More

    ಇಂದಿನಿಂದ ಇಂಗ್ಲೆಂಡ್-ನ್ಯೂಜಿಲೆಂಡ್ ಟೆಸ್ಟ್ ಸರಣಿ, ದಾಖಲೆ ಸನಿಹ ಆಂಡರ್‌ಸನ್

    ಲಂಡನ್: ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಬುಧವಾರ ಚಾಲನೆ ಸಿಗಲಿದೆ. ಕೇನ್ ವಿಲಿಯಮ್ಸನ್ ಬಳಗಕ್ಕೆ ಭಾರತದೆದುರಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಮತ್ತು ಜೋ ರೂಟ್ ಪಡೆ ಭಾರತದೆದುರಿನ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಈ ಸರಣಿ ವೇದಿಕೆಯಾಗಿದೆ.

    ಐಪಿಎಲ್‌ನಲ್ಲಿ ಆಡಿ ತವರಿಗೆ ಮರಳಿರುವ ಜೋಸ್ ಬಟ್ಲರ್, ಜಾನಿ ಬೇರ್‌ಸ್ಟೋ, ಸ್ಯಾಮ್ ಕರ‌್ರನ್ ಮುಂತಾದ ಪ್ರಮುಖ ಆಟಗಾರರು ಮತ್ತು ಗಾಯಾಳುಗಳಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಅವರಿಲ್ಲದೆ ಇಂಗ್ಲೆಂಡ್ ತಂಡ ಬಹುತೇಕ ಯುವ ಆಟಗಾರರಿಂದಲೇ ತುಂಬಿದೆ. ನ್ಯೂಜಿಲೆಂಡ್ ಕೂಡ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಭಾರತ ಮೂಲದ ಆಲ್ರೌಂಡರ್ ರಚಿನ್ ರವೀಂದ್ರ ಕಿವೀಸ್ ಪರ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

    ದಾಖಲೆ ಸನಿಹದಲ್ಲಿ ಜೇಮ್ಸ್ ಆಂಡರ್‌ಸನ್
    ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಈ ಪಂದ್ಯದ ಮೂಲಕ ಇಂಗ್ಲೆಂಡ್ ಪರ ಗರಿಷ್ಠ 161 ಟೆಸ್ಟ್ ಆಡಿರುವ ಮಾಜಿ ನಾಯಕ ಅಲಸ್ಟೈರ್ ಕುಕ್ ದಾಖಲೆ ಸರಿಗಟ್ಟಲಿದ್ದಾರೆ. 2ನೇ ಟೆಸ್ಟ್‌ನಲ್ಲೂ ಕಣಕ್ಕಿಳಿದರೆ ಅವರು ಕುಕ್ ದಾಖಲೆ ಮುರಿದು, ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಆಡಿದ ಆಟಗಾರ ಎನಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಕಬಳಿಸಿದ ಮೊದಲ ವೇಗಿ ಎನಿಸಿರುವ ಆಂಡರ್‌ಸನ್ ಇನ್ನು 8 ವಿಕೆಟ್ ಕಬಳಿಸಿದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾವಿರ ವಿಕೆಟ್ ಕಬಳಿಸಿದ ಸಾಧನೆಯನ್ನೂ ಮಾಡಲಿದ್ದಾರೆ. ಹಾಲಿ ಕ್ರಿಕೆಟಿಗರಲ್ಲಿ ಅವರು ಈ ಸಾಧನೆ ಮಾಡಿದ ಏಕಮಾತ್ರ ಬೌಲರ್ ಎನಿಸಲಿದ್ದಾರೆ.

    ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
    ನೇರಪ್ರಸಾರ: ಸೋನಿ ಸಿಕ್ಸ್
    ಟೆಸ್ಟ್ ಮುಖಾಮುಖಿ: 105
    ಇಂಗ್ಲೆಂಡ್: 48
    ನ್ಯೂಜಿಲೆಂಡ್: 11
    ಡ್ರಾ: 46

    ಐಪಿಎಲ್ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ, ಆದರೆ ಷರತ್ತುಗಳು ಅನ್ವಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts