LIVE| ಚಂದ್ರಯಾನ-3 ಉಡಾವಣೆಯ ನೇರಪ್ರಸಾರ

5

ಶ್ರೀಹರಿಕೋಟ: ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆ ಯಶಸ್ವಿಯಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಕೇಂದ್ರದಿಂದ ಇಂದು (ಜು.14) ಮಧ್ಯಾಹ್ನ 2.35ಕ್ಕೆ ಬಾಹುಬಲೆ ರಾಕೆಟ್​ ಚಂದ್ರಯಾನ 3 ಮಿಷನ್​ ಹೊತ್ತು ನಭಕ್ಕೆ ಜಿಗಿಯಿತು. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ. ಚಂದ್ರಯಾನ-3 ಉಡಾವಣೆಯನ್ನು ದಿಗ್ವಿಜಯ ನ್ಯೂಸ್​ ಯೂಟ್ಯೂಬ್​ ಲೈವ್​ನಲ್ಲಿ ವೀಕ್ಷಿಸಬಹುದಾಗಿದೆ.​

ದೂರದರ್ಶನ ನೇರ ಪ್ರಸಾರ 

ಚಂದ್ರಶಿಕಾರಿಗೆ ಇಸ್ರೋ ಸವಾರಿ; ಚಂದ್ರಯಾನ-3 ಶ್ರೀಹರಿಕೋಟದಿಂದ ಇಂದು ಉಡಾವಣೆ