More

    ಸಂಸತ್ ಶಿಲಾನ್ಯಾಸಕ್ಕೆ ಶೃಂಗೇರಿ ಮಠದ ಪೌರೋಹಿತ್ಯ! : ಧಾರ್ವಿುಕ ಕಾರ್ಯಕ್ರಮದ ಜವಾಬ್ದಾರಿ ಸಚಿವ ಪ್ರಲ್ಹಾದ್ ಜೋಶಿಗೆ

    ರಾಘವ ಶರ್ಮ ನಿಡ್ಲೆ

    ನವದೆಹಲಿ : ದೆಹಲಿಯಲ್ಲಿ ನಿಮಾಣವಾಗುತ್ತಿರುವ ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುತ್ತಿದ್ದು, ಧಾರ್ವಿುಕ ವಿಧಿವಿಧಾನಗಳ ಸಂಪೂರ್ಣ ಜವಾಬ್ದಾರಿಗಳನ್ನು ಕರ್ನಾಟಕದ ಶೃಂಗೇರಿ ಮಠಕ್ಕೆ ವಹಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ.

    ಧಾರ್ವಿುಕ ಕಾರ್ಯಕ್ರಮದ ಜವಾಬ್ದಾರಿ ನೋಡಿಕೊಳ್ಳುವಂತೆ ಪ್ರಧಾನಿ ಮೋದಿ ನನಗೆ ತಿಳಿಸಿದ್ದರು. ಮುಂದಿನ 100 ವರ್ಷಗಳ ಭವಿಷ್ಯ ಮುಂದಿಟ್ಟುಕೊಂಡು ಸರ್ವಸಜ್ಜಿತ ಸಂಸತ್ ಭವನ ಕಟ್ಟುವುದು ನಮ್ಮ ಗುರಿಯಾಗಿದೆ. ಇದಕ್ಕೆ ದೇವರ ಕೃಪೆಯೂ ಬೇಕು ಮತ್ತು ಧಾರ್ವಿುಕ ವಿಧಿವಿಧಾನ ಅಚ್ಚುಕಟ್ಟಾಗಿ ನಡೆಯಬೇಕೆಂದೇ ಶೃಂಗೇರಿ ಮಠವನ್ನು ಸಂಪರ್ಕಿಸಿದೆ.
    – ಪ್ರಲ್ಹಾದ್ ಜೋಶಿ, ಸಂಸದೀಯ ವ್ಯವಹಾರಗಳ ಸಚಿವ

    ‘ಶೃಂಗೇರಿ ಗುರುಗಳ ಅನುಗ್ರಹದಿಂದ ನಾವಿಲ್ಲಿ ಬಂದಿದ್ದೇವೆ ಮತ್ತು ಭಕ್ತಿ ಶ್ರದ್ಧೆಯಿಂದ ಕಾರ್ಯಕ್ರಮ ನೆರವೇರಿಸಿ ಎಂದವರು ಆಶೀರ್ವದಿಸಿದ್ದಾರೆ. ಅವರನ್ನು ಸ್ಮರಿಸುತ್ತಾ, ಈ ಮಹತ್ತರ ಕಾರ್ಯದ ಯಶಸ್ಸಿಗಾಗಿ ನಾವೆಲ್ಲರೂ ಪ್ರಾರ್ಥಿಸುತ್ತೇವೆ.
    ಸಿ. ನಾಗರಾಜ ಅಡಿಗ, ಪುರೋಹಿತರು

    ಶಂಕುಸ್ಥಾಪನೆಗೆ ದಿನಾಂಕ ನಿಗದಿಯಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಧಾರ್ವಿುಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಬೇಕು. ಹೀಗಾಗಿ ಒಳ್ಳೆಯ ಪುರೋಹಿತರನ್ನು ಕರೆದುಕೊಂಡು ಬನ್ನಿ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿ ಅವರನ್ನು ಸಂಪರ್ಕಿಸಿದ ಜೋಶಿಯವರು, ಪ್ರಧಾನಿಯವರ ಆಶಯದ ಬಗ್ಗೆ ವಿವರಿಸಿದ್ದಾರೆ. ‘ನಮ್ಮ ಮಠದ ಉತ್ತಮ ಪುರೋಹಿತರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತೇವೆ’ ಎಂದು ಒಪ್ಪಿಕೊಂಡ ಶೃಂಗೇರಿ ಸ್ವಾಮೀಜಿ, ನಾಲ್ವರನ್ನು ನೇಮಿಸಿ ದೆಹಲಿಗೆ ಕಳುಹಿಸಿದ್ದಾರೆ. ಮಂಗಳವಾರ ದೆಹಲಿಗೆ ಬಂದಿರುವ ಪುರೋಹಿತರು, ಬುಧವಾರದಂದು ಸಂಸತ್ತಿಗೆ ತೆರಳಿ ಧಾರ್ವಿುಕ ಕಾರ್ಯಕ್ರಮಗಳ ಪೂರ್ವ ತಯಾರಿಗಳನ್ನು ಮಾಡಿದ್ದಾರೆ.

    ಇದನ್ನೂ ಓದಿ: ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ನೀಡಿದರೆ 500 ರೂ. ದಂಡ : ಮರುಬಳಕೆ ಬುಟ್ಟಿಯಲ್ಲಿ ಕಸ ನೀಡಿ

    ಪುರೋಹಿತರಾದ ಟಿ.ವಿ. ಶಿವಕುಮಾರ ಶರ್ಮ, ಕೆ.ಎಸ್. ಲಕ್ಷ್ಮೀ ನಾರಾಯಣ ಸೋಮಯಾಜಿ, ಕೆ.ಎಸ್. ಗಣೇಶ ಸೋಮಯಾಜಿ, ಸಿ. ನಾಗರಾಜ ಅಡಿಗ ಶೃಂಗೇರಿಯಿಂದ ದೆಹಲಿಗೆ ಬಂದಿದ್ದರೆ, ರಾಘವೇಂದ್ರ ಭಟ್ಟ ಮತ್ತು ಋಷ್ಯಶೃಂಗ ಎಂಬವರು ದೆಹಲಿಯ ಶೃಂಗೇರಿ ಮಠದ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ 6 ಮಂದಿ ಶಿಲಾನ್ಯಾಸಕ್ಕೆ ಸಂಬಂಧಿಸಿದ ಧಾರ್ವಿುಕ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲಿದ್ದಾರೆ.

    ಇದನ್ನೂ ಓದಿ: ಮದುಮಗಳನ್ನು ಬಿಟ್ಟು ಪ್ರೇಯಸಿಗೆ ತಾಳಿ ಕಟ್ಟಿದ ಭೂಪ! ಮುಹೂರ್ತಕ್ಕೆ 2 ದಿನ ಬಾಕಿ ಇರುವಾಗ ಕೈಕೊಟ್ಟ ವರ

    ಸಂಸತ್ ಶಿಲಾನ್ಯಾಸಕ್ಕೆ ಶೃಂಗೇರಿ ಮಠದ ಪೌರೋಹಿತ್ಯ! : ಧಾರ್ವಿುಕ ಕಾರ್ಯಕ್ರಮದ ಜವಾಬ್ದಾರಿ ಸಚಿವ ಪ್ರಲ್ಹಾದ್ ಜೋಶಿಗೆಜನರು ಮತ್ತು ಜನಪ್ರತಿನಿಧಿಗಳಿಗೆ ಸಂಸತ್ತು ದೇವಾಲಯವಿದ್ದಂತೆ. ಹೆಮ್ಮೆಯ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ, ಸಂಸತ್ ಶಿಲಾನ್ಯಾಸದ ಧಾರ್ವಿುಕ ವಿಧಿವಿಧಾನ ನಡೆಸುವುದು ನಮ್ಮ ಜೀವನದ ಅಪೂರ್ವ ಕ್ಷಣಗಳಲ್ಲೊಂದಾಗಿದ್ದು, ಅವಿಸ್ಮರಣೀಯ ಘಟನೆ ಎನಿಸಲಿದೆ ಎಂದು ರಾಘವೇಂದ್ರ ಭಟ್ಟ್ಟ ವಿಜಯವಾಣಿ ಜತೆ ಸಂತಸ ಹಂಚಿಕೊಂಡಿದ್ದಾರೆ. ಶಿಲಾನ್ಯಾಸದ ಭಾಗವಾಗಿ ಮೊದಲಿಗೆ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಆದಿಶೇಷ ಪೂಜೆ, ಅನಂತ ಪೂಜೆ, ವರಾಹ ಪೂಜೆ ಮತ್ತು ಭುವನೇಶ್ವರಿ ಪೂಜೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಧಾರ್ವಿುಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12.40ರಿಂದ 1.15ರ ತನಕ ಪ್ರಧಾನಿ ಮೋದಿ ಅವರಿಂದ ಪೂಜಾ ವಿಧಿವಿಧಾನ ಜರುಗಲಿದೆ ಎಂದು ಪುರೋಹಿತ ಶಿವಕುಮಾರ ಶರ್ಮ ತಿಳಿಸಿದ್ದಾರೆ.

    ಇದನ್ನೂ ಓದಿ: ಹೊಸ ನೇಮಕಾತಿಗೆ ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆ ನೆರವು: 23,000 ಕೋಟಿ ರೂಪಾಯಿ ಮೀಸಲು

    ವಿಪಕ್ಷಗಳಿಗೆ ಜೋಶಿ ತಿರುಗೇಟು

    2060ರಲ್ಲಿ ಭಾರತದ ಜನಸಂಖ್ಯೆ 160 ಕೋಟಿ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ನಂತರ ಕಡಿಮೆಯಾಗಬಹುದು ಎನ್ನಲಾಗಿದೆ. ಆ ಸಂದರ್ಭದಲ್ಲಿ ಸಹಜವಾಗಿಯೇ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಸಂಖ್ಯೆಯೂ ಹೆಚ್ಚಿರುತ್ತದೆ. ಕ್ಷೇತ್ರಗಳ ಪುನರ್ ವಿಂಗಡಣೆಯಾಗಿ, ಬಹುಶಃ 2029ರ ಚುನಾವಣೆ ವೇಳೆಗೆ ಸಂಸತ್ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿಯೇ ಒಟ್ಟು 1224 ಸಂಸತ್ ಸದಸ್ಯರಿಗೆ ಅನುಕೂಲವಾಗುವ ಬೃಹತ್ ಸಂಸತ್ ಭವನ ನಿಮಾಣವಾಗುತ್ತಿದೆ. ಈಗಿರುವ ಸಂಸತ್ ಭವನದಲ್ಲಿರುವಂತೆ ಇಲ್ಲಿ ಸೆಂಟ್ರಲ್ ಹಾಲ್ ಇರುವುದಿಲ್ಲ. ಜಂಟಿ ಅಧಿವೇಶನಗಳನ್ನು ಲೋಕಸಭೆಯಲ್ಲೇ ನಡೆಸಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧ ವಿಧೇಯಕದಲ್ಲಿವೆ ಈ 25 ಕಠಿಣಾತಿಕಠಿಣ ನಿಯಮಗಳು!

    ಹಾಲಿ ಸಂಸತ್ತಿನಲ್ಲಿ ಸ್ಥಳದ ಕೊರತೆ ಇದೆ. ಆದರೆ ಹೊಸ ಸಂಸತ್ತಿನಲ್ಲಿ ಸಕಲ ಮೂಲಸೌಕರ್ಯಗಳಿರಲಿವೆ. ವಿಪಕ್ಷಗಳು ಈ ಯೋಜನೆಗೆ ವಿರೋಧಿಸುತ್ತಿದ್ದರೂ, ಹೊಸ ಸಂಸತ್ತು ನಿಮಾಣವಾಗಬೇಕು ಎಂಬುದನ್ನು ಹಿಂದೆಯೇ ಸಂಸತ್ತು ಅನುಮೋದಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಇದನ್ನು ನಾವು (ಭಾರತೀಯರು) ನಿಮಾಣ ಮಾಡುತ್ತಿದ್ದೇವೆ ಎನ್ನುತ್ತಿದ್ದೇವೆ ಎನ್ನುವುದೇ ಹೆಮ್ಮೆ ವಿಷಯ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳುವ ವೇಳೆಗೆ ಬ್ರಿಟಿಷರು ಕಟ್ಟಿದ ಸಂಸತ್ತಿನಲ್ಲಿರುವ ಬದಲು, ಭಾರತೀಯರೇ ನಿರ್ವಿುಸಿದ ಸಂಸತ್ತಿಗೆ ಪ್ರವೇಶಿಸಬೇಕು ಎನ್ನುವುದು ನಮ್ಮ ಆಶಯ. ಮಾನಸಿಕತೆ ಸಮಸ್ಯೆಯಿರುವ ಕಾಂಗ್ರೆಸ್ಸಿಗರಿಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತದೆ ಎಂದು ವಿಪಕ್ಷಗಳಿಗೆ ಜೋಶಿ ತಿರುಗೇಟು ನೀಡಿದ್ದಾರೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    35 ಲಕ್ಷ ರೂ. ವರೆಗಿನ ಫ್ಲ್ಯಾಟ್ ಖರೀದಿ ಮುದ್ರಾಂಕ ಶುಲ್ಕ ಶೇ. 2-3ರಷ್ಟು ಇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts