More

    ಗಗನಯಾನ ಮಿಷನ್​: ಕೊನೆಯ ಐದು ಸೆಕೆಂಡ್​ನಲ್ಲಿ ಟಿವಿ-ಡಿ1 ರಾಕೆಟ್ ಉಡಾವಣೆಗೆ ತಡೆ

    ಶ್ರೀಹರಿಕೋಟಾ (ಆಂಧ್ರಪ್ರದೇಶ): ನಭಕ್ಕೆ ಜಿಗಿಯಲು ಕೆಲವೇ ಸೆಕೆಂಡ್​ಗಳು ಬಾಕಿ ಇರುವಾಗಲೇ ಗಗನಯಾನಿಗಳ ಸುರಕ್ಷತಾ ಪರೀಕ್ಷಾ ವಾಹನ (ಟಿವಿ-ಡಿ1) ಏಕ-ಹಂತದ ದ್ರವ ರಾಕೆಟ್​ ಉಡಾವಣೆಯನ್ನು ತಡೆಹಿಡಿಯಲಾಗಿದೆ ಮತ್ತು ಸಮಸ್ಯೆಯನ್ನು ಪತ್ತೆಹಚ್ಚಿರುವ ಇಸ್ರೋ 10 ಗಂಟೆಗೆ ಉಡಾವಣಾ ಸಮಯವನ್ನು ಮರುನಿಗದಿ ಮಾಡಿದೆ.

    ಲಾಂಚ್​ ಕಮ್ಯಾಂಡ್​ ಅನ್ನು ನಿರ್ವಹಿಸುತ್ತಿದ್ದ ಕಂಪ್ಯೂಟರ್​ ರಾಕೆಟ್​ ಉಡಾವಣೆಗೆ ಇನ್ನೂ ಐದು ಸೆಕೆಂಡ್​ ಬಾಕಿ ಇರುವಾಗಲೇ ಉಡಾವಣೆಯನ್ನು ಸ್ಥಗಿತಗೊಳಿಸಿತು. ಇದಾದ ಬೆನ್ನಲ್ಲೇ ಇಸ್ರೋ ಮಾಹಿತಿ ನೀಡಿದ್ದು, ಸಮಸ್ಯೆಯನ್ನು ಪರಿಶೀಲಿಸಿ, ಅಸಂಗತತೆಯನ್ನು ಗುರುತಿಸುವುದಾಗಿ ತಿಳಿಸಿದೆ.

    ಉಡಾವಣೆಯನ್ನು ತಡೆಹಿಡಿಯಲು ಕಂಪ್ಯೂಟರ್‌ಗೆ ಏನೋ ಒಂದು ಪ್ರಚೋದನೆ ನೀಡಿದ್ದು, ನಾವು ಏನು ಸಮಸ್ಯೆ ಎಂಬುದನ್ನು ಹಸ್ತಚಾಲಿತವಾಗಿ ವಿಶ್ಲೇಷಿಸುತ್ತೇವೆ ಎಂದು ಇಸ್ರೋ ಮುಖ್ಯಸ್ಥ ಎಸ್​. ಸೋಮನಾಥ್​ ತಿಳಿಸಿದರು.

    ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹವಾಮಾನ ಸಮಸ್ಯೆಯಿಂದಾಗಿ ಪರೀಕ್ಷಾ ಉಡಾವಣೆಯು ಮುಂಜಾನೆಯೇ ತಡವಾಗಿತ್ತು. ಇಂಜಿನ್ ಇಗ್ನಿಷನ್ ಆಗಲಿಲ್ಲ. ಏನು ತಪ್ಪಾಗಿದೆ ಎಂಬುದನ್ನು ನಾವು ಕಂಡುಹಿಡಿಯಬೇಕು. ವಾಹನ ಸುರಕ್ಷಿತವಾಗಿದೆ ಎಂದು ಸೋಮನಾಥ್ ಅವರು ಲೈವ್‌ಸ್ಟ್ರೀಮ್‌ನಲ್ಲಿ ಹೇಳಿದರು.

    ಅಂದಹಾಗೆ ಮೂರು ದಿನದ ಗಗನಯಾನ ಮಿಷನ್​ನಲ್ಲಿ 400 ಕಿಲೋ ಮೀಟರ್​ನ ಕೆಳ ಭೂ ಕಕ್ಷೆಯಲ್ಲಿ (ಲೋ ಅರ್ತ್ ಆರ್ಬಿಟ್) ಮಾನವರನ್ನು ಬಾಹ್ಯಾಕಾಶಕ್ಕೆ ಕಳಿಸಿ ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವುದು ಇಸ್ರೋ ಉದ್ದೇಶವಾಗಿದೆ. ತನ್ನ ಇತರ ಮಿಷನ್​ಗಳಂತಲ್ಲದೆ, ಇಸ್ರೋ ತನ್ನ ಪರೀಕ್ಷಾ ವಾಹನ (ಟಿವಿ-ಡಿ1) ಏಕ-ಹಂತದ ದ್ರವ ರಾಕೆಟ್​ಅನ್ನು ಯಶಸ್ವಿಯಾಗಿ ಉಡಾಯಿಸಲು ಪ್ರಯತ್ನಿಸಿತು. ಆದರೆ, ಕೊನೆಯ ಹಂತದಲ್ಲಿ ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ರದ್ದಾಗಿದೆ.

    ಈ ಕ್ರ್ಯೂ ಮಾಡ್ಯೂಲ್​ನೊಂದಿಗೆ ನಡೆಸಲಾಗುವ ಪರೀಕ್ಷಾ ವಾಹನ ಮಿಷನ್ ಇಸ್ರೋದ ಒಟ್ಟಾರೆ ಗಗನಯಾನ ಕಾರ್ಯಕ್ರಮದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಲಿದೆ. ಈ ಪರೀಕ್ಷಾರ್ಥ ಹಾರಾಟದ ಯಶಸ್ಸು ಉಳಿದ ಪರೀಕ್ಷೆಗಳಿಗೆ ವೇದಿಕೆಯನ್ನು ಸಜ್ಜುಗೊಳಿಸಲಿದೆ. ಭಾರತೀಯ ಗಗನಯಾನಿಗಳನ್ನು ಹೊಂದಿದ ದೇಶದ ಮೊದಲ ಗಗನಯಾನ ಕಾರ್ಯಕ್ರಮಕ್ಕೆ ಅದು ನೆರವಾಗಲಿದ್ದು 2025ರಲ್ಲಿ ಸಾಕಾರಗೊಳ್ಳುವ ನಿರೀಕ್ಷೆಯಿದೆ. (ಏಜೆನ್ಸೀಸ್​)

    ಭಾರತ ತನ್ನ ಕ್ರಮದಿಂದ ಲಕ್ಷಾಂತರ ಮಂದಿಯ ಸಹಜ ಜೀವನವನ್ನು ಕಷ್ಟಕ್ಕೆ ದೂಡಿದೆ: ಕೆನಡಾ ಪ್ರಧಾನಿ ಹೇಳಿಕೆ

    ‘ನಾನು ನಂದಿನಿ, ಬೆಂಗಳೂರಿಗ್ ಬಂದೀನಿ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts