭೆ, ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಇಷ್ಟೇ ಸಂಖ್ಯೆಯ ಜನರು ಇರಬೇಕು ಎಂಬ ನಿಯಮ ಸೇರಿ ಎಲ್ಲ ಕೋವಿಡ್​ ನಿರ್ಬಂಧಗಳನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮದುವೆಯಾಗಿ 12 ದಿನ ಬಳಿಕ ತವರಿಗೆ ಬಂದಾಕೆ ಹೆಣವಾದಳು ಏಕೆ?

    ಸಂತೋಷದಿಂದ ಕುಣಿದೆ: ಕಳೆದ ಎರಡು ವಾರಗಳಿಂದ ನ್ಯೂಜಿಲೆಂಡ್​ನಲ್ಲಿ ಯಾವುದೇ ಕೋವಿಡ್​-19 ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ತಮ್ಮ ರಾಷ್ಟ್ರ ಕೋವಿಡ್​ ಮುಕ್ತವಾಗಿದೆ ಎಂಬ ಸಂಗತಿ ಕೇಳಿ ತಾವು ಸಂತೋಷದಿಂದ ಕುಣಿದಾಡಿದ್ದಾಗಿ ಹೇಳಿದ್ದಾರೆ.
    ರಾಷ್ಟ್ರ ಈಗ ಸುರಕ್ಷಿತವಾಗಿದ್ದು, ಬಲಿಷ್ಠವಾದ ಸ್ಥಾನದಲ್ಲಿದೆ. ಆದರೂ ಕೋವಿಡ್​ ಪೂರ್ವದ ಪರಿಸ್ಥಿತಿಗೆ ಹಿಂದಿರುಗಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆರೋಗ್ಯಕರವಾದ ನ್ಯೂಜಿಲೆಂಡ್​ ನಿರ್ಮಾಣಕ್ಕೆ ಒತ್ತು ಕೊಟ್ಟ ರೀತಿಯಲ್ಲೇ ಆರ್ಥಿಕ ಪುನರುತ್ಥಾನಕ್ಕೂ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು ಎಂದು ಆರ್ಡೆನ್​ ಹೇಳಿದ್ದಾರೆ.

    ಥ್ಯಾಂಕ್ಯೂ ನ್ಯೂಜಿಲೆಂಡ್​: ಕೋವಿಡ್​ ಪಿಡುಗಿನ ಪ್ರಭಾವದಿಂದಲೂ ದೇಶ ಸುಧಾರಿಸದ ಹೊರತು ಏನೊಂದು ಸಾಧನೆ ಮಾಡಿದಂತಾಗುವುದಿಲ್ಲ. ಆದರೂ ಇದೊಂದು ಮೈಲಿಗಲ್ಲು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪರಿಸ್ಥಿತಿ ಸುಧಾರಿಸಲು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಿ ಸಹಕರಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಥ್ಯಾಂಕ್ಯೂ ನ್ಯೂಜಿಲೆಂಡ್​ ಎಂದು ಜೆಸಿಂಡಾ ಹರ್ಷದಿಂದ ನುಡಿದಿದ್ದಾರೆ.

    ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts