More

    ಕರೊನಾಗೆ ಬಾಬಾ ರಾಮ್​ದೇವ್​ ಅವರ ‘ಕರೊನಿಲ್’ ರಾಮಬಾಣವಂತೆ; ಇದಕ್ಕೆ ನೆಟ್ಟಿಗರು ಏನಂತಾರೆ…!

    ನವದೆಹಲಿ: ಕರೋನವೈರಸ್‌ ಸೋಂಕಿಗೆ ಮೊದಲ ಆಯುರ್ವೇದ ಔಷಧಿ ಎಂದು ಯೋಗ ಗುರು ರಾಮದೇವ್ ಹೇಳಿಕೊಂಡಿರುವ ಕೊರೊನಿಲ್ ಮಾತ್ರೆಯನ್ನು ಪತಂಜಲಿ ಆಯುರ್ವೇದ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ. ಪತಂಜಲಿ ಔಷಧಿ ಪಡೆದ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದು, ಅವರಲ್ಲಿ ಶೇ. 69 ಜನರು ಮೂರು ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ರಾಮದೇವ್ ಹೇಳಿದ್ದಾರೆ.
    ಈ ಔಷಧಿಯಿಂದ ಗುಣಮುಖವಾಗುವುದು ಶೇ.100ರಷ್ಟು ಖಚಿತ ಎಂದು ಬಾಬಾ ರಾಮ್​ದೇವ್ ಹೇಳಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಇದನ್ನೂ ಓದಿ: ನಾಪತ್ತೆಯಾಗಿ ಉಗ್ರಪಡೆ ಸೇರಿದ ಕಾಶ್ಮೀರಿ ಪದವೀಧರ

    ಇದೊಂದು ವ್ಯಾಪಾರ ತಂತ್ರ ಎಂಬುದು ಫೇಸ್​ಬುಕ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
    “ಪ್ರಾಯೋಗಿಕವಾಗಿ ಪರೀಕ್ಷಿಸಿದ, ಪುರಾವೆ ಆಧಾರಿತ ಔಷಧದೊಂದಿಗೆ ಬರುವುದು ಒಂದು ಸವಾಲಾಗಿತ್ತು. 280 ರೋಗಿಗಳ ಮೇಲೆ ಈ ಔಷಧಿಯನ್ನು ಪರೀಕ್ಷಿಸಲಾಗಿದ್ದು, ಶೇ.100 ಜನ ಚೇತರಿಸಿಕೊಂಡಿದ್ದಾರೆ. ಈ ಮಾತ್ರೆಯನ್ನು ಆಯುರ್ವೇದ ಅಂಶಗಳಿಂದ ತಯಾರಿಸಲಾಗಿದೆ. ಕೊರೊನಿಲ್​​​ ನಲ್ಲಿ 100 ಕ್ಕೂ ಹೆಚ್ಚು ಸಂಯುಕ್ತಗಳನ್ನು ಬಳಸಲಾಗಿದೆ. ಇತರ ಆಯುರ್ವೇದ ಔಷಧಿಗಳನ್ನು ಒಳಗೊಂಡಿರುವ ಮತ್ತು ಸಂಪೂರ್ಣ ರೋಗನಿರೋಧಕ ಶಕ್ತಿಗೆ ಸಹಾಯ ವಾಗುವ ಸಂಪೂರ್ಣ ಕಿಟ್ ಅನ್ನು ತಯಾರಿಸಲಾಗುತ್ತಿದೆ ಎಂದು ಬಾಬಾ ರಾಮ್​​ದೇವ್ ಹೇಳಿದ್ದಾರೆ.

    ಇದನ್ನೂ ಓದಿ: ಪತಂಜಲಿ ಕರೊನಾ ನಿಗ್ರಹ ಔಷಧಕ್ಕೆ ಪ್ರತಿಕ್ರಿಯಿಸದ ಐಸಿಎಂಆರ್​, ಆಯುಷ್​ ಇಲಾಖೆ

    ಆದರೆ ಔಷಧಿಯನ್ನು ಯಾರ ಮೇಲೆ ಮತ್ತು ಹೇಗೆ ಪ್ರಯೋಗ ಮಾಡಿದ್ದಾರೆ? ಪುರಾವೆ ಏನಿದೆ? ನಂಬುವುದು ಹೇಗೆ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.  ಆರೋಗ್ಯ ಇಲಾಖೆಗೆ ಈ ಔಷಧಿ ಕಳಿಸಿಕೊಡಿ. ಅಲ್ಲಿ ಪ್ರಯೋಗ ನಡೆಯಲಿ. ಯಶಸ್ವಿಯಾದರೆ ಮುಂದೆ ನೋಡೋಣ ಎಂದಿದ್ದಾರೆ ಫೇಸ್​ಬುಕ್ ಬಳಕೆದಾರರು.

    ಇದನ್ನೂ ಓದಿ:  ಪತಂಜಲಿಯ ಕರೊನಾ ಕಿಟ್​ನ ದರ 545 ರೂಪಾಯಿ

    ‘ಇಡೀ ಕಿಟ್‌ನ ಬೆಲೆ 600 ರೂ.,ಆದಾಗ್ಯೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಇದನ್ನು ಉಚಿತವಾಗಿ ನೀಡಲಾಗುವುದು ಎಂದು ಬಾಬಾ ಹೇಳಿದ್ದಾರೆ. ಹರಿದ್ವಾರದ ಪತಂಜಲಿ ಸಂಶೋಧನಾ ಸಂಸ್ಥೆ ಮತ್ತು ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಜಂಟಿಯಾಗಿ ಔಷಧದ ವೈದ್ಯಕೀಯ ಪ್ರಯೋಗಗಳನ್ನು ನಡೆಸಿದ್ದವು.

    ಅಶ್ವಗಂಧವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯವಾಗಲಿದ್ದು, ಈ ನಿಟ್ಟಿನಲ್ಲಿ ಈ ಔಷಧ ಬಳಕೆಯಾಗುವ ಸಾಧ್ಯತೆಯೂ ಇದೆ ಎಂಬುದು ಮತ್ತೊಬ್ಬ ಬಳಕೆದಾರರ ಅಭಿಪ್ರಾಯ.

    ನೇಪಾಳದ ಪರಿಷ್ಕೃತ ನಕ್ಷೆ ಬೆಂಬಲಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts