More

    ರಾಜ್ಯಕ್ಕೆ ಕಾಲಿಟ್ಟಿದೆ ಹೊಸ ರೀತಿಯ ಜ್ವರ; 171 ಮಕ್ಕಳು ಆಸ್ಪತ್ರೆಗೆ ದಾಖಲು..

    ದಾವಣಗೆರೆ: ದೇಶದಲ್ಲೇ ಪ್ರಪ್ರಥಮ ಬಾರಿಗೆ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದ್ದ ಚಿತ್ರದುರ್ಗ ಜಿಲ್ಲೆಯ ಸಮೀಪದ ಮತ್ತೊಂದು ಜಿಲ್ಲೆಯಲ್ಲೀಗ ವಿಚಿತ್ರ ರೀತಿಯ ಜ್ವರ ಕಂಡುಬಂದಿದೆ. ಮಾತ್ರವಲ್ಲ ಆರಂಭದಲ್ಲೇ ಇದು ನೂರಾರು ಮಕ್ಕಳನ್ನು ಬಾಧಿಸುತ್ತಿದ್ದು,  171 ಮಕ್ಕಳು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

    ರಾಜ್ಯದಲ್ಲಿ ಹೀಗೆ ಹೊಸ ಮಾದರಿಯ ಜ್ವರ ಕಾಣಿಸಿಕೊಂಡಿರುವ ಜಿಲ್ಲೆ ದಾವಣಗೆರೆ. ಇಲ್ಲಿ ಹೊಸ ಥರದ ಡೆಂಘೆ ಜ್ವರ ಕಂಡುಬಂದಿದ್ದು,  171 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಒಟ್ಟು 171 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ವ್ಯಕ್ತಿಯ ಚರ್ಮದ ಮೇಲೆ ಬ್ಲ್ಯಾಕ್​ ಫಂಗಸ್​ ಪತ್ತೆ, ಇದು ದೇಶದಲ್ಲೇ ಮೊದಲ ಪ್ರಕರಣ

    ಇವರಲ್ಲಿ 45 ಮಕ್ಕಳು ಶಂಕಿತ ಡೆಂಘೆ ಜ್ವರದಿಂದ ಬಳಲುತ್ತಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು ಪಾಲಕರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

    ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ

    ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts