More

    ಇಸ್ರೋದಿಂದ ಹೊಸ ಎಸ್​ಎಸ್​ಎಲ್​ವಿ-ಡಿ2 ರಾಕೆಟ್​ ಉಡಾವಣೆ ಯಶಸ್ವಿ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸ್ಮಾಲ್ ಸ್ಯಾಟ್​ಲೈಟ್ ಲಾಂಚ್ ವೆಹಿಕಲ್-ಡಿ2 (ಎಸ್​ಎಸ್​ಎಲ್​ವಿ) ಹೆಸರಿನ ಹೊಸ ರಾಕೆಟ್​ ಶುಕ್ರವಾರ (ಫೆ.10) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿತು.

    ಆಂಧ್ರ ಪ್ರದೇಶದ ಶ್ರಿಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್​ನಿಂದ ಎರಡನೇ ಬಾರಿಗೆ ಸುಮಾರು 120 ಟನ್ ತೂಕದ 34 ಮೀಟರ್ ಎತ್ತರದ ಎಸ್​ಎಸ್​ಎಲ್​ವಿ-ಡಿ2 ರಾಕೆಟ್ ಅನ್ನು ಶುಕ್ರವಾರ ಬೆಳಗ್ಗೆ ಸರಿಯಾಗಿ 9.18ಕ್ಕೆ ಆಗಸಕ್ಕೆ ಚಿಮ್ಮಿತು.

    15 ನಿಮಿಷಗಳ ಯಾತ್ರೆಯೊಳಗೆ ರಾಕೆಟ್ ಮೂರು ಉಪಗ್ರಹಗಳನ್ನು ಭೂಮಿಯಿಂದ 450 ಕಿಲೋಮೀಟರ್ ಎತ್ತರದಲ್ಲಿ ವೃತ್ತಾಕಾರದ ಕಕ್ಷೆಗೆ ಸೇರಿಸಲಿದೆ. ಇಸ್ರೋದ ಇಒಎಸ್ -07, ಅಮೆರಿಕದ ಅಂತಾರಿಸ್ ಜಾನುಸ್ -1 ಹಾಗೂ ಚೆನ್ನೈನ ಸ್ಪೇಸ್ ಕಿಡ್ಸ್ ಸಂಸ್ಥೆಯ ಆಜಾದಿ ಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ರಾಕೆಟ್ ಹೊತ್ತೊಯಿತು.

    ಇಸ್ರೋ 156.3 ಕೆ.ಜಿ ತೂಕದ ಇಒಎಸ್-07 ಉಪಗ್ರಹವನ್ನು ನಿರ್ವಿುಸಿದ್ದು, ಇದು ನೂತನ ಪ್ರಯೋಗಗಳಾದ ಎಂಎಂ ವೇವ್ ಹ್ಯುಮಿಡಿಟಿ ಸೌಂಡರ್, ಸ್ಪೆಕ್ಟ್ರಮ್ ಮಾನಿಟರಿಂಗ್ ಪೇಲೋಡ್​ಗಳನ್ನು ಒಳಗೊಂಡಿದೆ. ಆಜಾದಿಸ್ಯಾಟ್ -2 ಉಪಗ್ರಹವನ್ನು ಭಾರತದಾದ್ಯಂತ ಇರುವ 750 ವಿದ್ಯಾರ್ಥಿನಿಯರು ಚೆನ್ನೈನ ಸ್ಪೇಸ್ ಕಿಡ್ಸ್ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.

    ಎನ್​ಸಿಸಿ ಹಾಡು: ರಾಷ್ಟ್ರೀಯ ಕೆಡೆಟ್ ಕೋರ್ ಸ್ಥಾಪನೆಯ 75ನೇ ವರ್ಷದ ಗೌರವಾರ್ಥವಾಗಿ ಆಜಾದಿಸ್ಯಾಟ್ -2 ಉಪಗ್ರಹವು ಎನ್​ಸಿಸಿ ಹಾಡನ್ನು ಪ್ಲೇ ಮಾಡುತ್ತದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಡೆದ ಎಸ್​ಎಸ್​ಎಲ್​ವಿ-ಡಿ1 ರಾಕೆಟ್ ಉಡಾವಣೆ ವೇಳೆ ವೇಗದ ಕೊರತೆಯಿಂದಾಗಿ ಅತ್ಯಂತ ದೀರ್ಘ ಕಕ್ಷೆಯಲ್ಲಿ ಜೋಡಿಸಲ್ಪಟ ಉಪಗ್ರಹಗಳು ಕ್ಷಿಪ್ರವಾಗಿ ಅಸ್ಥಿರಗೊಂಡು ವೈಫಲ್ಯಗೊಂಡಿತ್ತು. ರಾಕೆಟ್​ನ ಮೊದಲ ಮೂರು ಹಂತಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದರೂ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡಿರುವ ಇಸ್ರೋ ಅಗತ್ಯ ಬದಲಾವಣೆಗಳೊಂದಿಗೆ ಎರಡನೇ ಬಾರಿಗೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪ್ರಯತ್ನ ಮಾಡಿದೆ. (ಏಜೆನ್ಸೀಸ್​)

    ಪಿಎಂ ಆವಾಸ್​ ಯೋಜನೆ ಹಣ ಪಡೆದು ಗಂಡಂದಿರಿಗೆ ಕೈಕೊಟ್ಟ ಲವರ್ಸ್​ ಜತೆ ನಾಲ್ವರು ವಿವಾಹಿತೆಯರು ಪರಾರಿ!

    ಇಂದಿನಿಂದ ಮಹಿಳಾ ಟಿ20 ವಿಶ್ವಕಪ್: ಭಾನುವಾರ ಭಾರತ-ಪಾಕ್​ ಪಂದ್ಯ

    ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts