More

    ಕರೊನಾ ಪ್ರಕರಣಗಳಿಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ಸಾರ್ವಜನಿಕ ಸಭೆ, ಸಮಾರಂಭಗಳಿಗೂ ಇಲ್ಲ ನಿರ್ಬಂಧ

    ನವದೆಹಲಿ: ನ್ಯೂಜಿಲೆಂಡ್​ನಲ್ಲಿ ಕಳೆದ 17 ದಿನಗಳಿಂದ ಒಂದೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೊನೆಯ ಸೋಂಕಿತ ಕೂಡ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾನೆ. ಅಲ್ಲಿಗೆ ಆ ದೇಶದಲ್ಲಿ ಯಾವುದೇ ಸಕ್ರಿಯ ಪ್ರಕರಣಗಳೇ ಇಲ್ಲ.

    ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡರ್ನ್​ ದೇಶದಲ್ಲಿ ಒಂದೂ ಕರೊನಾ ಸಕ್ರಿಯ ಪ್ರಕರಣಗಳಿಲ್ಲದಿರುವುದನ್ನು ಘೋಷಿಸಿದ್ದಾರೆ. ಮಂಗಳವಾರದಿಂದ ಖಾಸಗಿ ಹಾಗೂ ಸರ್ಕಾರಿ ಸಭೆ, ಸಮಾರಂಭಗಳ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

    ಇದನ್ನೂ ಓದಿ; ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು

    ಎಲ್ಲ ವಲಯಗಳು ಯಾವುದೇ ನಿರ್ಬಂಧವಿಲ್ಲ ಕಾರ್ಯ ನಿರ್ವಹಿಸಬಹುದು ಎಂದು ಘೋಷಿಸಲಾಗಿದೆ. ಆದರೆ, ಅಂತಾರಾಷ್ಟ್ರೀಯ ಗಡಿಯನ್ನು ಮುಕ್ತಗೊಳಿಸಲಾಗಿಲ್ಲ. ಆದರೆ, ತನ್ನ ಪ್ರಜೆಗಳಿಗೆ ತುರ್ತು ಸಂದರ್ಭದಲ್ಲಿ ಕೆಲ ವಿನಾಯ್ತಿಗಳನ್ನು ನೀಡಿದೆ.

    ನ್ಯೂಜಿಲೆಂಡ್​ನಲ್ಲಿ ಒಟ್ಟು 50 ಲಕ್ಷ ಜನರಿದ್ದು, ಒಟ್ಟು 1,500 ಜನರಿಗೆ ಸೋಂಕು ತಗುಲಿತ್ತು. ಇವರಲ್ಲಿ 22 ಜನರು ಮೃತಪಟ್ಟಿದ್ದರು. ಕರೊನಾ ವ್ಯಾಪಿಸುವುದನ್ನು ತಡೆಗಟ್ಟಲು ದೇಶಾದ್ಯಂತ ಏಳು ವಾರಗಳ ಕಟ್ಟುನಿಟ್ಟಿನ ಲಾಖ್​ಡೌನ್​ ಘೋಷಿಸಲಾಗಿತ್ತು. ಅಗತ್ಯ ವಸ್ತುಗಳ ಹೊರತಾಗಿ ಬೇರಾವುದಕ್ಕೂ ಜನರು ಮನೆಯಿಂದ ಹೊರಬರುವಂತೆಯೇ ಇರಲಿಲ್ಲ.

    ಇದನ್ನೂ ಓದಿ; ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…! 

    ಮುಂದೇನು?: ಸಕ್ರಿಯ ಪ್ರಕರರಣಗಳಿಲ್ಲ ಎಂದ ಮಾತ್ರಕ್ಕೆ ದೇಶದಿಂದ ಕರೊನಾ ಶಾಶ್ವತವಾಗಿ ನಿರ್ಮೂಲನೆಯಾಗಿದೆ ಎಂದಲ್ಲ. ಕರೊನಾ ವ್ಯಾಪಿಸುವ ಸರಣಿಯನ್ನು ತುಂಡರಿಸಲಾಗಿದೆಯಷ್ಟೇ. ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎರಡನೇ ಹಂತದ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ.

    ಫೆ.28ರ ಬಳಿಕ ಮೊದಲ ಬಾರಿಗೆ ಹೊಸ ಕರೊನಾ ಪ್ರಕರಣಗಳು ಪತ್ತೆಯಾಗದಿರುವುದು ಸಾಧನೆಯಾಗಿದೆ. ಕರೊನಾ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಆರೋಗ್ಯ ಸೇವೆಯ ಪ್ರಧಾನ ಕಾರ್ಯದರ್ಶಿ ಡಾ.ಆ್ಯಶ್ಲೆ ಬ್ಲೂಮ್​ಫೀಲ್ಡ್​ ಹೇಳಿದ್ದಾರೆ.

    ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts