More

    ಜ್ಯೋ(ಕೋ)ತಿರಾಜ್ ಪರ ನಿಂತ ಟ್ವೀಟಿಗರು; ಸರ್ಕಾರದ ಗಮನ ಸೆಳೆಯುವ ಪ್ರಯತ್ನ: ಯಾಕೆ?

    ಬೆಂಗಳೂರು: ಚಿತ್ರದುರ್ಗದ ಕೋಟೆ ಬಳಿ ಅಲ್ಲಿನ ಗೋಡೆ, ಕಣಿವೆ, ಪ್ರಪಾತಗಳ ಮೇಲೆ ಯಾವುದೇ ರಕ್ಷಣಾ ಉಪಕರಣ ಇಲ್ಲದೆ ಏರಿಳಿಯವ ಜ್ಯೋತಿರಾಜ್, ಅದೇ ಕಾರಣಕ್ಕೆ ಕೋತಿರಾಜ್ ಎಂದೂ ಕರೆಯಲ್ಪಡುತ್ತಿದ್ದಾರೆ. ಸಾಹಸ ಪ್ರದರ್ಶನದ ಜತೆ ಮನರಂಜನೆ ಒದಗಿಸುತ್ತ, ತರಬೇತಿಯನ್ನೂ ಕೊಡುತ್ತಿರುವ ಜ್ಯೋತಿರಾಜ್​ ಪರವಾಗಿ ಇದೀಗ ನೆಟ್ಟಿಗರು ದನಿ ಎತ್ತಿದ್ದಾರೆ.

    ಜ್ಯೋತಿರಾಜ್ ಪ್ರತಿದಿನ ಅಭ್ಯಾಸ ಮಾಡುತ್ತಿದ್ದರೂ ಅವರಿಗೆ ಸೂಕ್ತವಾದ ಒಳಾಂಗಣ ವ್ಯವಸ್ಥೆ ಇಲ್ಲ. ಅವರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ 13 ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ಅವರಿಗೆ ಸರ್ಕಾರದಿಂದಲೂ ಯಾವುದೇ ಸವಲತ್ತು ಸಿಗುತ್ತಿಲ್ಲ. ಅವರು ಈಗ ತರಬೇತಿ ಕೊಡುತ್ತಿರುವ ಮಕ್ಕಳು ಭವಿಷ್ಯದಲ್ಲಿ ದೇಶಕ್ಕೆ ಪದಕ ತರಬಹುದು. ಅಷ್ಟಕ್ಕೂ ರಾಕ್​ ಕ್ಲೈಂಬಿಂಗ್ ಎನ್ನುವುದಕ್ಕೆ ಇನ್ನೂ ಅಂಥ ಪ್ರಾಮುಖ್ಯತೆ ಸಿಗದ್ದರಿಂದ, ಜ್ಯೋತಿರಾಜ್​ಗೆ ಸೂಕ್ತ ಸಹಾಯ ಒದಗಿಸಿದರೆ ಅದು ಆಟದ ಗತಿಯನ್ನೇ ಬದಲಿಸಬಹುದು ಎಂದು @suprakash26 ಎಂಬ ಖಾತೆಯಿಂದ ಟ್ವಿಟರ್​ನಲ್ಲಿ ದನಿ ಎತ್ತಲಾಗಿದೆ.

    ಜ್ಯೋತಿರಾಜ್ ಮತ್ತು ತಂಡ ಬಿರುಬಿಸಿಲಿನಲ್ಲಿ ರಿಸ್ಕ್ ತೆಗೆದುಕೊಂಡು ಇಂಥ ಪ್ರಯತ್ನ ಮಾಡುತ್ತಿದೆ. ಜ್ಯೋತಿರಾಜ್​ ಈಗಾಗಲೇ ಹಲವು ಗಾಯಗಳಿಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ಕೂಡ ಆಗಿದೆ. ಅವರು ರಾಷ್ಟ್ರಮಟ್ಟದ ಸ್ಪರ್ಧೆಗಾಗಿ ಮಕ್ಕಳನ್ನು ಅಣಿಗೊಳಿಸುತ್ತಿದ್ದು, ಅವರಿಗೆ ಎಲ್ಲರೂ ನೆರವಾಗಿ ಎಂದು ಜ್ಯೋತಿರಾಜ್​ ಗೂಗಲ್​ ಪೇ ಖಾತೆ ವಿವರ ಕೂಡ ಕೊಟ್ಟಿರುವ ಇವರು ಟ್ವೀಟ್ ಮೂಲಕ ಮುಖ್ಯಮಂತ್ರಿ ಮತ್ತು ಸಚಿವರನ್ನು ಮೆನ್ಷನ್ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಇನ್ನೂ ಕೆಲವು ಟ್ವೀಟಿಗರೂ ಇದಕ್ಕೆ ಬೆಂಬಲ ಸೂಚಿಸಿ ಜ್ಯೋತಿರಾಜ್ ಪರ ದನಿಗೂಡಿಸಿದ್ದಾರೆ.

    ‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

    31 ಪ್ರಯಾಣಿಕರಿದ್ದ ಬಸ್ ಚಾಲಕನಿಗೆ ಹೃದಯಾಘಾತ; ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್..

    ಜಾಗಿಂಗ್ ಮಾಡುತ್ತಲೇ ಕುಸಿದು ಬಿದ್ದ ಏರ್​ಫೋರ್ಸ್ ಅಧಿಕಾರಿ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts