More

    ಪ್ರಮಾಣವಚನಕ್ಕೂ ಮುಂಚೆ ಶಾಸಕ ಭೀಮಣ್ಣ ಸಭೆ-ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌

    ಶಿರಸಿ:ಆಯ್ಕೆಯಾದ ತಕ್ಷಣವೇ, ಪ್ರಮಾಣವಚನಕ್ಕೂ ಮುಂಚೆ ಶಾಸಕ ಭೀಮಣ್ಣ ನಾಯ್ಕ ತಮ್ಮ ಕಾರ್ಯಚಟುವಟಿಕೆಯನ್ನು ಆರಂಭಿಸಿದ್ದಾರೆ.

    ನಗರದ ತಾಲೂಕು ಸೌಧದಲ್ಲಿ ಮಂಗಳವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

    ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಹಾಗೂ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

    ಪೇಪರ್ ನಲ್ಲಿ ರಿಪೋರ್ಟ್ ಕೊಡುವ ಕೆಲಸ ಮಾಡಬಾರದು.ಕುಡಿಯುವ ನೀರು ರಸ್ತೆ ಸೇರಿ ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
    ಯಾವ ಯಾವ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಪರ್ಯಾಯ ವ್ಯವಸ್ಥೆ ಕುರಿತು ಚಿಂತನೆ ನಡೆಸಿ ತಕ್ಷಣ ಗಮನಹರಿಸಬೇಕು. ಕ್ಷೇತ್ರದ ಯಾವ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.


    ಉಪವಿಭಾಗಾಧಿಕಾರಿ ದೇವರಾಜ್ ಆರ್. ಮಾತನಾಡಿ, ಶಿರಸಿ ಸಿದ್ದಾಪುರ ತಾಲೂಕಿನ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಯ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕು.ಪಿಡಿಓ ಗಳು ಪ್ರತಿ ಊರಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು.

    ನೀರಿನ ಸಮಸ್ಯೆ ಇರುವ ಹಾಗೂ ಮಳೆ ಬರುವವರೆಗೆ ಎಲ್ಲೆಲ್ಲಿ ನೀರಿನ ಸಮಸ್ಯೆ ಆಗಬಹುದು ಎಂದು ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಯ ಬಗ್ಗೆ ಕ್ರಮ ಕೈಗೊಳ್ಳಬೇಕು. ಬೋರ್ ವೆಲ್,ಭಾವಿ ಹಾಗೂ ಜಲಮೂಲಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.

    ಎಲ್ಲೇಲ್ಲಿ ಪೈಪ್ ಲೈನ್ ಹಾಗೂ ಪಂಪ್ ಸೆಟ್ ಹಾಳಾಗಿದೆಯೋ ಅದನ್ನು ತಕ್ಷಣ ಸರಿಪಡಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

    ಇದನ್ನೂ ಓದಿ: ಶಿವಮೊಗ್ಗದ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಸ್ಟ್; ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಮುಂಬೈಗೆ ಹೊರಟಿದ್ದಳಾ ಆ ಹುಡುಗಿ?


    ಶಿರಸಿ ತಹಸೀಲ್ದಾರ್ ಸುಮಂತ್ ಮಾತನಾಡಿ. ಶಿರಸಿ ತಾಲೂಕಿನ 9 ಪಂಚಾಯಿತಿ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಮೊದಲು ಆಗಿತ್ತು. ಪರ್ಯಾಯ ವ್ಯವಸ್ಥೆ ಗಳನ್ನು ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.

    ಇನ್ನೂ ಹದಿನೈದು ದಿನಗಳ ನಂತರವೂ ಮಳೆ ಬಾರದೇ ಹೋದರೆ 17ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಬರಬಹುದು ಎಂದು ಗುರುತಿಸಲಾಗಿದೆ .ಕಿರು ನೀರು ಸರಬರಾಜು ವ್ಯವಸ್ಥೆ ಯನ್ನು ಬಲಪಡಿಸಲಾಗುತ್ತಿದೆ ಎಂದರು.

    ತಾಲೂಕಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ತಲಕೊಪ್ಪ ಮಾತನಾಡಿ,
    ಬನವಾಸಿ ಹೋಬಳಿಯಲ್ಲಿ ನೀರಿನ ಸಮಸ್ಯೆ ಇದೆ.ನಾವು ಅಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ.


    ತಾಲೂಕಿನ ಮತ್ಯಾವ ಭಾಗದಲ್ಲೂ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರಿನ ಸಮಸ್ಯೆ ಇದುವರೆಗೆ ಇಲ್ಲ. ಮುಂದಿನ ದಿನಗಳಲ್ಲಿ ಮಳೆ ಬಾರದೇ ಹೋದರೆ ನೀರಿನ ಸಮಸ್ಯೆ ಉಧ್ಭವಿಸುವ ಸಾಧ್ಯತೆಗಳಿವೆ ಎಂದರು.

    ಈಸಂದರ್ಭದಲ್ಲಿ ಸಿದ್ದಾಪುರ ತಹಸೀಲ್ದಾರ್ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts