More

    ಪಾಕಿಸ್ತಾನ ವಿರುದ್ಧ ಟಿ20 ಸರಣಿ ಜಯಿಸಿದ ನ್ಯೂಜಿಲೆಂಡ್

    ಹ್ಯಾಮಿಲ್ಟನ್: ವೇಗಿ ಟಿಮ್ ಸೌಥಿ (21ಕ್ಕೆ 4) ಶಿಸ್ತುಬದ್ಧ ಬೌಲಿಂಗ್ ದಾಳಿ ಮತ್ತು ವಿಕೆಟ್ ಕೀಪರ್-ಆರಂಭಿಕ ಟಿಮ್ ಸೀಫರ್ಟ್ (84*ರನ್, 63 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಕೇನ್ ವಿಲಿಯಮ್ಸನ್ (57*ರನ್, 42 ಎಸೆತ, 8 ಬೌಂಡರಿ, 1 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಕಿವೀಸ್ 2-0ಯಿಂದ ವಶಪಡಿಸಿಕೊಂಡಿದೆ. ಸರಣಿಯ ಅಂತಿಮ ಪಂದ್ಯ ಮಂಗಳವಾರ ನೇಪಿಯರ್‌ನಲ್ಲಿ ನಡೆಯಲಿದೆ.

    ಸೆಡನ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ ಮೊಹಮದ್ ಹಫೀಜ್ (99*ರನ್, 57 ಎಸೆತ, 10 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟದಿಂದ 6 ವಿಕೆಟ್‌ಗೆ 163 ರನ್ ಪೇರಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ತಂಡ ಆರಂಭಿಕ ಮಾರ್ಟಿನ್ ಗುಪ್ಟಿಲ್ (21) ವಿಕೆಟ್ ಬೇಗನೆ ಕಳೆದುಕೊಂಡರೂ, ಸೀಫರ್ಟ್-ವಿಲಿಯಮ್ಸನ್ ಸಾಹಸದಿಂದ 19.2 ಓವರ್‌ಗಳಲ್ಲಿ 1 ವಿಕೆಟ್‌ಗೆ 164 ರನ್ ಪೇರಿಸಿ ಗೆಲುವು ದಾಖಲಿಸಿತು.

    ಇದನ್ನೂ ಓದಿ: ಎಲ್ಲ ಟೆಸ್ಟ್​ ಪಂದ್ಯಗಳಲ್ಲಿ ಪಿಂಕ್ ಬಾಲ್ ಬಳಸಿ ಎಂದು ಶೇನ್ ವಾರ್ನ್ ಹೇಳಿದ್ದೇಕೆ?

    ಸೀಫರ್ಟ್-ವಿಲಿಯಮ್ಸನ್ ಜೋಡಿ ಮುರಿಯದ 2ನೇ ವಿಕೆಟ್‌ಗೆ 129 ರನ್ ಜತೆಯಾಟವಾಡಿತು. ಕಿವೀಸ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 4 ರನ್ ಅಗತ್ಯವಿದ್ದಿತು. ಫಹೀಮ್ ಅಶ್ರಫ್​ ಎಸೆದ ಓವರ್‌ನ 2ನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ವಿಲಿಯಮ್ಸನ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇತ್ತೀಚೆಗಷ್ಟೇ ಹೆಣ್ಣು ಮಗುವಿನ ತಂದೆಯಾದ ಬಳಿಕ ವಿಲಿಯಮ್ಸನ್ ಆಡಿದ ಮೊದಲ ಪಂದ್ಯ ಇದಾಗಿದೆ.

    ಪಾಕಿಸ್ತಾನ: 6 ವಿಕೆಟ್‌ಗೆ 163 (ರಿಜ್ವಾನ್ 22, ಹೈದರ್ ಅಲಿ 8, ಮೊಹಮದ್ ಹಫೀಜ್ 99, ಶಾದಾಬ್ 4, ಟಿಮ್ ಸೌಥಿ 21ಕ್ಕೆ 4, ನೀಶಾಮ್ 10ಕ್ಕೆ 1, ಸೋಧಿ 21ಕ್ಕೆ 1), ನ್ಯೂಜಿಲೆಂಡ್: 19.2 ಓವರ್‌ಗಳಲ್ಲಿ 1 ವಿಕೆಟ್‌ಗೆ 164 (ಗುಪ್ಟಿಲ್ 21, ಸೀಫರ್ಟ್ 84*, ಕೇನ್ ವಿಲಿಯಮ್ಸನ್ 57*, ಫಹೀಮ್ ಅಶ್ರಫ್​ 19ಕ್ಕೆ 1), ಪಂದ್ಯಶ್ರೇಷ್ಠ: ಟಿಮ್ ಸೌಥಿ.

    ಭಾರತ ತಂಡ ಸೋತಿದ್ದಕ್ಕೆ ಮತ್ತೆ ಟ್ರೋಲ್ ಆದ ನಟಿ ಅನುಷ್ಕಾ ಶರ್ಮ…!

    ಹಿರಿಯ ಕ್ರಿಕೆಟಿಗರಿಂದ ಟ್ರೋಲ್‌ಗೆ ಒಳಗಾದ ವಿರಾಟ್ ಕೊಹ್ಲಿ ಪಡೆ

    ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್‌ಗೆ ಕರೊನಾತಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts