More

    ಭಾರತದ ಮೊಟ್ಟ ಮೊದಲ ಖಾಸಗಿ ರಾಕೆಟ್​ ವಿಕ್ರಮ್​-ಎಸ್​ ಉಡಾವಣೆ ಯಶಸ್ವಿ

    ನವದೆಹಲಿ: ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಕಂಪನಿ ಅಭಿವೃದ್ಧಿ ಪಡಿಸಿದ “ವಿಕ್ರಮ್​ ಎಸ್​” ಹೆಸರಿನ ಸಬ್ ಆರ್ಬಿಟಲ್ ರಾಕೆಟ್​ ಉಡಾವಣೆ ಯಶಸ್ವಿಯಾಗಿದೆ. ಶ್ರೀಹರಿಕೋಟಾ (Sriharikota)ದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಿದಿಂದ ವಿಕ್ರಮ್​ ಎಸ್​ ರಾಕೆಟ್​ ನಭಕ್ಕೆ ಜಿಗಿದಿದೆ.

    ವಿಕ್ರಮ್ ಎಸ್​ ರಾಕೆಟ್​ ಅನ್ನು ಹೈದರಾಬಾದ್ ಮೂಲದ ನಾಲ್ಕು ವರ್ಷದ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ನಿರ್ಮಿಸಿದ್ದು, ದಶಕಗಳವರೆಗೆ ಇಸ್ರೋ ಪ್ರಾಬಲ್ಯ ಹೊಂದಿದ್ದ ಬಾಹ್ಯಾಕಾಶ ಉದ್ಯಮದಲ್ಲಿ ಭಾರತೀಯ ಖಾಸಗಿ ಬಾಹ್ಯಾಕಾಶ ಉದ್ಯಮ ಇದೀಗ ಹೊಸ ಹೆಜ್ಜೆಯನ್ನಿಟ್ಟಿದೆ. ಇಸ್ರೋ ಮತ್ತು ಐಎನ್​-ಸ್ಪೇಸ್​ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ನೆರವಿನಿಂದ ರಾಕೆಟ್​ ಉಡಾವಣೆ ಮಾಡಲಾಗಿದೆ.

    ಖಾಸಗಿ ರಾಕೆಟ್​ ಐತಿಹಾಸಿಕ ಉಡಾವಣೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್​, ಅಭಿನಂದನೆಗಳು ಭಾರತ! ಇದು ಹೊಸ ಉದಯದ ಆರಂಭ. ಸ್ಕೈರೂಟ್ ಸಹ-ಸಂಸ್ಥಾಪಕರ ಕನಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೀವ ತುಂಬಿದ್ದಾರೆ. ಮುಂದಿನ 25 ವರ್ಷಗಳ ಭಾರತದ ಆರೋಹಣ ಪ್ರಾರಂಭವಾಗಿದೆ ಎಂದಿದ್ದಾರೆ.

    ಆಂಧ್ರಪ್ರದೇಶ ಮೂಲದ ಎನ್ ಸ್ಪೇಸ್ ಟೆಕ್ ಇಂಡಿಯಾ, ಚೆನ್ನೈ ಮೂಲದ ಸ್ಟಾರ್ಟಪ್ ಸ್ಪೇಸ್ ಕಿಡ್ಸ್ ಮತ್ತು ಅರ್ಮೇನಿಯನ್ ಬಾಜೂಮ್ ಕ್ಯೂ ಸ್ಪೇಸ್ ರಿಸರ್ಚ್ ಲ್ಯಾಬ್ ನಿರ್ಮಿಸಿದ ಮೂರು ಪೇಲೋಡ್​ಗಳನ್ನು ರಾಕೆಟ್ ಹೊತ್ತೊಯ್ದಿದೆ. ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡುವ ಮೂಲಕ ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ. ಇದು ನವ ಭಾರತದ ಸಂಕೇತವಾಗಿದೆ ಮತ್ತು ಉತ್ತಮ ಭವಿಷ್ಯದ ಪ್ರಾರಂಭವಾಗಿದೆ ಎಂದು ಸ್ಕೈರೂಟ್​ ಏರೋಸ್ಪೇಸ್​ ಸಹ ಸಂಸ್ಥಾಪಕ ಪವನ್ ಕುಮಾರ್ ಚಂದನ ಹೇಳಿದರು.

    ಅಂದಹಾಗೆ ಈ ರಾಕೆಟ್‌ನಲ್ಲಿ ಅದರ ಗ್ರಾಹಕರಿಗೆ ಸೇರಿದ ಮೂರು ಹಂತಗಳ ಪೇಲೋಡ್ ಇದ್ದು, ಸಬ್ ಆರ್ಬಿಟಲ್ (ಸಮುದ್ರ ಮಟ್ಟದಿಂದ ಅಂದಾಜು 80 ಕಿಲೋಮೀಟರ್ ಎತ್ತರ) ಹಾರಾಟದಲ್ಲಿ ಕೊಂಡೊಯ್ಯಲಿದೆ. ಸಾಮಾನ್ಯವಾಗಿ ಯಾವುದೇ ಹಾರಾಟ ‘ಕಾರ್ಮನ್ ಲೈನ್’ (ಸಮುದ್ರ ಮಟ್ಟದಿಂದ 100 ಕಿಲೋಮೀಟರ್ ಎತ್ತರ) ಮೀರಿ ಸಾಗಿದರೆ ಅದನ್ನು ಬಾಹ್ಯಾಕಾಶಕ್ಕೆ ಮುನ್ನುಗ್ಗುವಿಕೆ ಎಂದು ಕರೆಯಲಾಗುತ್ತದೆ. ಈ ಕಾರ್ಮನ್ ರೇಖೆಯ ಕೆಳಮಟ್ಟದ ಹಾರಾಟವನ್ನು ಮೇಲಿನ ವಾತಾವರಣದ ಪ್ರಯೋಗಗಳಿಗೆ ನಡೆಸುವ ಸಬ್ ಆರ್ಬಿಟಲ್ ಹಾರಾಟ ಎಂದು ಕರೆಯಲಾಗುತ್ತದೆ. (ಏಜೆನ್ಸೀಸ್​)

    ಹುಮ್ಮಸ್ಸಿನಿಂದ ಉಡಾವಣೆಗೆ ಸನ್ನದ್ಧವಾಗಿದೆ ಭಾರತೀಯ ಖಾಸಗಿ ಬಾಹ್ಯಾಕಾಶ ಉದ್ಯಮ: ನ. 15ರಂದು ಪ್ರಥಮ ರಾಕೆಟ್ ಉಡಾವಣೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ; ಕೆಯುಡಬ್ಲುಜೆ ವಾರ್ಷಿಕ ಪ್ರಶಸ್ತಿ ಅರ್ಜಿ ಆಹ್ವಾನ

    ತಾನಾಗಿಯೇ ಒಡೆಯುವ ತೆಂಗಿನಕಾಯಿ: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ದೇವರ ಪವಾಡ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts