More

    ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ಬಂಧಿತ ನಟಿಗೆ ಸೇರಿದ್ದು ಎನ್ನಲಾದ ಖಾಸಗಿ ವಿಡಿಯೋಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

    ಅಪರಿಚಿತ ವ್ಯಕ್ತಿ ಜತೆ ನಟಿ ಇದ್ದಾಳೆ ಎನ್ನಲಾದ ಖಾಸಗಿ ಕ್ಷಣಗಳ 2 ವಿಡಿಯೋಗಳು 29 ಸೆಕೆಂಡ್​ ಹಾಗೂ 50 ಸೆಕೆಂಡ್​ಗಳಿದ್ದು, ನಟಿ ಜತೆ ಅಪರಿಚಿತ ವ್ಯಕ್ತಿ ಲೈಂಗಿಕ ಸಂಭಾಷಣೆ ನಡೆಸಿದ್ದಾನೆ. ವಿಡಿಯೋಗಳು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಜನರ ಕೋಪಕ್ಕೆ ಗುರಿಯಾಗಿವೆ. ಇದನ್ನೂ ಓದಿರಿ ‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

    ವಿಡಿಯೋದಲ್ಲಿ ಇರುವ ವ್ಯಕ್ತಿಯನ್ನು ಉದ್ಯಮಿ ಎನ್ನಲಾಗಿದೆ. ಆತ ನಟಿ ಜತೆ ತೆಲುಗು ಭಾಷೆಯಲ್ಲಿ ಅಶ್ಲೀಲವಾಗಿ ಸಭಾಷಣೆ ನಡೆಸಿದ್ದಾನೆ. ಇದರಲ್ಲಿ ನಟಿಯ ಮುಖ ಚಹರೆ ಅಸ್ಪಷ್ಟವಾಗಿ ಕಾಣುತ್ತಿವೆ. ಈ ವಿಡಿಯೋ ಬಹಿರಂಗದ ಬೆನ್ನಲ್ಲೇ ಉದ್ಯಮಿ ಜತೆ ನಟಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ ಎಂಬ ವಿವಾದ ಹುಟ್ಟಿಕೊಂಡಿವೆ. ಆದರೆ, ಈ ವಿಡಿಯೋ ಅಸಲಿತನ ಖಚಿತವಾಗಿಲ್ಲ. ಅದೂ ಎಲ್ಲಿ? ಯಾವಾಗ? ಚಿತ್ರೀಕರಣವಾಗಿವೆ. ಆ ವಿಡಿಯೋದಲ್ಲಿರುವ ವ್ಯಕ್ತಿ ಯಾರೂ ಎಂಬುದೂ ಸ್ಪಷ್ಟವಾಗಿಲ್ಲ. ವಿವಾದದ ಬಗ್ಗೆ ಸಿಸಿಬಿ ಅಧಿಕಾರಿಗಳು ಸಹ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

    ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಾದಕ ವಸ್ತು ಮಾರಾಟ ಜಾಲದ ನಂಟಿನ ಆರೋಪದಡಿ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿರುವರ ವಿರುದ್ಧ ಶ್ರೀಮಂತರ ಸ್ನೇಹ ದುರ್ಬಳಕೆ ಆರೋಪ ಕೇಳಿ ಬಂದಿದೆ. ಪಬ್​, ಕ್ಲಬ್​, ಹೋಟೆಲ್​ ಹಾಗೂ ರೆಸಾರ್ಟ್​ಗಳಲ್ಲಿ ನಡೆಯುತ್ತಿದ್ದ ರಂಗು ರಂಗಿನ ಪಾರ್ಟಿಗಳಿಗೆ ಬರುತ್ತಿದ್ದ ಉದ್ಯಮಿಗಳು, ವ್ಯಾಪಾರಿಗಳು ಮತ್ತು ರಾಜಕಾರಣಿಗಳಿಗೆ ಸ್ನೇಹದ ಬಲೆಬೀಸಿ ಸಲುಗೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಗ್ಯಾಂಗ್​ನ ಬಲೆಯಲ್ಲಿ ಮಾಜಿ ಐಪಿಎಸ್​ ಅಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts