More

    ಹುಮ್ಮಸ್ಸಿನಿಂದ ಉಡಾವಣೆಗೆ ಸನ್ನದ್ಧವಾಗಿದೆ ಭಾರತೀಯ ಖಾಸಗಿ ಬಾಹ್ಯಾಕಾಶ ಉದ್ಯಮ: ನ. 15ರಂದು ಪ್ರಥಮ ರಾಕೆಟ್ ಉಡಾವಣೆ

    ಹುಮ್ಮಸ್ಸಿನಿಂದ ಉಡಾವಣೆಗೆ ಸನ್ನದ್ಧವಾಗಿದೆ ಭಾರತೀಯ ಖಾಸಗಿ ಬಾಹ್ಯಾಕಾಶ ಉದ್ಯಮ: ನ. 15ರಂದು ಪ್ರಥಮ ರಾಕೆಟ್ ಉಡಾವಣೆ| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಭಾರತೀಯ ಉಡಾವಣಾ ವಾಹನ ನಿರ್ಮಾಣ ಸಂಸ್ಥೆ ಸ್ಕೈರೂಟ್ (Skyroot aerospace) ತನ್ನ ಪ್ರಥಮ ರಾಕೆಟ್ ಉಡಾವಣೆ ನವೆಂಬರ್ 15, ಮಂಗಳವಾರ ಬೆಳಗ್ಗೆ 11:30ಕ್ಕೆ ನಡೆಯಲಿದೆ ಎಂದು ಘೋಷಿಸಿದೆ. ವಿಕ್ರಮ್ – ಎಸ್ (Vikram S Rocket) ಹೆಸರಿನ ಈ ಸಬ್ ಆರ್ಬಿಟಲ್ ರಾಕೆಟ್‌ನ ಉಡಾವಣೆ ಆಂಧ್ರಪ್ರದೇಶದ ಶ್ರೀಹರಿಕೋಟಾ (Sriharikota)ದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಿದಿಂದ ನಡೆಯಲಿದೆ. ಈ ಉಡಾವಣೆ ಭಾರತದ ಪ್ರಥಮ ಖಾಸಗಿ ನಿರ್ಮಿತ ರಾಕೆಟ್‌ನ ಉಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ವಿಕ್ರಮ್ ಎಸ್ ಎಂಬ ಹೆಸರಿನ, ಸ್ಕೈರೂಟ್ ಸಂಸ್ಥೆ ನಿರ್ಮಿಸಿರುವ ಈ ರಾಕೆಟ್‌ನಲ್ಲಿ ಅದರ ಗ್ರಾಹಕರಿಗೆ ಸೇರಿದ ಮೂರು ಹಂತಗಳ ಪೇಲೋಡ್ ಇರಲಿದ್ದು, ಸಬ್ ಆರ್ಬಿಟಲ್ (ಸಮುದ್ರ ಮಟ್ಟದಿಂದ ಅಂದಾಜು 80 ಕಿಲೋಮೀಟರ್ ಎತ್ತರ) ಹಾರಾಟದಲ್ಲಿ ಕೊಂಡೊಯ್ಯಲಿದೆ. ಸಾಮಾನ್ಯವಾಗಿ ಯಾವುದೇ ಹಾರಾಟ ‘ಕಾರ್ಮನ್ ಲೈನ್’ (ಸಮುದ್ರ ಮಟ್ಟದಿಂದ 100 ಕಿಲೋಮೀಟರ್ ಎತ್ತರ) ಮೀರಿ ಸಾಗಿದರೆ ಅದನ್ನು ಬಾಹ್ಯಾಕಾಶಕ್ಕೆ ಮುನ್ನುಗ್ಗುವಿಕೆ ಎಂದು ಕರೆಯಲಾಗುತ್ತದೆ. ಈ ಕಾರ್ಮನ್ ರೇಖೆಯ ಕೆಳಮಟ್ಟದ ಹಾರಾಟವನ್ನು ಮೇಲಿನ ವಾತಾವರಣದ ಪ್ರಯೋಗಗಳಿಗೆ ನಡೆಸುವ ಸಬ್ ಆರ್ಬಿಟಲ್ ಹಾರಾಟ ಎಂದು ಕರೆಯಲಾಗುತ್ತದೆ.

    ಹುಮ್ಮಸ್ಸಿನಿಂದ ಉಡಾವಣೆಗೆ ಸನ್ನದ್ಧವಾಗಿದೆ ಭಾರತೀಯ ಖಾಸಗಿ ಬಾಹ್ಯಾಕಾಶ ಉದ್ಯಮ: ನ. 15ರಂದು ಪ್ರಥಮ ರಾಕೆಟ್ ಉಡಾವಣೆವಿಕ್ರಮ್ ಎಸ್ (Vikram S Rocket) ಹಾರಾಟ ಕೇವಲ ಐದು ನಿಮಿಷಗಳ ಅವಧಿಯದ್ದಾದರೂ, ವಿಕ್ರಮ್ ಎಸ್ ರಾಕೆಟ್‌ನ ಉಡಾವಣೆ ಒಟ್ಟಾರೆಯಾಗಿ ವಿಕ್ರಮ್ ಸರಣಿಯ ಆರ್ಬಿಟಲ್ ಕ್ಲಾಸ್ ಬಾಹ್ಯಾಕಾಶ ಉಡಾವಣಾ ವಾಹನಗಳ 80% ತಂತ್ರಜ್ಞಾನದ ಕುರಿತು ಭರವಸೆ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

    “ನಾವು ಪ್ರಮುಖವಾಗಿ ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ವಿಚಾರವೆಂದರೆ ನಮ್ಮ ಘನ ಇಂಧನ ಆಧಾರಿತ ರಾಕೆಟ್ ಇಂಜಿನ್ ಹಾಗೂ ರಾಕೆಟ್‌ನಲ್ಲಿರುವ ಹಲವು ಏವಿಯಾನಿಕ್ಸ್ ವಿಚಾರಗಳು” ಎಂದು ಹೇಳಿಕೆ ನೀಡಿದೆ.

    ಕಂಪನಿ ಪ್ರಸ್ತುತ ವಿಕ್ರಂ ಸರಣಿಯಲ್ಲಿ ಮೂರು ಆರ್ಬಿಟಲ್ ಕ್ಲಾಸ್ ರಾಕೆಟ್‌ಗಳ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ವಿಕ್ರಂ ಸರಣಿಯ ರಾಕೆಟ್‌ಗಳಿಗೆ ಖ್ಯಾತ ಭಾರತೀಯ ಬೌತಶಾಸ್ತ್ರಜ್ಞ ಹಾಗೂ ಖಗೋಳಶಾಸ್ತ್ರಜ್ಞ ವಿಕ್ರಮ್ ಸಾರಾಭಾಯಿ ಅವರ ಹೆಸರಿಡಲಾಗಿದೆ. ಸಾರಾಭಾಯಿ ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಭಾರತ ಬಾಹ್ಯಾಕಾಶ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಬಳಸುವ ಮಹತ್ವದ ದೂರದೃಷ್ಟಿಯನ್ನು ಹೊಂದಿದ್ದರು.

    ಹುಮ್ಮಸ್ಸಿನಿಂದ ಉಡಾವಣೆಗೆ ಸನ್ನದ್ಧವಾಗಿದೆ ಭಾರತೀಯ ಖಾಸಗಿ ಬಾಹ್ಯಾಕಾಶ ಉದ್ಯಮ: ನ. 15ರಂದು ಪ್ರಥಮ ರಾಕೆಟ್ ಉಡಾವಣೆವಿಕ್ರಮ್ ಎಸ್ (Vikram S Rocket) ಒಂದು ಏಕ ಹಂತದ ರಾಕೆಟ್ ಆಗಿದ್ದು, ಇದು ಘನ ಇಂದನವನ್ನು ಬಳಸಿಕೊಳ್ಳುತ್ತದೆ. ಇದು ಅಲ್ಯುಮಿನಿಯಂ ಹಾಗೂ ಅಮೋನಿಯಂ ಪರ್ಕ್ಲೋರೇಟ್‌ಗಳ ಮಿಶ್ರಣವನ್ನು ದಹಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಕ್ಸಿಲ್ ಟರ್ಮಿನೇಟೆಡ್ ಪೋಲಿಬುಟಾಡಿಯನ್ಸ್ ಬೈಂಡರ್ ಆಗಿ ಕಾರ್ಯಾಚರಿಸುತ್ತದೆ. ಇದೊಂದು ಈಗಾಗಲೇ ಪ್ರಯೋಗಿಸಿ ಪರೀಕ್ಷಿಸಿರುವ ಘನ ಇಂಧನವಾಗಿದ್ದು, ಇದೇ ಇಂಧನವನ್ನು ಭಾರತದ ಪಿಎಸ್ಎಲ್‌ವಿ ಹಾಗೂ ಜಿಎಸ್ಎಲ್‌ವಿ ರಾಕೆಟ್‌ಗಳಲ್ಲಿ ಬಳಸಲಾಗುತ್ತದೆ.

    ವಿಕ್ರಮ್ ಎಸ್ (Vikram S Rocket) ಮೂರು ಗ್ರಾಹಕ ಪೇಲೋಡ್ ಗಳನ್ನು ಒಯ್ಯಲಿದ್ದು, ಇದು ಶ್ರೀಹರಿಕೋಟದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಲಾಂಚ್ ಪ್ಯಾಡ್‌ನಿಂದ ಉಡಾವಣೆಗೊಳ್ಳಲಿದೆ. ಈ ರಾಕೆಟ್ ಕೊಂಡೊಯ್ಯಲಿರುವ ಮೂರೂ ಪೇಲೋಡ್‌ಗಳ ತೂಕ ಹತ್ತು ಕೆಜಿಗಿಂತ ಕಡಿಮೆ ಇರಲಿದೆ. ರಾಕೆಟ್ ಮೇಲೇರುತ್ತಿದ್ದ ಹಾಗೇ ಕೆಲವು ನಿಯತಾಂಕಗಳನ್ನು ಪರಿಶೀಲಿಸಲಾಗುತ್ತದೆ. ಅದು ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಬಳಕೆಯಾಗಲಿದೆ.

    ಒಂದು ವರದಿಯ ಪ್ರಕಾರ ವಿಕ್ರಮ್ ಸರಣಿ (1,2 ಹಾಗೂ 3) ಘನ ಹಂತದ ರಾಕೆಟ್‌ಗಳನ್ನು ಒಳಗೊಂಡಿರಲಿದ್ದು, ಅವುಗಳನ್ನು ಅಭಿವೃದ್ಧಿ ಪಡಿಸಬಹುದಾದ ರೀತಿಯಲ್ಲಿ, ಅಂದರೆ ಕಾರ್ಬನ್ ಸಂಯುಕ್ತಗಳು ಹಾಗೂ 3ಡಿ ಪ್ರಿಂಟೆಡ್ ಮೋಟಾರ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಇವುಗಳನ್ನು 72 ಗಂಟೆಗೂ ಕಡಿಮೆ ಅವಧಿಯಲ್ಲಿ ಜೋಡಿಸಿ, ಉಡಾವಣೆಗೊಳಿಸಬಹುದು.

    ಈ ರಾಕೆಟ್‌ಗಳು ಬಹುತೇಕ 815 ಕೆಜಿ ತೂಕ ಹೊಂದಿರುವ ಉಪಗ್ರಹಗಳನ್ನು ಲೋ ಅರ್ತ್ ಆರ್ಬಿಟ್ (ಎಲ್ಇಓ) ಹಾಗೂ ಸನ್ ಸಿಂಕ್ರನಸ್ ಪೋಲಾರ್ ಆರ್ಬಿಟ್ (ಎಸ್ಎಸ್‌ಪಿಓ) ಗಳಿಗೆ ಕೊಂಡೊಯ್ಯಬಲ್ಲದು.

    ಮತ್ತೊಮ್ಮೆ ಚರ್ಚ್​​ಗೆ ಬರ್ತೀನಿ… ಕೋಲಾರದಿಂದ ಸ್ಪರ್ಧಿಸುವ ಸುಳಿವು ಬಿಟ್ಟುಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

    ಬಿಜೆಪಿ ಪರೀಕ್ಷಾರ್ಥ ಪ್ರಯೋಗ; ಮಿಷನ್ ದಕ್ಷಿಣ ಕರ್ನಾಟಕ | ಒಕ್ಕಲಿಗರ ಭದ್ರಕೋಟೆ ಪ್ರವೇಶಕ್ಕೆ ಪ್ರತಿಮೆ ಬಲ

    ಪ್ರಗತಿಯ ಪ್ರತಿಮೆ ಅನಾವರಣ ಹೈವೋಲ್ಟೇಜ್ ರಾಜಕಾರಣ; ಮೂರೂ ಪಕ್ಷಗಳಿಂದ ಏಟು-ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts