More

    ಆಸೀಸ್‌ಗೆ ತಿರುಗೇಟು, ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿದ ಭಾರತ ತಂಡ

    ಮೆಲ್ಬೋರ್ನ್: ಅಜಿಂಕ್ಯ ರಹಾನೆ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ಪುಟಿದೆದ್ದಿರುವ ಭಾರತ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಸೋಲಿನ ಪಂಚ್ ನೀಡಿದೆ. ಅಡಿಲೇಡ್‌ನಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದ ತನ್ನ ಕನಿಷ್ಠ ಮೊತ್ತಕ್ಕೆ ಕುಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದ ಹಿನ್ನಡೆಯನ್ನೂ ಭಾರತ ತಂಡ ಎದುರಿಸಿತ್ತು. ಇದರ ನಡುವೆಯೂ ಚೇತೋಹಾರಿ ನಿರ್ವಹಣೆ ತೋರಿದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ 2ನೇ ಕಾದಾಟದಲ್ಲಿ ಮೂರೂವರೆ ದಿನಗಳಲ್ಲೇ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಕಳೆದ ಪ್ರವಾಸದ ಐತಿಹಾಸಿಕ ಸರಣಿ ಗೆಲುವಿನ ಸಾಧನೆಯನ್ನು ಮರುಕಳಿಸುವ ಆಸೆಗೂ ಮರುಜೀವ ತುಂಬಿದೆ. ಈ ಮೂಲಕ 2020 ವರ್ಷವನ್ನು ಭಾರತ ಗೆಲುವಿನೊಂದಿಗೆ ಮುಗಿಸಿದೆ.

    ಎಂಸಿಜಿ ಮೈದಾನದಲ್ಲಿ ಮಂಗಳವಾರ 6 ವಿಕೆಟ್‌ಗೆ 133 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸೀಸ್, ಭೋಜನ ವಿರಾಮದ ವೇಳೆಗೆ ಭರ್ತಿ 200 ರನ್‌ಗೆ ಆಲೌಟ್ ಆಯಿತು. ಇದರಿಂದ 70 ರನ್ ಸವಾಲು ಪಡೆದ ಭಾರತ ತಂಡ 15.5 ಓವರ್‌ಗಳಲ್ಲೇ 2 ವಿಕೆಟ್‌ಗೆ 70 ರನ್ ಪೇರಿಸಿ ಜಯಿಸಿತು. ಮೊದಲ ಪಂದ್ಯದ ಗೆಲುವಿನ ಬಳಿಕ 4-0ಯಿಂದ ಸರಣಿ ಜಯಿಸುವ ಕನಸು ಕಂಡಿದ್ದ ಆಸೀಸ್ ಈಗ ಸರಣಿ ರಕ್ಷಿಸಿಕೊಳ್ಳಲು ಹೋರಾಡಬೇಕಾಗಿದೆ.

    ಇದನ್ನೂ ಓದಿ: ರನೌಟ್ ಆದ ಬಳಿಕ ಅಜಿಂಕ್ಯ ರಹಾನೆ ತೋರಿದ ವರ್ತನೆಗೆ ಕ್ರಿಕೆಟ್ ಪ್ರೇಮಿಗಳ ಪ್ರಶಂಸೆ

    ಭಾರತ ತಂಡ ಎಂಸಿಜಿಯಲ್ಲಿ 4ನೇ ಗೆಲುವು ದಾಖಲಿಸಿತು. ಇದು ಭಾರತ ತಂಡ ತವರಿನಿಂದ ಹೊರಗೆ ಅತಿಹೆಚ್ಚು ಟೆಸ್ಟ್ ಗೆದ್ದ ತಾಣವೆನಿಸಿದೆ. ಪೋರ್ಟ್‌ಆ್ ಸ್ಪೇನ್, ಕಿಂಗ್‌ಸ್ಟನ್ ಮತ್ತು ಕೊಲಂಬೊದ ಎಸ್‌ಎಸ್‌ಸಿ ಮೈದಾನದಲ್ಲಿ ಭಾರತ ತಲಾ 3 ಗೆಲುವು ದಾಖಲಿಸಿದೆ. ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಭಾರತ ತಂಡ ಸತತ 3ನೇ ಟೆಸ್ಟ್‌ನಲ್ಲೂ ಗೆದ್ದು ಅಜೇಯ ದಾಖಲೆ ಉಳಿಸಿಕೊಂಡಿತು.

    ಆಸ್ಟ್ರೇಲಿಯಾ: 195 ಮತ್ತು 103.1 ಓವರ್‌ಗಳಲ್ಲಿ 200 (ಗ್ರೀನ್ 45, ಕಮ್ಮಿನ್ಸ್ 22, ಸ್ಟಾರ್ಕ್ 14*, ಹ್ಯಾಸಲ್‌ವುಡ್ 10, ಸಿರಾಜ್ 37ಕ್ಕೆ 3, ಬುಮ್ರಾ 54ಕ್ಕೆ 2, ಜಡೇಜಾ 28ಕ್ಕೆ 2, ಅಶ್ವಿನ್ 71ಕ್ಕೆ 2), ಭಾರತ: 326 ಮತ್ತು 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 70 (ಮಯಾಂಕ್ 5, ಗಿಲ್ 35*, ಪೂಜಾರ 3, ರಹಾನೆ 27*, ಸ್ಟಾರ್ಕ್ 20ಕ್ಕೆ 1, ಕಮ್ಮಿನ್ಸ್ 22ಕ್ಕೆ 1). ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.

    ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ, ಧೋನಿಗೂ ಐಸಿಸಿ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts