More

    ಸೈನಿಕ/ಮಾಜಿ ಸೈನಿಕರಿಗೆ ಜಮೀನು ಮಂಜೂರಾತಿಯಲ್ಲಿ ಶೇ.10 ಮೀಸಲು…

    ಬೆಂಗಳೂರು: ಇದೀಗ ಸೈನಿಕರು ಅಥವಾ ಮಾಜಿ ಸೈನಿಕರಿಗೆ ಜಮೀನು ನೀಡುವುದಕ್ಕೆ ಹೊಸ ನಿಯಮಗಳನ್ನು ರೂಪಿಸಲಾಗಿದೆ.

    1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಅನ್ವಯ ಪ್ರತಿ ಗ್ರಾಮದಲ್ಲಿ ವಿಲೇವಾರಿಗೆ ಲಭ್ಯವಿರುವ ಜಮೀನಿನ ಪೈಕಿ ಶೇಕಡ 10ರಷ್ಟು ಜಮೀನನ್ನು ಸೈನಿಕ/ಮಾಜಿ ಸೈನಿಕರಿಗೆ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

    ಇದೀಗ ಹಾಲಿ/ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವುದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 26 ಎಲ್‌ಜಿಪಿ 2021, ದಿನಾಂಕ: 27.10.2021ರ ಅನ್ವಯ ಕರ್ನಾಟಕ ಭೂ ಮಂಜೂರಾತಿ 1969ರ ನಿಯಮಗಳು, ನಿಯಮ 8(8)ಕ್ಕೆ ತಿದ್ದುಪಡಿ ತರಲಾಗಿದೆ.

    ಸೈನಿಕ/ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸಿರುವ ತಾಲೂಕಿನಲ್ಲಿ ಅಥವಾ ಸಂಬಂಧಪಟ್ಟ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ ಉಚಿತವಾಗಿ ಭೂಮಿಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಎಲ್ಲಾದರೂ ಹಾಲಿ/ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸಿರುವ ತಾಲೂಕಿನಲ್ಲಿ ಜಮೀನು ಇಲ್ಲದಿದ್ದಲ್ಲಿ ಅರ್ಜಿಯನ್ನು ಅದೇ ಜಿಲ್ಲೆಯ ಯಾವುದಾದರೂ ತಾಲ್ಲೂಕಿಗೆ ಮಾತ್ರ ವರ್ಗಾಯಿಸಬಹದು. ಆದ್ದರಿಂದ ಜಿಲ್ಲಾಧಿಕಾರಿ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಯಾವುದಾದರು ತಾಲೂಕಿನಲ್ಲಿ ಜಮೀನು ಲಭ್ಯವಿದ್ದಲ್ಲಿ ಮಂಜೂರು ಮಾಡಲು ಕ್ರಮವಹಿಸಬೇಕು.

    ಒಂದುವೇಳೆ ಅರ್ಜಿದಾರರು ಕೋರಿದ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಲಭ್ಯ ಇಲ್ಲದ ಪಕ್ಷದಲ್ಲಿ ಬೇರೆ ಜಿಲ್ಲೆಯಲ್ಲಿ ಜಮೀನನ್ನು ಮಂಜೂರು ಮಾಡಲು ನಿಯಮಾನುಸಾರ ಕ್ರಮವಹಿಸಬೇಕು. ಈ ನಿಯಮದ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ನಿವೇಶವನ್ನು ನೀಡಲಾಗುವುದಿಲ್ಲ.

    ನಗರ ಪ್ರದೇಶದಲ್ಲಿ ನಿವೇಶ ನೀಡುವುದಾದರೆ 1200 ಚದರ ಅಡಿ ವಿಸ್ತೀರ್ಣದ ಜಾಗ, ಗ್ರಾಮೀಣ ಪ್ರದೇಶದಲ್ಲಿ ಆದರೆ 2400 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಜಾರಿಯಲ್ಲಿರುವ ಸರ್ಕಾರದ ಯಾವುದೇ ವಸತಿ ಯೋಜನೆಯ ಅಡಿಯಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಅಥವಾ ಇನ್ನು ಮುಂದೆ ಸರ್ಕಾರ ರೂಪಿಸಬಹುದಾದ ಯಾವುದೇ ವಿಶೇಷ ಯೋಜನೆಯ ಅಡಿಯಲ್ಲಿ ನಿವೇಶನವನ್ನು ಮಂಜೂರು ಮಾಡಲು ನಿಯಮಾನುಸಾರ ಕ್ರಮವಹಿಸಬೇಕು ಎನ್ನುವುದು ಹೊಸ ನಿಯಮ.

    ಬೆಂಗಳೂರು ನಗರ ಜಿಲ್ಲೆಯಲ್ಲಿ ಹಾಲಿ/ಮಾಜಿ ಸೈನಿಕರಿಗೆ ನಿವೇಶನ ಮಂಜೂರು ಮಾಡಲು ಅವಕಾಶವಿಲ್ಲದೇ ಇರುವುದರಿಂದ ಬೆಂಗಳೂರು ನಗರ ಜಿಲ್ಲೆಗೆ ಬರುವ ಅರ್ಜಿಗಳನ್ನು ಮಾತ್ರ ಪಕ್ಕದ ಜಿಲ್ಲೆಗೆ ವರ್ಗಾಯಿಸಲಾಗುತ್ತೆ. ಅಥವಾ ಅರ್ಜಿ ಹಾಕಿದವರು ಇಚ್ಛಿಸಿದ ಜಿಲ್ಲೆಗೆ ಅರ್ಜಿಯನ್ನು ವರ್ಗಾಯಿಸಬೇಕು.

    ಒಂದು ವೇಳೆ ಜಮೀನು ಲಭ್ಯವಿಲ್ಲ ಅಂತ ಆದಲ್ಲಿ, ನಿವೇಶನ ಮಂಜೂರು ಮಾಡಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು. ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಮಾತ್ರ ಪಕ್ಕದ ಜಿಲ್ಲೆಗೆ ವರ್ಗಾಯಿಸಲು ಅವಕಾಶವಿದೆ. ಉಳಿದ ಜಿಲ್ಲೆಯ ಅರ್ಜಿಗಳನ್ನು ಪಕ್ಕದ ಜಿಲ್ಲೆಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts