More

    108 ಬಾರಿ ಚಾಕುವಿನಿಂದ ಇರಿದು ಪ್ರಿಯಕರನನ್ನು ಕೊಂದರೂ ಯುವತಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

    ಅಮೆರಿಕ: 2018 ರಲ್ಲಿ, ಅಮೆರಿಕದ ವೆಂಚುರಾದಲ್ಲಿ ಬ್ರಿಯಾನ್ ಸ್ಪೇಸ್ ಎಂಬ ಯುವತಿಯೊಬ್ಬಳು ತನ್ನ ಗೆಳೆಯ ಚಾಡ್ ಒಮೆಲಿಯಾ ಅವರನ್ನು ಚಾಕುವಿನಿಂದ 108 ಬಾರಿ ಇರಿದು ಕೊಂದಳು. ಬ್ರಿಯಾನ್ ಸ್ಪೇಸ್ ಈ ಅಪರಾಧ ಎಸಗಿದ ಆರೋಪ ನ್ಯಾಯಾಲಯದಲ್ಲಿಯೂ ಸಾಬೀತಾಗಿದೆ. ಆದರೆ ಕೊಲೆಯ ಸಮಯದಲ್ಲಿ ಅವಳು ಗಾಂಜಾದ ಅಮಲಿನಲ್ಲಿದ್ದಳೆಂಬ ಕಾರಣಕ್ಕೆ ನ್ಯಾಯಾಲಯ ಅವಳನ್ನು ಖುಲಾಸೆಗೊಳಿಸಿದೆ.

    ಬ್ರಿಯಾನ್​​​​ಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಸಹ ನೀಡಲಾಯಿತು. ಆದರೆ ಈ ರೀತಿಯ ಶಿಕ್ಷೆಯಲ್ಲಿ, ತಪ್ಪಿತಸ್ಥರು ಎಲ್ಲಾ ಸಮಯದಲ್ಲೂ ಜೈಲಿನಲ್ಲಿ ಇರಬೇಕಾಗಿಲ್ಲ. ಹೆಚ್ಚುವರಿಯಾಗಿ ಅವರಿಗೆ ಪರೀಕ್ಷೆಗಾಗಿ 100 ಗಂಟೆಗಳ ಸಮುದಾಯ ಸೇವೆ ನೀಡಲಾಗುತ್ತದೆ.

    ಅಮೆರಿಕ ಮಾತ್ರವಲ್ಲದೆ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಡ್ರಗ್ ಓವರ್ ಡೋಸ್ ದೊಡ್ಡ ಸಮಸ್ಯೆಯಾಗಿದ್ದು, ಡ್ರಗ್ಸ್ ಅಮಲಿನಲ್ಲಿ ನಡೆಯುವ ಅನೇಕ ಅಪರಾಧಗಳ ಹಿಂದೆ ಯಾವುದೇ ಉದ್ದೇಶವಿರುವುದಿಲ್ಲ. ಇಂತಹ ಅಪರಾಧಿಗಳಿಗೆ ಶಿಕ್ಷೆಯನ್ನು ನಿರ್ಧರಿಸುವಾಗ, ನ್ಯಾಯಾಲಯವು ಅವರ ಸಾಮಾಜಿಕ ಹಿನ್ನೆಲೆ, ಬಾಲ್ಯದ ಸಂದರ್ಭಗಳು ಹೀಗೆ ಅನೇಕ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

    ಅಪರಾಧದ ಸಮಯದಲ್ಲಿ ಬ್ರಿಯಾನ್ ಗಾಂಜಾದ ಪ್ರಭಾವದಲ್ಲಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಗಾಂಜಾವನ್ನು ಸೇವಿಸಿದ್ದರು ಎಂದು ಪೊಲೀಸರು ಮತ್ತು ನ್ಯಾಯಾಲಯ ಇಬ್ಬರೂ ಒಪ್ಪಿಕೊಂಡಿದ್ದಾರೆ. ತನ್ನ ಪ್ರಿಯಕರನನ್ನು ಕೊಂದು ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಷ್ಟೇ ಅಲ್ಲ, ಗೆಳೆಯನ ಮನೆಯವರನ್ನು ಕಂಡಾಗ ನಾನೇ ಕೊಂದು ಹಾಕಿದ್ದೇನೆ, ಈಗ ಏನೂ ಉಳಿದಿಲ್ಲ ಎಂದು ಗೋಗರೆದಿದ್ದಾಳೆ. ಆಕೆಯನ್ನು ಬಂಧಿಸಿದಾಗ ಆಕೆ ತೀವ್ರ ಆಘಾತಕ್ಕೆ ಒಳಗಾಗಿದ್ದಳು ಮತ್ತು ಆಕೆಯ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಶಿಕ್ಷೆಯ ಸಮಯದಲ್ಲಿ, ಬ್ರಿಯಾನ್‌ನ ಗೆಳೆಯನ ಕುಟುಂಬ ಸದಸ್ಯರು ಸಹ ನ್ಯಾಯಾಲಯದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಅವಳ ಸ್ಥಿತಿ ಬಹಳ ಕೆಟ್ಟದಾಗಿತ್ತು. ತನ್ನ ಹೇಯ ಕೃತ್ಯಕ್ಕೆ ಹಲವಾರು ಬಾರಿ ಪಶ್ಚಾತ್ತಾಪ ವ್ಯಕ್ತಪಡಿಸಿದರು ಬ್ರಿಯಾನ್‌. ಸದ್ಯ ಅಮೆರಿಕದಲ್ಲಿ ಡ್ರಗ್ಸ್ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಹೆಚ್ಚಿನ ಗನ್ ಅಪರಾಧ ಪ್ರಕರಣಗಳ ಹಿಂದೆ ಡ್ರಗ್ ಓವರ್ ಡೋಸ್ ಸಮಸ್ಯೆಯಾಗಿದೆ. 

    ಸೌದಿ ಅರೇಬಿಯಾ ಏಕೆ, ಯಾವಾಗ ಮದ್ಯವನ್ನು ನಿಷೇಧಿಸಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts