More

    ಪ್ರಬಲ ಭೂಕಂಪಕ್ಕೂ ಜಗ್ಗಲಿಲ್ಲ ನ್ಯೂಜಿಲೆಂಡ್​ ನ ಈ ಗಟ್ಟಿ ಹೆಣ್ಣುಮಗಳು!

    ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನಲ್ಲಿ ಸೋಮವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಆಸ್ತಿ ಅಥವಾ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇದಕ್ಕೂ ಮುಖ್ಯವಾಗಿ ಭೂಮಿ ಕಂಪಸಿದ ಸಂದರ್ಭದಲ್ಲಿ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​ ಟಿವಿಯೊಂದಕ್ಕೆ ನೇರ ಸಂದರ್ಶನ ನೀಡುತ್ತಿದ್ದರು. ಆದರೆ ಗಟ್ಟಿ ಹೆಣ್ಣುಮಗಳು ಎನಿಸಿಕೊಂಡಿರುವ ಜೆಸಿಂಡಾ ಅವರು ಮಾತ್ರ ಇದರಿಂದ ಸ್ವಲ್ಪವೂ ವಿಚಲಿತಗೊಳ್ಳದೆ ತಮ್ಮ ಟಿವಿ ಸಂದರ್ಶನವನ್ನು ಮುಂದುವರಿಸಿದ್ದು ವಿಶೇಷವಾಗಿತ್ತು.

    ಸೋಮವಾರ ಬೆಳಗ್ಗೆ ನ್ಯೂಹಬ್​ ಎಎಂ ಶೋ ಎಂಬ ಟಿವಿ ಕಾರ್ಯಕ್ರಮದಲ್ಲಿ ನಿರೂಪಕ ರಯಾನ್​ ಬ್ರಿಡ್ಜ್​ ಎಂಬುವರಿಗೆ ಸಂಸತ್​ ಭವನ ಬಿಹೈವ್​ನಿಂದ ಜೆಸಿಂಡಾ ಅವರು ನೇರ ಸಂದರ್ಶನ ನೀಡುತ್ತಿದ್ದರು. ರಾಷ್ಟ್ರಾದ್ಯಂತ ಜಾರಿಗೊಳಿಸಲಾಗಿರುವ ಕೋವಿಡ್​-19 ನಿರ್ಬಂಧಗಳನ್ನು ಸಡಿಲಿಸುವ ಕುರಿತು ಚರ್ಚಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಭೂಕಂಪ ಸಂಭವಿಸಿತು.

    ಭೂಕಂಪನದಿಂದ ಕ್ಷಣಕಾಲ ವಿಚಲಿತರಾದಂತೆ ಕಂಡು ಬಂದರೂ ತಕ್ಷಣವೇ ಸಾವರಿಸಿಕೊಂಡ ಅವರು, ಹಾಂ, ಭೂಮಿ ನಡುಗಿತು… ಬಿಹೈವ್​ ಸ್ವಲ್ಪ ಜೋರಾಗಿಯೇ ನಡುಗಿತು… ನನ್ನ ಹಿಂದಿದ್ದ ವಸ್ತುಗಳು ಅಲ್ಲಾಡಿದವು… ಆದರೆ ಇಲ್ಲಿ ಏನೊಂದು ತೊಂದರೆಯಾಗಿಲ್ಲ… ಎಂದು ಜೆಸಿಂಡಾ ಹೇಳಿದರು.

    ಇದನ್ನೂ ಓದಿ: ಮಾನವರ ಮೇಲೆ ಮೂರನೇ ಹಂತದ ಪ್ರಯೋಗದಲ್ಲಿ ದೇಶೀಯ ಕಂಪನಿಯ ಕರೊನಾ ಲಸಿಕೆ

    ಸಂದರ್ಶನ ಮುಂದುವರಿಸುವ ಬಗ್ಗೆ ನಿರೂಪಕ ರಯಾನ್​ ಪ್ರಶ್ನಿಸಿದಾಗ, ಇಲ್ಲಿಲ್ಲ… ನಾನು ಕ್ಷೇಮವಾಗಿದ್ದೇನೆ… ಇಲ್ಲಿ ಎಲ್ಲವೂ ಸರಿಯಾಗಿದೆ… ನಾನು ಯಾವುದೇ ತೂಗಾಡುವ ದೀಪದ ಕೆಳಗೆ ಕುಳಿತಿಲ್ಲ… ಸಂದರ್ಶನವನ್ನು ಮುಂದುವರಿಸಬಹುದು ಎಂದು ಹೇಳಿ ಮಾತುಕತೆ ಮುಂದುವರಿಸಿದರು.

    ನ್ಯೂಜಿಲೆಂಡ್​ನಲ್ಲಿ ಭೂಕಂಪನಗಳು ಸರ್ವೇ ಸಾಮಾನ್ಯವಾಗಿವೆ. ಇಲ್ಲಿ ದಿನಕ್ಕೆ 50ರಿಂದ 80 ಬಾರಿ ಭೂಮಿ ನಡಗುತ್ತದೆ. ಈ ದೇಶ ರಿಂಗ್​ ಆಫ್​ ಫೈರ್​ ಎಂಬ ರಾಚನಿಕವಾಗಿ (ಟೆಕ್ಟಾನಿಕಲಿ) ಕ್ರಿಯಾಶೀಲವಾಗಿರುವ 40 ಸಾವಿರ ಕಿಲೋಮೀಟರ್​ ವಿಸ್ತಾರದ ಆರ್ಕ್​ನಲ್ಲಿ ಇದು ಸ್ಥಿತವಾಗಿರುವುದು ಇದಕ್ಕೆ ಕಾರಣ. ಸಾಕಷ್ಟು ಬಾರಿ ಸಣ್ಣ ಪ್ರಮಾಣದ ಭೂಕಂಪನಗಳು ಸಂಭವಿಸುತ್ತವೆಯಾದರೂ, ಅದು ಜನರ ಅನುಭವಕ್ಕೆ ಬರುವುದಿಲ್ಲ.

    ಸೋಮವಾರ ಸಂಭವಿಸಿದ 5.8 ತೀವ್ರತೆಯ ಭೂಕಂಪನ 2020ನೇ ಸಾಲಿನಲ್ಲಿ ಇದುವರೆಗೆ ಸಂಭವಿಸಿದ ಪ್ರಬಲ ಭೂಕಂಪನವಾಗಿತ್ತು. ಇದಕ್ಕೂ ಮುನ್ನ ಜನವರಿಯಲ್ಲಿ 5.4 ತೀವ್ರತೆಯ ಕಂಪನ ಸಂಭವಿಸಿತ್ತು.

    https://www.vijayavani.net/zakir-naik-to-turkey-money-system-by-qatar-modtiro-pakistan/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts