More

    ಚೀನಾದ ವಿದ್ಯಾರ್ಥಿಗಳಿಗೆ ದೈಹಿಕ ಅಂತರ ಕಾಯ್ದುಕೊಳ್ಳುವ ಟೋಪಿ

    ಬೀಜಿಂಗ್​: ಚೀನಾದಲ್ಲಿ ಕರೊನಾ ನಂತರದ ಅವಧಿಯಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಲಾರಂಭಿಸಿದೆ. ಇದರೊಂದಿಗೆ ಅಲ್ಲಿ ಶಾಲಾಕಾಲೇಜುಗಳು ಕೂಡ ಆರಂಭವಾಗಿದೆ. ಆದರೆ, ಕರೊನಾ ಪೂರ್ವದಲ್ಲಿ ಇದ್ದಂಥ ಸ್ಥಿತಿಯಲ್ಲಿ ಅಜಗಜ ವ್ಯತ್ಯಾಸವಾಗಿದೆ.

    ದೈಹಿಕ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿಗಳು ಒಂದು ಮೀಟರ್​ ಉದ್ದದ ಕೋಲು ಇರುವ ಟೋಪಿ ಧರಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಚೀನಾದ ಸಾಂಗ್​ ಸಾಮ್ರಾಜ್ಯದಲ್ಲಿ ದರ್ಬಾರು ನಡೆಯುವ ಸಂದರ್ಭದಲ್ಲಿ ದರ್ಬಾರಿನಲ್ಲಿ ಇರುವವರು ಪರಸ್ಪರ ಮಾತನಾಡಿಕೊಂಡು ರಾಜನ ವಿರುದ್ಧ ಪಿತೂರಿ ನಡೆಸದಂತೆ ತಡೆಯಲು ದರ್ಬಾರಿನಲ್ಲಿ ಇಂಥ ಟೋಪಿಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಟೋಪಿಗಳಿಂದ ಪ್ರೇರಣೆಗೊಂಡು ಇದೀಗ ವಿದ್ಯಾರ್ಥಿಗಳಿಗೂ ಅಂಥದ್ದೇ ಟೋಪಿ ರೂಪಿಸಿ, ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

    ಇದನ್ನೂ ಓದಿ: ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!

    ಊಟಕ್ಕೆ ಪಾರದರ್ಶಕ ಪರದೆ: ಪ್ರತಿಯೊಂದು ಶಾಲೆಯಲ್ಲೂ ನಾಲ್ಕು ತರಗತಿಗಳನ್ನು ಊಟ ಮಾಡಲೆಂದೇ ನಿಗದಿಪಡಿಸಲಾಗಿದೆ. ಅಲ್ಲಿರುವ ಟೇಬಲ್​ಗಳ ಮೇಲೆ ಪಾರದರ್ಶಕ ಪರದೆಯನ್ನು ಇರಿಸಲಾಗಿರುತ್ತದೆ.

    ಊಟ ಮಾಡಲು ಬರುವ ವಿದ್ಯಾರ್ಥಿಗಳು ಊಟಕ್ಕೂ ಮೊದಲು ಆ ಪರದೆಗಳನ್ನು ಸ್ಯಾನಿಟೈಸರ್​ ಬಳಸಿ ಸ್ಯಾನಿಟೈಸ್​ ಮಾಡಬೇಕು. ಊಟವಾದ ಬಳಿಕ ಮತ್ತೊಮ್ಮೆ ಅದನ್ನು ಸ್ಯಾನಿಟೈಸ್​ ಮಾಡಿ, ಮಡಚಿಡಬೇಕು.

    ಕರೊನೋತ್ತರ ವಾತಾವರಣದಲ್ಲಿ ಭಾರತದಲ್ಲಿ ಕೂಡ ಇಂಥ ವ್ಯವಸ್ಥೆಯೊಂದಿಗೆ ಶಾಲೆ-ಕಾಲೇಜುಗಳನ್ನು ನಡೆಸುವ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.

    ಕ್ಷಿಪಣಿಗೆ 19 ಯೋಧರ ದೇಹ ಛಿದ್ರ- ಇದು ನಮ್ಮದೇ ತಪ್ಪು ಎಂದು ಇರಾನ್​ ಬಾರಿಬಾರಿ ಹೇಳುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts